Digital Payment: ಕರ್ನಾಟಕದ ಗ್ರಾಮಗಳಲ್ಲಿ ಡಿಜಿಟಲ್‌ ಪಾವತಿ ಹೆಚ್ಚಳಕ್ಕೆ ವಾಟ್ಸಾಪ್‌ ಕ್ರಮ!

* ಕರ್ನಾಟಕ, ಮಹಾರಾಷ್ಟ್ರದ 500 ಗ್ರಾಮಗಳಲ್ಲಿ ಯೋಜನೆ ಜಾರಿ.

* ಕರ್ನಾಟಕದ ಗ್ರಾಮಗಳಲ್ಲಿ ಡಿಜಿಟಲ್‌ ಪಾವತಿ ಹೆಚ್ಚಳಕ್ಕೆ ವಾಟ್ಸಾಪ್‌ ಕ್ರಮ

* ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಿಂದ ಯೋಜನೆ ಆರಂಭ

WhatsApp empowers 500 villages in Karnataka Maharashtra with access to digital payments pod

ನವದೆಹಲಿ(ಡಿ.16): ಖ್ಯಾತ ಮೆಸೆಂಜಿಂಗ್‌ ವೇದಿಕೆ ವಾಟ್ಸಾಪ್‌, ದೇಶದ ಗ್ರಾಮೀಣ ಭಾಗದಲ್ಲಿ ಡಿಜಿಟಲ್‌ ಪಾವತಿ ಹೆಚ್ಚಿಸಲು ಮತ್ತು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರದ 500 ಗ್ರಾಮಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿರುವುದಾಗಿ ಹೇಳಿದೆ. ವಾಟ್ಸಾಪ್‌ ಪೇಮೆಂಟ್‌ ಮೂಲಕ ಡಿಜಿಟಲ್‌ ಪಾವತಿಯನ್ನು ಹೆಚ್ಚಿಸಲು ಈ ಯೋಜನೆ ಆರಂಭಿಸಲಾಗಿದೆ ಎಂದು ಮೆಟಾ, ಫä್ಯಯೆಲ್‌ ಫಾರ್‌ ಇಂಡಿಯಾ- 2021 ಕಾರ್ಯಕ್ರಮದಲ್ಲಿ ಹೇಳಿದೆ.

‘ಡಿಜಿಟಲ್‌ ಪಾವತಿಗೆ ಹೆಚ್ಚಿನ ಜನರು ಭಾಗವಹಿಸುವಂತೆ ಮಾಡಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 50 ಕೋಟಿ ಜನರನ್ನು ಈ ವಾಟ್ಸಾಪ್‌ ಪೇಮೆಂಟ್‌ ಮೂಲಕ ಡಿಜಿಟಲ್‌ ಪಾವತಿಯಡಿ ತರಲು ಗುರಿ ಹೊಂದಲಾಗಿದೆ. ಡಿಜಿಟಲ್‌ ಪೇಮೆಂಟ್‌ ಉತ್ಸವ್‌ ಹೆಸರಿನ ಈ ಯೋಜನೆಯನ್ನು ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯ ಮೂಲಕ ಅ.15ರಿಂದ ಆರಂಭಿಸಲಾಯಿತು. ಸಣ್ಣ ವ್ಯಾಪಾರಿಗಳು ಈ ಹೊಸ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ’ ಎಂದು ವಾಟ್ಸಾಪ್‌ನ ಭಾರತೀಯ ಮುಖ್ಯಸ್ಥ ಅಭಿಜಿತ್‌ ಬೋಸ್‌ ಹೇಳಿದ್ದಾರೆ.

ವಾಟ್ಸಾಪ್‌ ಈ ಡಿಜಿಟಲ್‌ ಪಾವತಿ ಉತ್ಸವದಲ್ಲಿ ಜನರಿಗೆ UPI ಗೆ ಸೈನ್ ಅಪ್ ಮಾಡುವುದು ಮತ್ತು ಖಾತೆಯನ್ನು ಸೆಟ್‌ ಮಾಡುವುದು ಹೇಗೆ ಎಂಬ ಬಗ್ಗೆ ತಿಳಿಸಲು ಮುಂದಾಗಿದೆ. ಪ್ರಾಯೋಗಿಕ ಕಾರ್ಯಕ್ರಮದ ಅವಧಿಯಲ್ಲಿ ಮಂಡ್ಯ ಜಿಲ್ಲೆ ಕ್ಯಾತನಹಳ್ಳಿ ಗ್ರಾಮದ ಜನರಿಗೆ UPI ಪಾವತಿಗಳನ್ನು ಮಾಡುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಸಿಕ್ಕ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ಸಣ್ಣ ವ್ಯಾಪಾರಗಳಾದ ಕಿರಾಣಿ ಅಂಗಡಿಗಳು, ಕೋಳಿ ಅಂಗಡಿಗಳು ಮತ್ತು ಸಲೂನ್ ಮಾಲೀಕರು ಕಂಪನಿಯ 'ವಾಟ್ಸಾಪ್‌ ಪೇ ಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದೆ.

ಗೌಪ್ಯತೆ ಕಾಪಾಡಲು ವಾಟ್ಸಪ್‌  ಹೊಸ ಅಪ್ಡೇಟ್ಸ್

ಮೆಟಾ-ಫೇಸ್‌ಬುಕ್ (Meta) ಒಡೆತನದ ಮೇಸೆಂಜಿಗ್‌ ಪ್ಲಾಟ್‌ಫಾರ್ಮ್ ವಾಟ್ಸಪ್‌ (WhatsApp) ಜನರು ಸಂದೇಶ ಕಳುಹಿಸಲು ಹೆಚ್ಚಾಗಿ ಬಳಸುವ  ಆ್ಯಪ್‌ಗಳಲ್ಲೊಂದು. ಆದರೆ ಆಗಾಗ ವಾಟ್ಸಪ್‌ ಬಳಕೆದಾರರು ಆ್ಯಪ್‌ನಲ್ಲಿ ಪ್ರೈವಸಿ ಬಗ್ಗೆ ತಕರಾರು ಎತ್ತಿದ್ದುಂಟು. ಈ ಬೆನ್ನಲ್ಲೇ ವಾಟ್ಸಪ್‌ ತನ್ನ ಗೌಪ್ಯತಾ ನೀತಿಗಳನ್ನು (Privacy Policy) ಬಲಪಡಿಸಲು ಹಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಈಗ ಪಟ್ಟಿಗೆ ಸೇರ್ಪಡೆ ಎಂಬಂತೆ ವಾಟ್ಸಪ್‌ ಲಾಸ್ಟ್‌ ಸೀನ್‌ ಸ್ಟೇಟಸ್‌ (Last Seen Status) ಥರ್ಡ್‌ ಪಾರ್ಟಿ ಆ್ಯಪ್‌ಗಳಿಗೂ ಲಭ್ಯವಾಗದಂತಹ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ.

ವಾಟ್ಸಪ್ ಕಳೆದ ಕೆಲವು ದಿನಗಳಲ್ಲಿ ತನ್ನ ಅಪ್ಲಿಕೇಶನ್‌ಗೆ ಹೊಸ ಗೌಪ್ಯತೆ ಅಪ್ಡೇಟ್‌ಗಳನ್ನು ಸೇರಿಸಿದೆ. ಇದರಿಂದ ನಿಮ್ಮ ಆನ್‌ಲೈನ್‌ ಸ್ಟೇಟಸ್‌ ಕದ್ದು ನೋಡುವವರ ಬಗ್ಗೆ ಚಿಂತಿಸದೆ ಚಾಟ್ ಮಾಡಬಹುದು. ಚಾಟ್ ಅಪ್ಲಿಕೇಶನ್ ಈಗಾಗಲೇ ಬಳಕೆದಾರರಿಗೆ ತಮ್ಮ ಲಾಸ್ಟ್‌ ಸೀನ್‌ ಸ್ಟೇಟಸ್ ಮತ್ತು ಆನ್‌ಲೈನ್ ಚಟುವಟಿಕೆಗಳನ್ನು ಎಲ್ಲರಿಂದ ಅಥವಾ ಸಂಪರ್ಕ ಪಟ್ಟಿಯಲ್ಲಿಲ್ಲದ ಜನರಿಂದ ಮರೆಮಾಡಲು ಆಯ್ಕೆಯನ್ನು ನೀಡುತ್ತದೆ. ಆದರೆ ನಿಮ್ಮ ವಾಟ್ಸಪ್ ಚಟುವಟಿಕೆಗಳನ್ನು ನೋಡಬಲ್ಲ ಕೆಲವು ಥರ್ಡ್‌ ಪಾರ್ಟಿ  ಅಪ್ಲಿಕೇಶನ್‌ಗಳಿವೆ (Third Party Application). ಇವುಗಳ ಬಳಕೆಯಿಂದ ನಿಮ್ಮ ಲಾಸ್ಟ್‌ ಸೀನ ಹೈಡ್‌ ಆಗಿದ್ದರೂ ಅದನ್ನು ನೋಡಬಹುದಾಗಿತ್ತು. ಆದರೆ ಹೊಸ ಗೌಪ್ಯತೆ ಕ್ರಮಗಳು ಇಂಥಹ  ಆ್ಯಪ್‌ಗಳಿಗೂ ಕಡಿವಾಣ ಹಾಕಿದೆ.

ಈ ಬಗ್ಗೆ WABetaInfo ಮಾಹಿತಿ ನೀಡಿದ್ದು ಇದು ವಾಟ್ಸಪ್‌ ಕಂಪನಿಯಿಂದ ಪಡೆದ ಇಮೇಲ್ ಪ್ರತಿಕ್ರಿಯೆಯ ಪ್ರತಿಯೊಂದನ್ನು ಹಂಚಿಕೊಂಡಿದೆ. ಹೊಸ ಗೌಪ್ಯತೆ ವೈಶಿಷ್ಟ್ಯಗಳು ಬಿಸಿನೆಸ್‌ ಅಕೌಂಟ್‌ ಸೇರಿದಂತೆ  ಈಗ ಎಲ್ಲಾ ವಾಟ್ಸಪ್ ಸಂಪರ್ಕಗಳಿಗೆ ಅನ್ವಯವಾಗಲಿದೆ ಎಂದು ಇಮೇಲ್ ನಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios