ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, 8 ಮೋಡ್‌ನಲ್ಲಿ ಫೋಟೋ! ಅಗ್ಗದ ಮೊಬೈಲ್ ಮಾರುಕಟ್ಟೆಗೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Jan 2019, 8:06 PM IST
Honor Mobiles To Launch Honor 10 Lite Smartphone in India
Highlights

ಭಾರತದಲ್ಲಿ ಮೊಬೈಲ್ ಫೋನ್ ಕಂಪನಿಗಳಿಗೆ ಕೊರತೆಯಿಲ್ಲ. ಆದರೆ, ಮಧ್ಯಮ ಶ್ರೇಣಿಯಲ್ಲಿ, ಮೊಬೈಲ್  ಫೋನ್‌ಗಳನ್ನು ಖರಿದಿಸಬೇಕಾದರೆ ತುಸು ಸರ್ಕಸ್ ಮಾಡ್ಲೇಬೇಕು.  ಇದೀಗ, ಹೊಸ ವರ್ಷಾರಾಂಭದಲ್ಲೇ ಕೈಗೆಟಕುವ ದರವಿರುವ ಫೋನ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಇಲ್ಲಿದೆ ವಿವರ...

ಹೊಸ ವರ್ಷದ ಆರಂಭದಲ್ಲೇ Honor ಹೊಸ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುತ್ತಿದೆ. ಅದರ ಹೆಸರು Honor 10 Lite. ಈಗಾಗಲೇ Honor 10 ಜನರ ಕೈಯಲ್ಲಿದೆ. ಅದರ ಇಂಪ್ರೂವ್ಡ್ ವರ್ಷನ್‌ Honor 10 Lite ಜನವರಿ 15ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. 

Honor 10 Lite ಚೀನಾದಲ್ಲಿ ಈಗಾಗಲೇ ಮಾರುಕಟ್ಟೆಗೆ ಬಂದಿದೆ. ಅಲ್ಲಿ ಇದರ ಬೆಲೆ ಸುಮಾರು 14,500 ರೂಪಾಯಿ. ಭಾರತದಲ್ಲೂ ಕಡಿಮೆ ಬೆಲೆಗೆ ಈ ಮೊಬೈಲ್‌ ಸಿಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಭೂಮಿಗೆ 'ಎಲ್ಲಿಂದಲೋ' ಬರುತ್ತಿರುವ ರೇಡಿಯೋ ಸಿಗ್ನಲ್: ಕೇಳಿಸಿಕೊಂಡವರ ಎದೆ ಝಲ್!

ಏನಿದೆ Honor 10 Liteನಲ್ಲಿ?

4 GB RAM, 64 GB ಸ್ಟೋರೇಜ್‌ ಹೊಂದಿರುವ ಮೊಬೈಲ್‌ ಇದು. ಆಕ್ಟಾಕೋರ್‌ ಕಿರಿನ್‌ 710 ಪ್ರೊಸೆಸರ್‌ ಇದೆ. ಫ್ರಂಟ್‌ ಕ್ಯಾಮೆರಾ 24 ಮೆಗಾ ಪಿಕ್ಸೆಲ್‌ ಇದೆ. ಅಲ್ಲದೇ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ ಹೊಂದಿರುವುದರಿಂದ ವಿಶೇಷವಾದ ಫೀಚರ್‌ಗಳು ಲಭ್ಯವಿದೆ. 8 ಮೋಡ್‌ಗಳಲ್ಲಿ ಫೋಟೋಗಳನ್ನು ತೆಗೆಯಬಹುದಾಗಿದೆ. 13 ಮೆಗಾ ಪಿಕ್ಸೆಲ್‌ ರೇರ್‌ ಕ್ಯಾಮೆರಾ ಇದೆ. ಇಂಟರೆಸ್ಟಿಂಗ್‌ ಅಂದ್ರೆ 3,400 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಇರುವುದರಿಂದ ದೀರ್ಘಕಾಲ ಮೊಬೈಲ್‌ ಬ್ಯಾಟರಿ ಇರಲಿದೆ.

ಇದನ್ನೂ ಓದಿ: ಏನೆಲ್ಲಾ ಮಾಡ್ಬೇಕೋ ಮಾಡ್ಬಿಡಿ: ನಮ್ ಗ್ಯಾಲಕ್ಸಿ ಹೊತ್ತಿ ಉರಿಯಲಿದೆ!

ಕಡಿಮೆ ಬೆಲೆಯಲ್ಲಿ Honor 10 Lite ಲಭ್ಯವಾಗಬಹುದು ಅನ್ನುವ ನಿರೀಕ್ಷೆ ಇರುವುದರಿಂದ ಬೇರೆ ಮೊಬೈಲ್‌ ಕಂಪನಿಗಳ ಜೊತೆ ಸ್ಪರ್ಧೆಯೊಡ್ಡುವ ಚಾನ್ಸು ಹೆಚ್ಚಿದೆ. ಜ.15ರಂದು ಇದರ ಬೆಲೆ ನಿಗದಿಯಾಗಲಿದೆ.

loader