ಭೂಮಿಗೆ 'ಎಲ್ಲಿಂದಲೋ' ಬರುತ್ತಿರುವ ರೇಡಿಯೋ ಸಿಗ್ನಲ್: ಕೇಳಿಸಿಕೊಂಡವರ ಎದೆ ಝಲ್!

ಖಗೋಳ ವಿಜ್ಞಾನಿಗಳನ್ನು ಬೆಚ್ಚಿ ಬೀಳಿಸಿದ ಅನಾಮಿಕ ರೇಡಿಯೋ ಸಿಗ್ನಲ್| ಬ್ರಹ್ಮಾಂಡದ ಗೊತ್ತಿಲ್ಲದ ಪ್ರದೇಶದಿಂದ ನಿರಂತರವಾಗಿ ಬರುತ್ತಿರುವ ರೇಡಿಯೋ ಸಿಗ್ನಲ್| ಹಾಲು ಹಾದಿ ಗ್ಯಾಲಕ್ಸಿಯ ಹೊರಗಿನ ಭಾಗದಿಂದ ಬರುತ್ತಿರುವ ರೇಡಿಯೋ ಸಿಗ್ನಲ್| ಅತ್ಯಂತ ವೇಗವಾಗಿ ಚಲಿಸುತ್ತಿರುವ ರೇಡಿಯೋ ಸಿಗ್ನಲ್‌ಗಳು

Scientists Receiving Radio Waves From Deep Space

ಒಟ್ಟವಾ(ಜ.10): ಬ್ರಹ್ಮಾಂಡದ ಗೊತ್ತಿಲ್ಲದ ಪ್ರದೇಶದಿಂದ ನಿರಂತರವಾಗಿ ರೇಡಿಯೋ ಸಿಗ್ನಲ್‌ಗಳು ಬರುತ್ತಿರುವುದರ ಕುರಿತು ಕೆನಡಾದ ಖಗೋಳ ಶಾಸ್ತ್ರಜ್ಞರು ಧೃಢೀಕರಿಸಿದ್ದಾರೆ.

ನಮ್ಮ ಕ್ಷಿರಪಥ ಗ್ಯಾಲಕ್ಸಿಯ ಹೊರಗಿನ ಪ್ರದೇಶದಿಂದ ಈ ರೇಡಿಯೋ ಸಿಗ್ನಲ್‌ಗಳು ಬರುತ್ತಿದ್ದು, ಖಗೋಳ ಶಾಸ್ತ್ರಜ್ಞರನ್ನು ಅಚ್ಚರಿ ಮತ್ತು ಆತಂಕಕ್ಕೆ ದೂಡಿದೆ.

ಈ ಕುರಿತು ಮಾಹಿತಿ ನೀಡಿರುವ ಬ್ರಟಿಷ್ ಕೋಲಂಬಿಯಾ ವಿವಿಯ ಸಂಶೋಧಕ ಡೆಬೋರಾ ಗುಡ್, ಈ ರೇಡಿಯೋ ಸಿಗ್ನಲ್‌ಗಳ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

ಹಾಲು ಹಾದಿ ಗ್ಯಾಲಕ್ಸಿಯ ಹೊರಗಿನ ಭಾಗದಿಂದ ಈ ರೇಡಿಯೋ ಸಿಗ್ನಲ್‌ಗಳು ಬರುತ್ತಿದ್ದು, ಅತ್ಯಂತ ವೇಗವಾಗಿ ಚಲಿಸುತ್ತಿರುವ ಈ ಸಿಗ್ನಲ್‌ಗಳು ನಿಜಕ್ಕೂ ಅಚ್ಚರಿ ಮೂಡಿಸುವಂತವು ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios