ಭಾರತದಲ್ಲಿ ಟಿಕ್‌ಟಾಕ್ ಆ್ಯಪ್ ಅದೆಷ್ಟು ಪ್ರಸಿದ್ದಿಯಾಗಿದೆಯೋ ಅಷ್ಟೇ ಅನಾಹುತಗಳನ್ನು ಸೃಷ್ಟಿಸಿದೆ. ಇದೀಗ ಟಿಕ್‌ಟಾಕ್ ಆ್ಯಪ್ ಹೊಸ ವಿವಾದಕ್ಕೆ ಗುರಿಯಾಗಿದೆ.  

ನವದೆಹಲಿ(ಜು.11): ಭಾರತದಲ್ಲಿ ಟಿಕ್‌ಟಾಕ್ ಆ್ಯಪ್ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಹೀಗಾಗಿ ನಿಷೇಧಕ್ಕೂ ಒಳಗಾಗಿತ್ತು. ಆದರೆ ಇದೀಗ ಟಿಕ್‌ಟಾಕ್ ಆ್ಯಪ್ ಹೊಸ ವಿವಾದ ಸೃಷ್ಟಿಸಿದೆ. ಟಿಕ್‌ಟಾಕ್ ಆ್ಯಪ್ ಜಿಹಾದ್‌ ಹಾಗೂ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಹೀಗಾಗಿ ತಕ್ಷಣವೇ ಟಿಕ್‌ಟಾಕ್ ಆ್ಯಪ್ ನಿಷೇಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ರಿಗೆ ಮನವಿ ಮಾಡಲಾಗಿದೆ. 

ಇದನ್ನೂ ಓದಿ: ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ದಾಳಿ! ನಿಮ್ದು ಸೇಫ್ ಇದಿಯಾ ನೋಡಿ...

ಸಾಮಾಜಿಕ ಜಾಲತಾಣದಲ್ಲಿ ಇದೀಗ ಟಿಕ್‌ಟಾಕ್ ನಿಷೇಧಿಸುವಂತೆ ಅಭಿಯಾನ ಆರಂಭಗೊಂಡಿದೆ. ಹಲವರು ಮೋದಿ ಹಾಗೂ ರವಿಶಂಕರ್ ಪ್ರಸಾದ್‌ಗೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಜಾರ್ಖಂಡ್‌ನಲ್ಲಿ ಹತ್ಯೆಯಾದ ತ್ರಬೈಝ್ ಅನ್ಸಾರಿ ಪರ ಕೆಲ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಟಿಕ್‌ಟಾಕ್‌ನಲ್ಲಿ ಜಿಹಾದ್‌ಗೆ ಪ್ರಚೋದನೆ ನೀಡುವಂತೆ ವಿಡಿಯೋಗಳನ್ನು ಹರಿಬಿಡಲಾಗಿತ್ತು. ಈ ಕುರಿತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದರಿಂದ ಆಕ್ರೋಶಗೊಂಡ ಹಲವರು ಟಿಕ್‌ಟಾಕ್ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…