Asianet Suvarna News Asianet Suvarna News

Location sharing ಆಫ್ ಮಾಡಿದ್ದರೂ ಜಾಹೀರಾತುದಾರರೊಂದಿಗೆ ಲೊಕೇಶನ್‌ ಹಂಚಿಕೊಳ್ಳುತ್ತಿರುವ Google!

ಬಳಕೆದಾರರು ಲೋಕೆಶನ್‌ ಶೇರಿಂಗ್ ಆಫ್ ಮಾಡಿದರೂ ಗೂಗಲ್ ಬಳಕೆದಾರರ ಸ್ಥಳಗಳನ್ನು ಹಂಚಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದ್ದು ಸರ್ಚ್ ದೈತ್ಯ ವಿರುದ್ಧ ದಾಖಲಿಸಲಾದ ಹೊಸ ಮೊಕದ್ದಮೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ.

Google reportedly shares your location even if you turn off says US Lawsuit mnj
Author
Bengaluru, First Published Jan 25, 2022, 3:06 PM IST | Last Updated Jan 25, 2022, 3:06 PM IST

Tech Desk: ಬಳಕೆದಾರರು ಲೊಕೇಶನ್‌ ಶೇರಿಂಗ್ (Location Sharing) ಆಫ್ ಮಾಡಿದರೂ ಬಳಕೆದಾರರ ಸ್ಥಳಗಳನ್ನು ಗೂಗಲ್‌ ಶೇರ್‌ ಮಾಡುತ್ತದೆ ಎಂದು ಆರೋಪಿಸಲಾಗಿದೆ. ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಅಟಾರ್ನಿ ಜನರಲ್ ಕಾರ್ಲ್ ಎ. ರೇಸಿನ್ (ಡಿ) ನೇತೃತ್ವದಲ್ಲಿ ಮೂರು ಯುಎಸ್ ರಾಜ್ಯಗಳ ನಾಲ್ವರು ಅಟಾರ್ನಿ ಜನರಲ್‌ಗಳು ಗೂಗಲ್ ವಿರುದ್ಧ ಹೊಸ ಮೊಕದ್ದಮೆಯನ್ನು (Lawsuit)  ಹೂಡಿದ್ದಾರೆ. ಗ್ರಾಹಕರು ತಮ್ಮ ಲೋಕೆಶನ್ ಹೇಗೆ ಟ್ರ್ಯಾಕ್ ಮಾಡುತ್ತಾರೆ ಮತ್ತು ಕಂಪನಿಯು ಅದನ್ನು ಹೇಗೆ ಬಳಸುತ್ತದೆ  ಜತೆಗೆ ಟ್ರ್ಯಾಕಿಂಗ್ ಆಫ್‌ (Tracking Off) ಮಾಡಿದಾಗ  ಬಳಕೆದಾರರು ತಮ್ಮ ಗೌಪ್ಯತೆಯನ್ನು ಕಾಪಾಡಯವ ಸಾಮರ್ಥ್ಯದ ಬಗ್ಗೆ ಗೂಗಲ್ ಗ್ರಾಹಕರನ್ನು ವಂಚಿಸಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ತಮ್ಮ ಡೇಟಾದ ಯಾವ ಭಾಗವನ್ನು ಕಂಪನಿಯು ಸಂಗ್ರಹಿಸುತ್ತಿದೆ ಮತ್ತು ಗೂಗಲ್ ಮಾಹಿತಿಯನ್ನು ಹೇಗೆ ಬಳಸುತ್ತದೆ ಎಂಬುದರ ಸಂಪೂರ್ಣ ನಿಯಂತ್ರಣವನ್ನು ಬಳಕೆದಾರರು ಹೊಂದಿದ್ದಾರೆ ಎಂದು ಗೂಗಲ್‌ ನಂಬುವಂತೆ ಮಾಡುತ್ತದೆ. ಆದರೆ ಗೂಗಲ್ ಉತ್ಪನ್ನಗಳನ್ನು ಬಳಸುವ ಬಳಕೆದಾರರು‌ ಗೂಗಲ್ ತಮ್ಮ ಲೋಕೇಶನ್ ಸಂಗ್ರಹಿಸುವುದು, ಸ್ಟೋರ್‌ ಮಾಡುವುದು ಮತ್ತು ಅದರಿಂದ ಲಾಭ ಗಳಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಕಂಡುಬಂದಿದೆ  ಎಂದು ಮೊಕದ್ದಮೆಯಲ್ಲಿ ಆರೋಪಿಸಿಲಾಗಿದೆ.

ಇದನ್ನೂ ಓದಿ: Search Engine ವ್ಯವಹಾರದಿಂದ Apple ದೂರವಿಡಲು Googleನಿಂದ ಬಿಲಿಯನ್‌ಗಟ್ಟಲೆ ಹಣ ಸಂದಾಯ!

ಜಾಹೀರಾತಿಗಾಗಿ ಡೇಟಾ: ತನ್ನ ವ್ಯಾಪಾರವನ್ನು ಮತ್ತಷ್ಟು ಬೆಳೆಸಲು, ಗ್ರಾಹಕರು ಗೂಗಲ್ ಉತ್ಪನ್ನಗಳನ್ನು ಬಳಸುವಾಗ ಲೋಕೆಶನ್ ಡೇಟಾ ಸೇರಿದಂತೆ ಗ್ರಾಹಕರ ವೈಯಕ್ತಿಕ ಡೇಟಾವನ್ನು ಗೂಗಲ್ ಸಂಗ್ರಹಿಸುತ್ತದೆ ಎಂದು ವರದಿಯು ಹೇಳುತ್ತದೆ. ಕಂಪನಿಯು ನಂತರ ಗ್ರಾಹಕರಿಗೆ ಸೂಕ್ತ ಜಾಹೀರಾತುಗಳನ್ನು‌  ಗುರಿಯಾಗಿಸಲು ಈ ಡೇಟಾವನ್ನು ಬಳಸುತ್ತದೆ ಎಂದು ಆರೋಪಿಸಲಾಗಿದೆ.

“ತಮ್ಮ ಖಾತೆ ಮತ್ತು ಸಾಧನದ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದರಿಂದ ಗ್ರಾಹಕರು ತಮ್ಮ ಗೌಪ್ಯತೆಯನ್ನು ರಕ್ಷಿಸಲು ಮತ್ತು ಕಂಪನಿಯು  ವೈಯಕ್ತಿಕ ಡೇಟಾವನ್ನು ನಿಯಂತ್ರಿಸಲು ಅನುಮತಿಸುತ್ತದೆ ಎಂದು ಗ್ರಾಹಕರು ತಪ್ಪಾಗಿ ನಂಬುವಂತೆ ಗೂಗಲ್‌ ಮಾಡಿದೆ. ಆದರೆ  ಸತ್ಯವೇನೆಂದರೆ ಗೂಗಲ್‌ನ ನಿಯಮಗಳಿಗೆ ವಿರುದ್ಧವಾಗಿ, ಇದು ವ್ಯವಸ್ಥಿತವಾಗಿ ಗ್ರಾಹಕರನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಮತ್ತು ಗ್ರಾಹಕರ ಡೇಟಾದಿಂದ ಲಾಭವನ್ನು ಪಡೆಯುತ್ತದೆ, ”ಎಂದು ಡಿಸಿ ಅಟಾರ್ನಿ ಜನರಲ್ ಕಾರ್ಲ್ ರೇಸಿನ್ (Karl Racine) ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Alphabet Privacy lawsuit: ಗೌಪ್ಯತಾ ನೀತಿ ಉಲ್ಲಂಘನೆ ಆರೋಪ: ಸಿಇಓ ಸುಂದರ್ ಪಿಚೈ ವಿಚಾರಣೆ!

ತನ್ನ ಲೋಕೇಶನ್ ಡೇಟಾ ಸಂಗ್ರಹಣೆ ಕಾರ್ಯವಿಧಾನದ ವಿವರಗಳನ್ನು ಮರೆಮಾಚಲು ಮತ್ತು ಗ್ರಾಹಕರು ಟ್ರ್ಯಾಕ್ ಮಾಡುವ ಆಯ್ಕೆಯಿಂದ ಹೊರಗುಳಿಯಲು ಕಷ್ಟವಾಗುವಂತೆ ಮಾಡಲು ಗೂಗಲ್ ಪ್ರಬಲವಾದ ಆರ್ಥಿಕ ಪ್ರೋತ್ಸಾಹವನ್ನು ಹೊಂದಿದೆ ಎಂಬ ಆರೋಪವು ಗೂಗಲ್‌ ಮೇಲಿದೆ. 

ಆರೋಪ ಸುಳ್ಳು: ಮೊಕದ್ದಮೆಗೆ ಪ್ರತಿಕ್ರಿಯಿಸಿದ ಗೂಗಲ್‌ ವಕ್ತಾರರು ಮೊಕದ್ದಮೆಯಲ್ಲಿ ಮಾಡಿದ ಆರೋಪಗಳನ್ನು ನಿರಾಕರಿಸಿದ್ದಾರೆ. "ಅಟಾರ್ನಿ ಜನರಲ್ ಅವರು ನಮ್ಮ ಸೆಟ್ಟಿಂಗ್‌ಗಳ ಬಗ್ಗೆ ತಪ್ಪಾದ ಆರೋಪಗಳು ಮತ್ತು ಹಳೆಯ ಸಮರ್ಥನೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲು ಹೊರಟಿದ್ದಾರೆ.  ನಾವು ಯಾವಾಗಲೂ ನಮ್ಮ ಉತ್ಪನ್ನಗಳಲ್ಲಿ ಗೌಪ್ಯತೆಯ ವೈಶಿಷ್ಟ್ಯಗಳನ್ನು ನೀಡಿದ್ದೇವೆ ಮತ್ತು ಲೋಕೇಶನ್ ಡೇಟಾಕ್ಕಾಗಿ ನಿಯಂತ್ರಣಗಳನ್ನು ಕೂಡ ಒದಗಿಸಿದ್ದೇವೆ" ಎಂದು ಗೂಗಲ್ ನೀತಿಯ (Google Policy) ವಕ್ತಾರ ಜೋಸ್ ಕ್ಯಾಸ್ಟನೆಡಾ (José Castañeda) ಹೇಳಿದ್ದಾರೆ ಎಂದು ದಿ ವರ್ಜ್ ಉಲ್ಲೇಖಿಸಿದೆ.

Latest Videos
Follow Us:
Download App:
  • android
  • ios