Asianet Suvarna News Asianet Suvarna News

Google Moves Karnataka HC: CCI ತನಿಖೆಯ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಗೂಗಲ್!

ಭಾರತದ ಸ್ಪರ್ಧಾತ್ಮಕ ಆಯೋಗವು (CCI) ಈ ಹಿಂದೆ ನವೆಂಬರ್ 19 ರೊಳಗೆ ಗೂಗಲ್‌ಗೆ ಪ್ರತಿಕ್ರಿಯೆ ನೀಡುವಂತೆ ಕೋರಿತ್ತು.  ಆದರೆ ಗೂಗಲ್ ಉತ್ತರಿಸಲು ಇನ್ನೂ ಎಂಟು ವಾರಗಳ ಕಾಲ ಅವಕಾಶ ಕೋರಿದೆ.

Google moves Karnataka HC against CCIs probe into Play Store rules mnj
Author
Bengaluru, First Published Dec 28, 2021, 12:37 PM IST
  • Facebook
  • Twitter
  • Whatsapp

ನವದೆಹಲಿ(ಡಿ. 28): ತನ್ನ ಪ್ಲೇ ಸ್ಟೋರ್ ನಿಯಮಗಳಿಗೆ ಸ್ಪರ್ಧಾತ್ಮಕ ಆಯೋಗದ (Competition Commission) ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಹೆಚ್ಚಿನ ಸಮಯ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಗೂಗಲ್ ರಿಟ್ ಅರ್ಜಿ (Writ Petition) ಸಲ್ಲಿಸಿದೆ. ಭಾರತದಲ್ಲಿ ತನ್ನ ಇತ್ತೀಚಿನ ಪ್ಲೇ ಸ್ಟೋರ್ ನೀತಿಯ (Play Store rules)  ಅನುಷ್ಠಾನವನ್ನು ಅಕ್ಟೋಬರ್ 31, 2022 ರವರೆಗೆ ಸ್ವಯಂಪ್ರೇರಣೆಯಿಂದ ವಿಳಂಬಗೊಳಿಸಿರುವುದರಿಂದ, ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಯಾವುದೇ ಗಡಿಬಿಡಿ ಇಲ್ಲ ಎಂದು ಕಂಪನಿ ವಾದಿಸಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಮಿತಿಯಲ್ಲಿ ನ್ಯಾಯಾಂಗ ಸದಸ್ಯರನ್ನು ನೇಮಿಸುವಂತೆಯೂ ಕಂಪನಿ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.‌

ಮಧ್ಯಂತರ ಪರಿಹಾರಕ್ಕಾಗಿ ಅಲೈಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ (ADIF) ಅಕ್ಟೋಬರ್‌ನಲ್ಲಿ ಸಿಸಿಐನಲ್ಲಿ ಅರ್ಜಿ ಸಲ್ಲಿಸಿದೆ. ಮೂಲಗಳ ಪ್ರಕಾರ, ಡಿಸೆಂಬರ್ 31 ರೊಳಗೆ ಅದರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಂತೆ ಆಂಟಿ-ಟ್ರಸ್ಟ್ ರೆಗುಲೇಟರ್ ಗೂಗಲ್‌ಗೆ ಒತ್ತಡ ಹೇರುತ್ತಿದೆ. ಭಾರತದ ಸ್ಪರ್ಧಾತ್ಮಕ ಆಯೋಗವು ಈ ಹಿಂದೆ ನವೆಂಬರ್ 19 ರೊಳಗೆ ಗೂಗಲ್‌ಗೆ ಪ್ರತಿಕ್ರಿಯೆ ನೀಡುವಂತೆ ಕೋರಿತ್ತು. ಆದರೆ ಗೂಗಲ್ ಉತ್ತರಿಸಲು ಇನ್ನೂ ಎಂಟು ವಾರಗಳ ಕಾಲ ಅವಕಾಶ ಕೋರಿದೆ.

ಸಿಐಯ ತನಿಖಾ ಪ್ರಕ್ರಿಯೆಯನ್ನು ಗೌರವಿಸುತ್ತೇವೆ!

"ಸಿಸಿಐನಿಂದ ಗೂಗಲ್ ಪ್ಲೇ ತನಿಖೆಯಲ್ಲಿ ಮಧ್ಯಂತರ ಪರಿಹಾರ ಅರ್ಜಿಯ ಕುರಿತು ನಾವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅನ್ನು ಸಲ್ಲಿಸಿದ್ದೇವೆ. ಈ ಬೆನ್ನಲ್ಲೇ ಕಾನೂನು  ಪ್ರಕ್ರಿಯೆಗಳಿಗುಣವಾಗಿ  ಮುಂದುವರಿಯಲು ಬಯಸುತ್ತೇವೆ. ನ್ಯಾಯಯುತ ತನಿಖೆಯ ಹಿತಾಸಕ್ತಿಯಿಂದ, ನಾವು ಸಿಸಿಐಯ ತನಿಖಾ ಪ್ರಕ್ರಿಯೆಯನ್ನು ಗೌರವಿಸುತ್ತೇವೆ ಮತ್ತು  ಈ ಪ್ರಕ್ರಿಯೆಯಲ್ಲಿ ಸಹಕಾರ ನೀಡುವುದರ ಜತೆಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ" ಎಂದು ಗೂಗಲ್‌  ವಕ್ತಾರರು ತಿಳಿಸಿರುವದಾಗಿ ET Times ವರದಿ ಮಾಡಿದೆ. 

ಗೂಗಲ್‌ನ ಪಾವತಿ ನೀತಿಗಳನ್ನು ಸ್ಪರ್ಧಾತ್ಮಕ-ವಿರೋಧಿ ಎಂದು ಕರೆದಿರುವ ಭಾರತೀಯ ಇಂಟರ್ನೆಟ್ ಸ್ಟಾರ್ಟ್‌ಅಪ್‌ಗಳಿಂದ (Indian Startup) ಗೂಗಲ್ ಕಠಿಣ ವಿರೋಧವನ್ನು ಎದುರಿಸುತ್ತಿದೆ.‌ ಹಾಗಾಗಿ ಈ ತಿಂಗಳ ಆರಂಭದಲ್ಲಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿನ ಖರೀದಿಗಳಿಗೆ ಪರಿಷ್ಕೃತ ನೀತಿಯನ್ನು ಅನುಸರಿಸಲು ಡೆವಲಪರ್‌ಗಳಿಗೆ ಇನ್ನೂ ಆರು ತಿಂಗಳ ಕಾಲಾವಕಾಶವನ್ನು ನೀಡುತ್ತಿದೆ ಎಂದು ಹೇಳಿದೆ.  
ರಿಕರಿಂಗ್ ಡಿಜಿಟಲ್ ಪಾವತಿಗಳ ಬಗೆಗಿನ (ಆಟೋಮೆಟಿಕ್‌ ಪಾವತಿ)  ಕೇಂದ್ರೀಯ ಬ್ಯಾಂಕ್‌ನ ಇತ್ತೀಚಿನ  ಮಾರ್ಗಸೂಚಿಗಳಿಗೆ ಪರಿಷ್ಕರಣೆಯ ಬೆನ್ನಲ್ಲೇ ಗೂಗಲ್‌ ಈ ಕ್ರಮ ಕೈಗೊಂಡಿದೆ. ಅಕ್ಟೋಬರ್ 31, 2022 ರಂದು ಜಾರಿಗೆ ಬರಲಿರುವ ಗೂಗಲ್‌ನ ಈ ನೀತಿಯು ಭಾರತದಲ್ಲಿ ಡೆವಲಪರ್‌ಗಳಿಗೆ  ಪಾವತಿ ಮಾಡಲು ಅಗತ್ಯವಾದ ಬೆಂಬಲವನ್ನು ಒದಗಿಸುತ್ತದೆ.

ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ವರದಿ ಪಡೆಯುತ್ತಿರುವ ಸಿಸಿಐ

ಆ್ಯಪ್ ಡೆವಲಪರ್‌ಗಳಿಂದ ಗೂಗಲ್ "ಭಾರೀ" ಕಮಿಷನ್ ಪಡೆಯುತ್ತದೆ ಎಂಬ ಆರೋಪವನ್ನು ತನಿಖೆ ನಡೆಸುತ್ತಿರುವ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI), ಎಜುಕೇಶನ್‌ ಟೆಕ್ ದೈತ್ಯ Uncademy, ಡೇಟಿಂಗ್ ಅಪ್ಲಿಕೇಶನ್‌ಗಳು TrulyMadly ಮತ್ತು Tinder, Shaadi.com ಮತ್ತು BharatMatrimony ನಂತಹ ಮ್ಯಾಟ್ರಿಮೋನಿ ಸೈಟ್‌ಗಳು ಸೇರಿದಂತೆ‌  ಕೆಲವು OTT ಪ್ಲಾಟ್‌ಫಾರ್ಮ್‌ಗಳು ಮತ್ತು ಆನ್‌ಲೈನ್ ಗೇಮಿಂಗ್ ಉದ್ಯಮ ಸಂಸ್ಥೆಗಳಿಂದ ವರದಿಗಳನ್ನು ಕೇಳುತ್ತಿದೆ. 

ಜೂನ್‌ನಿಂದ CCI, ಗೂಗಲ್ ಕಂಪನಿಯ ಆಪ್ ಸ್ಟೋರ್ ನೀತಿಯು ಅವರ ವ್ಯವಹಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ  ಎಂದು ವಿವರಿಸಲು 10ಕ್ಕೂ ಹೆಚು  ಸ್ಟಾರ್ಟ್‌ಅಪ್‌ಗಳನ್ನು ಕೇಳಿದೆ. ಈ ಸ್ಟಾರ್ಟ್‌ಅಪ್‌ಗಳಿಗೆ ಕಳುಹಿಸಲಾದ ವಿವರವಾದ ಪ್ರಶ್ನಾವಳಿಯಲ್ಲಿ, CCI ಅವರ ಹಣಕಾಸು ವ್ಯವಹಾರ ಮತ್ತು ಗೂಗಲ್  ಪ್ಲೇಸ್ಟೋರ್ ಪಡೆಯುವ ಕಮಿಷನ್ ಪ್ರಭಾವ, ನಿರ್ವಹಣೆಯ ರಚನೆ (Management) ಮತ್ತು ಅವರ ಅಪ್ಲಿಕೇಶನ್‌ಗಳನ್ನು ಗೂಗಲ್ ಹೊರತುಪಡಿಸಿ ಇತರ ಅಪ್ಲಿಕೇಶನ್ ಸ್ಟೋರ್‌ಗಳಿಂದ ಡೌನ್‌ಲೋಡ್ ಮಾಡಲಾಗಿದೆಯೇ ಎಂಬುದರ ಕುರಿತು ಮಾಹಿತಿಯನ್ನು ಕೇಳಿದೆ.

ಇದನ್ನೂ ಓದಿ:

1) BMTC Electric Bus: ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಶುರು: ಒಮ್ಮೆ ಚಾರ್ಜ್ ಮಾಡಿದರೆ 120km ಸಂಚಾರ!

2) Top Searched Personalities 2021: ಗೂಗಲ್‌ ಸರ್ಚ್ ಟಾಪ್ 10ನಲ್ಲಿ ರಾಜ್‌ ಕುಂದ್ರಾ, ಆರ್ಯನ್‌ ಖಾನ್!

3) Area Busyness : ನಿಮ್ಮ ನಗರದ ಜನನಿಬಿಡ ಪ್ರದೇಶಗಳ ಮಾಹಿತಿ ನೀಡುತ್ತದೆ ಗೂಗಲ್‌ ಮ್ಯಾಪ್ ಹೊಸ ಫೀಚರ್!

Follow Us:
Download App:
  • android
  • ios