ಕ್ವಾಂಟಮ್ ಚಿಪ್ 'ವಿಲೋ' ಪರಿಚಯಿಸಿದ ಗೂಗಲ್; ಏನಿದರ ಲಾಭ? ಹೇಗೆ ಕೆಲಸ ಮಾಡುತ್ತೆ?
ಗೂಗಲ್ ತನ್ನ ಹೊಸ ಕ್ವಾಂಟಮ್ ಕಂಪ್ಯೂಟಿಂಗ್ ಚಿಪ್ 'ವಿಲೋ'ವನ್ನು ಅನಾವರಣಗೊಳಿಸಿದೆ, ಇದು ಸಂಕೀರ್ಣ ಲೆಕ್ಕಾಚಾರಗಳನ್ನು ಕೆಲವೇ ನಿಮಿಷಗಳಲ್ಲಿ ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಚಿಪ್‌ನಲ್ಲಿನ ದೋಷಗಳನ್ನು ಕಡಿಮೆ ಮಾಡುವ ಹೊಸ ತಂತ್ರಜ್ಞಾನವು ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
ನವದೆಹಲಿ: ಗೂಗಲ್ ಕ್ವಾಂಟಮ್ ಕಂಪ್ಯೂಟಿಂಗ್ ಚಿಪ್ Willow ಪರಿಚಯಿಸಿದೆ. ಗೂಗಲ್ ಸಿಇಓ ಸುಂದರ್ ಪಿಚೈ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ Willow ಪರಿಚಯಿಸುತ್ತಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಟೆಸ್ಲಾ ಮಾಲೀಕ ಎಲಾನ್ ಮಾಸ್ಕ್ ಸಹ Willow ಬಗ್ಗೆ ಆಸಕ್ತರಾಗಿದ್ದು, ಸುಂದರ್ ಪಿಚೈ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಗೂಗಲ್‌ನ ನೂತನ ಕ್ವಾಂಟಮ್ ಕಂಪ್ಯೂಟಿಂಗ್ ಚಿಪ್ ವಿಲೋ, ಅತ್ಯಂತ ಕಠಿಣ ಮತ್ತು ಕ್ಲಿಷ್ಟಮಯವಾದ ಲೆಕ್ಕಾಚಾರಗಳುನ್ನು ಕೆಲವೇ ನಿಮಿಷಗಳಲ್ಲಿ ಪರಿಹರಿಸಲಿದೆ. ವಿಲೋ ಚಿಪ್‌ನ ವೈಶಿಷ್ಟ್ಯಗಳ ಬಗ್ಗೆ ಎಕ್ಸ್ ಖಾತೆಯಲ್ಲಿ ಸುಂದರ್ ಪಿಚೈ ಮಾಹಿತಿ ನೀಡಿದ್ದಾರೆ.
ವಿಲೋ ಚಿಪ್ ಅಧಿಕ ಕ್ವಿಟ್‌ಗಳನ್ನು ಬಳಸೋದರಿಂದ ಸಮಸ್ಯೆ ಅಥವಾ ದೋಷಗಳನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಬಗೆಹರಿಸಬಹುದು. ಇದರಲ್ಲಿ ಎರರ್‌ಗಳನ್ನು ವೇಗವಾಗಿ ಪರಿಹರಿಸಲಾಗುತ್ತದೆ. ಇದನ್ನು ಉದಾಹರಣೆ ಸಹಿತವಾಗಿ ಸುಂದರ್ ಪಿಚೈ ವಿವರಿಸಿದ್ದಾರೆ. ಚಿಪ್‌ಸೆಟ್ 105 ಕ್ವಿಟ್‌ಗಳೊಂದಿಗೆ 5 ನಿಮಿಷದಲ್ಲಿಯೇ ಅತ್ಯಂತ ಜಟಿಲವಾದ ಲೆಕ್ಕಾಚಾರಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ.
ಗೂಗಲ್‌ನ ಕ್ವಾಂಟಮ್ ಎಐ ಘಟಕದ ಮುಖ್ಯಸ್ಥ ಹಾರ್ಟ್‌ಮಟ್ ನೆವೆನ್, ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಗೂಗಲ್‌ನ ಸಾಧನೆ ಮಹತ್ವದ ಕ್ಷಣವಾಗಿದೆ. ಈ ಚಿಪ್ ವೈದ್ಯಕೀಯ ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೀವ್ರ ಬದಲಾವಣೆಗಳನ್ನು ತರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟ್ರೆಡಿಷನಲ್ ಬ್ರೈನರಿ ಕಂಪ್ಯೂಟರ್‌ಗಳಿಗೆ ಹೋಲಿಸಿದರೆ ಕ್ವಾಂಟಮ್ ಕಂಪ್ಯೂಟರ್‌ಗಳಲ್ಲಿ ಕ್ವಿಟ್‌ಗಳನ್ನು ಬಳಸಲಾಗುತ್ತದೆ. ಕ್ವಾಂಟಮ್ ಕಿಟ್ ವೇಗದ ಕೆಲಸಕ್ಕೆ ಹೆಸರುವಾಸಿಯಾಗಿದ್ದು, ಆಕ್ಯೂರೇಟ್ ಮತ್ತು ಸಮಸ್ಯೆ ಪರಿಹರಿಸುವಲ್ಲಿಯೂ ಕೊಂಚ ಸ್ಟ್ರಗಲ್ ಮಾಡುತ್ತದೆ. ಗೂಗಲ್ ಪ್ರಕಾರ, ಈ ಚಿಪ್‌ಸೆಟ್ ಎರರ್ ರೇಟ್ ಕಡಿಮೆ ಮಾಡುವ ನಿಟ್ಟಿನಲ್ಲಿ ಆತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದೆ. ಇದು ರಿಯಲ್ ಟೈಮ್ ಕರೆಕ್ಷನ್ ಜೊತೆಯಲ್ಲಿ ಕ್ವಾಂಟಮ್ ಮಷೀನ್‌ಗಳ ಪ್ರಾಯೋಗಿಕತೆಯನ್ನು ಹೆಚ್ಚಳ ಮಾಡುತ್ತದೆ.
ವಿಲೋ ಚಿಪ್‌ನ ಸಂಪೂರ್ಣ ಸಾಮರ್ಥ್ಯಗಳನ್ನು ಇನ್ನೂ ಪರೀಕ್ಷಿಸಲಾಗಿಲ್ಲ. ಕ್ಲಾಸಿಕ್ ಕಂಪ್ಯೂಟಿಂಗ್‌ಗೆ ಹೋಲಿಸಿದರೆ ವಿಲೋ ಚಿಪ್ ಕಡಿಮೆ ಸಮಯದಲ್ಲಿಯೇ ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ. ಭವಿಷ್ಯದಲ್ಲಿ ತಾಂತ್ರಿಕ ಜಗತ್ತಿನಲ್ಲಿಯೇ ವಿಲೋ ಚಿಪ್ ದೊಡ್ಡಮಟ್ಟದ ಕ್ರಾಂತಿ ಸೃಷ್ಟಿಸಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಈ 6 ಅಪಾಯಕಾರಿ Keywords ಅಪ್ಪಿತಪ್ಪಿಯೂ ಗೂಗಲ್‌ನಲ್ಲಿ ಸರ್ಚ್ ಮಾಡಬೇಡಿ!
ಕ್ಲಾಸಿಕ್ ಬಿಟ್ಸ್ ಯಾವುದೇ ಗಣಿತದ ಲೆಕ್ಕಾಚಾರಕ್ಕಾಗಿ 0 ಅಥವಾ 1 ಯಾವುದೇ ಒಂದು ವ್ಯಾಲ್ಯೂನ್ನು ಬಳಕೆ ಮಾಡಲಾಗುತ್ತದೆ. ಅದೇ ಕ್ಯೂಬಿಟ್ಸ್ ಈ ಎರಡರ ಒಂದೇ ಬಾರಿಗೆ ಅಥವಾ ಬೇರೆ ಬೇರೆಯ ಕಾಂಬಿನೇಷನ್ (00,01,10 ಮತ್ತು 11) ಬಳಕೆ ಮಾಡಬಹುದು. ಈ ಲೆಕ್ಕಾಚಾರದ ವಿಧಾನವು ಕ್ವಾಂಟಮ್ ಕಂಪ್ಯೂಟರ್ ಅನ್ನು ಕ್ಷಣಾರ್ಧದಲ್ಲಿ ಅತ್ಯಂತ ಸಂಕೀರ್ಣವಾದ ಲೆಕ್ಕಾಚಾರಗಳನ್ನು ಪರಿಹರಿಸುವಂತೆ ಮಾಡುತ್ತದೆ. ಇದು ಕ್ಲಾಸಿಕ್ ಅಥವಾ ಸೂಪರ್‌ಕಂಪ್ಯೂಟರ್‌ಗಿಂತ ಹೆಚ್ಚು ಸುಧಾರಿತವಾಗಿಸುತ್ತದೆ.
ಕ್ವಾಂಟಮ್ ಕಂಪ್ಯೂಟಿಂಗ್ ಹಾರ್ಡ್‌ವೇರ್ ಗೂಗಲ್ ನಲ್ಲಿ ವಿಲೋ ಚಿಪ್ ಮಹತ್ವಪೂರ್ಣದ ಡೆವಲಪ್‌ಮೆಂಟ್ ಆಗಿದೆ. ಇದರಲ್ಲಿ ಸೂಪರ್ ಕಂಪ್ಯೂಟಿಂಗ್ ಟ್ರಾಂಸ್ಮೇನ್ ಕ್ಯೂಬಿಟ್ ಬಳಸಲಾಗುತ್ತದೆ. ಇದು ನಿಮಿಷದಲ್ಲಿ ಇಲೊಕ್ಟ್ರಿಕಲ್ ಸರ್ಕಿಟ್ ಆಗಿದ್ದು, ಅಲ್ಟ್ರಾ-ಲೋ ಟ್ರೆಂಪ್ರೆಚರ್‌ನಲ್ಲಿ ಕ್ವಾಂಟಮ್ ಪ್ರಾಪರ್ಟಿಯಲ್ಲಿರುತ್ತದೆ.
ಇದನ್ನೂ ಓದಿ: ಬರುತ್ತಿದೆ OpenAI ಬ್ರೌಸರ್, ಗೂಗಲ್ ಕ್ರೋಮ್ ಪ್ರಾಬಲ್ಯ ಮುಗಿಸುತ್ತಾ ಆರ್ಟಿಫೀಶಿಯಲ್ ಇಂಟಲಿಜೆನ್ಸ್?
We see Willow as an important step in our journey to build a useful quantum computer with practical applications in areas like drug discovery, fusion energy, battery design + more. Details here: https://t.co/dgPuXOoBSZ
— Sundar Pichai (@sundarpichai) December 9, 2024