Asianet Suvarna News Asianet Suvarna News

ಇನ್ಮುಂದೆ ಗೂಗಲ್‌ನಲ್ಲಿ ‘ಇದನ್ನು’ ಹುಡುಕಿದರೆ ಕಥೆ ಅಷ್ಟೇ...

ಮೊದಲೇ ಸುಳ್ಳು ಸುದ್ದಿ, ವದಂತಿಗಳಿಂದ ಹೈರಾಣಾಗಿದ್ದ ಸರ್ಕಾರಕ್ಕೆ ಇನ್ನೊಂದು ತಲೆನೋವು! ಇಂಟರ್ನೆಟ್ ಕಂಪನಿಗಳಿಗೆ ಸಂಕಟ ತಂದಿದೆ ಈ ‘ಹುಡುಕಾಟ’ ! ಇನ್ಮುಂದೆ ಇಂಟರ್ನೆಟ್‌ನಲ್ಲಿ ನೀವು ಇದನ್ನು ಹುಡುಕುವಂಗಿಲ್ಲ! 

Google Facebook Blocking Search Key Words Linked To Child Porn in India
Author
Bengaluru, First Published Dec 24, 2018, 1:03 PM IST

ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರ (ಚೈಲ್ಡ್ ಪೋರ್ನ್)ಗಳಿಗೆ ಕಡಿವಾಣ ಹಾಕುವುದು ತಂತ್ರಜ್ಞಾನ ಕ್ಷೇತ್ರದ ಮುಂದಿರುವ ಒಂದು ಪ್ರಮುಖ ಸವಾಲುಗಳಲ್ಲೊಂದು. ಚೈಲ್ಡ್ ಪೋರ್ನ್ ಕಂಟೆಂಟನ್ನು ನಿಯಂತ್ರಿಸುವಲ್ಲಿ ವಾಟ್ಸಪ್ ವಿಫಲವಾಗಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು.

ಚೈಲ್ಡ್ ಪೋರ್ನ್ ವಿಚಾರವಾಗಿ ಸುಪ್ರೀಂ ಕೋರ್ಟ್ ಕೂಡಾ  ಇಂಟರ್ನೆಟ್ ಕಂಪನಿಗಳ ವಿರುದ್ಧ ಗರಂ ಆಗಿತ್ತು.  ಆ ಬೆನ್ನಲ್ಲೇ, ಇತರ ಸೋಶಿಯಲ್ ಮೀಡಿಯಾ ಹಾಗೂ ಸರ್ಚ್ ಇಂಜಿನ್ ಕಂಪನಿಗಳು ಕೂಡಾ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.

ಇದನ್ನೂ ಓದಿ: ಸಂಗಾತಿಯನ್ನು ಹುಡುಕಲು ಬಂದಿದೆ ಹೊಸ ಆ್ಯಪ್! ಆದ್ರೆ ಇದು ಅಂತಿಂತಹದ್ದಲ್ಲ!

ಫೇಸ್ಬುಕ್‌ನಂತಹ ಸೋಶಿಯಲ್ ಮೀಡಿಯಾ ವೇದಿಕೆಗಳು, ಮೈಕ್ರೋಸಾಫ್ಟ್, ಯಾಹೂ ಮತ್ತು ಗೂಗಲ್‌ನಂತಹ ಸರ್ಚ್ ಇಂಜಿನ್‌ಗಳು ಚೈಲ್ಡ್ ಪೋರ್ನ್‌ಗೆ ಕಡಿವಾಣ ಹಾಕಲು ಹೊಸ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ಚೈಲ್ಡ್ ಪೋರ್ನ್, ಲೈಂಗಿಕ ಹಿಂಸೆಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬ್ಲಾಕ್ ಮಾಡಲು ಸಾಫ್ಟ್‌ವೇರ್ ದೈತ್ಯರು ಮುಂದಾಗಿದ್ದಾರೆ. ಗೃಹ ಇಲಾಖೆ ಹಾಗೂ ಇಲೆಕ್ಟ್ರಾನಿಕ್ಸ್ & ಮಾಹಿತಿ ತಂತ್ರಜ್ಞಾನ ಇಲಾಖೆಯ ಶಿಫಾರಸ್ಸಿನ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. 

ಯಾರಾದರೂ ಅಂತಹ ಕೀವರ್ಡ್‌ಗಳನ್ನು ಹಾಕಿ ಹುಡುಕಾಟ ನಡೆಸಿದರೆ, ಅವರಿಗೆ ಬೇಕಾದ ಫಲಿತಾಂಶಗಳು ಇನ್ಮುಂದೆ ಸಿಗದು. ಜೊತೆಗೆ, ‘ನೀವು ಹುಡುಕುತ್ತಿರುವ ಕಂಟೆಂಟ್ ಕಾನೂನು ಮತ್ತು ಕಂಪನಿಯ ಪಾಲಿಸಿಗೆ ವಿರುದ್ಧವಾಗಿದೆ’ ಎಂಬ   ಎಚ್ಚರಿಕೆಯ ಸಂದೇಶ ಆಕ್ಷೇಪಾರ್ಹ ಕಂಟೆಂಟ್ ಹುಡುಕುವವರ ಪರದೆ ಮೇಲೆ ಪ್ರತ್ಯಕ್ಷವಾಗಲಿದೆ.

ಇದನ್ನೂ ಓದಿ: ಟೆಕ್ ಟಿಪ್ಸ್: ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿಡಲು 5 ಉಪಾಯಗಳು!

ಇಂಟರ್ನೆಟ್ ಕಂಪನಿಗಳು ಈಗಾಗಲೇ ಈ ‘ಕೀವರ್ಡ್’ ಬ್ಯಾನನ್ನು ಕಾರ್ಯಗತಗೊಳಿಸಿವೆ. ಅದಾಗ್ಯೂ ಕೆಲ ಕೀವರ್ಡ್‌ಗಳು ಇನ್ನೂ ಸಕ್ರಿಯವಾಗಿವೆ. ಬಹುತೇಕ ಕೀವರ್ಡ್‌ಗಳು ಇಂಗ್ಲೀಷ್ ಭಾಷೆಯಲ್ಲಿದ್ದು, ಹಿಂದಿ ಮತ್ತಿತರ ಭಾಷೆಗಳ ಕೀವರ್ಡ್‌ಗಳ ಮೇಲೆಯೂ ನಿಷೇಧಕ್ಕೆ ಕ್ರಮ ಕೈಗೊಳ್ಳುವ  ನಿರೀಕ್ಷೆ ಇದೆ.

ಭಾರತದಲ್ಲಿಯೂ, ಚೈಲ್ಡ್‌ ಪೋರ್ನ್ ಚಿತ್ರಗಳನ್ನು ಪಸರಿಸುವವರ ಖಾತೆಗಳಿಗೆ ನಿಷೇಧ ಹೇರುವುದಾಗಿ ವಾಟ್ಸಪ್ ಇತ್ತೀಚೆಗೆ ಘೋಷಿಸಿತ್ತು. ಮಕ್ಕಳ ಅಶ್ಲೀಲ ಚಿತ್ರಗಳು ನೀಚತನದ್ದು. ಅದಕ್ಕೆ ವಾಟ್ಸಪ್ನಲ್ಲಿ ಜಾಗವಿಲ್ಲ. ಇಂತಹ ಪ್ರಕರಣಗಳನ್ನು ತನಿಖೆ ನಡೆಸಲು ಕಾನೂನುಬದ್ಧವಾಗಿ ತನಿಖಾ ಸಂಸ್ಥೆಗಳಿಂದ ಕೋರಿಕೆ ಬಂದರೆ ಅದನ್ನು ಪರಿಗಣಿಸುತ್ತೇವೆ ಎಂದು ಕೂಡಾ ಕಂಪನಿ ತಿಳಿಸಿತ್ತು.

ವರದಿಯೊಂದರ ಪ್ರಕಾರ ವಾಟ್ಸಪ್ ಇತ್ತೀಚೆಗಿನ ದಿನಗಳಲ್ಲಿ, ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವ ಸುಮಾರು 130000 ಖಾತೆಗಳನ್ನು ನಿಷೇಧಿಸಿದೆ.

Follow Us:
Download App:
  • android
  • ios