Asianet Suvarna News Asianet Suvarna News

ಟೆಕ್ ಟಿಪ್ಸ್: ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿಡಲು 5 ಉಪಾಯಗಳು!

ಸಾವಿರಾರು ರೂಪಾಯಿ ಬೆಲೆತೆತ್ತು ಅಥವಾ ತಿಂಗಳುಗಟ್ಟಲೆ EMI ಪಾವತಿಸಿ Smartphone ಕೊಂಡಿರುತ್ತೇವೆ. ಕೆಲವು ತಿಂಗಳ ಬಳಸಿದ ಬಳಿಕ ಅದು ಹಾಳಾದರೆ ಹೇಗಾಗಬೇಡ! ಕೆಲವೊಮ್ಮೆ ನಮ್ಮ ಕೆಲವು ‘ಡಿಜಿಟಲ್ ದುರಾಭ್ಯಾಸ’ಗಳೂ ನಮ್ಮ Smartphone ಕೆಡಲು ಕಾರಣವಾಗುತ್ತವೆ. ಇಲ್ಲಿದೆ ಕೆಲವು ಟಿಪ್ಸ್... 

5 Simple Tips To Keep Your Smartphone Safe
Author
Bengaluru, First Published Dec 23, 2018, 5:01 PM IST

Smartphoneಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಎಲ್ಲಿ ಹೋದರೂ, ಅದು ಬೇಕು, ಎಲ್ಲ ಸಮಯದಲ್ಲೂ ಅದು ಬೇಕು. ಒಂದು ಮಧ್ಯಮ ಶ್ರೇಣಿಯ Smartphone ಖರೀದಿಸಬೇಕೆಂದರೆ 10 ಸಾವಿರ ರೂ.ವಾದರೂ ವ್ಯಯಿಸಬೇಕು. 

ಕೆಲವರು 8-10 ಸಾವಿರ ರೂ. ಮೌಲ್ಯದ ಫೋನ್ ಆಗಿದ್ದರೂ ಅದರ ಚೆನ್ನಾಗಿ ಕೇರ್ ತಕೋತಾರೆ,  ಆದರೆ ಇನ್ನು ಕೆಲವರು, 30 ಸಾವಿರ ಬೆಳೆ ಬಾಳುವ ಫೋನ್ ಆಗಿದ್ದರೂ, ಅದರ ಕೇರ್ ತಗೋಳಲ್ಲ. ಕೊನೆಗೆ, ಸ್ಕ್ರೀನ್ ಬಿರುಕು ಬಿಡುವುದು, ಡಿಸ್ಪ್ಲೇ ಹಾಳಾಗೋದು, ಬ್ಯಾಟರಿ ಕೈಕೊಡುವುದು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ.

ಎರಡನೇದಾಗಿ, ನಾವು ನಮ್ಮ Smartphoneನಲ್ಲಿ ಶೇಖರಿಸಿರುವ ಡೇಟಾ ನಮ್ಮ ಫೋನ್‌ಗಿಂತ ಹೆಚ್ಚು ಬೆಳೆಬಾಳುವಂತಹದ್ದಿರುತ್ತದೆ. ಅದು ಫೋನ್ ನಂ., ಫೋಟೋ, ವಿಡಿಯೋ, ಪಾಸ್ವರ್ಡ್ ಅಥವಾ ಇತರ ಯಾವುದೇ ನೋಟ್‌ ಆಗಿರಬಹುದು. ಫೋನ್ ಹಾಳಾದರೆ ಬಹುತೇಕ ಅವೆಲ್ಲವೂ ಕಳೆದುಹೋದಂತೆಯೇ.  (ಅದರ ಬ್ಯಾಕಪ್ ಇಲ್ಲದ ಪಕ್ಷದಲ್ಲಿ)  ಆದುದರಿಂದ ನಮ್ಮ ಸ್ಮಾರ್ಟ್‌ಫೋನ್ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. Smartphone ಸುರಕ್ಷತೆಗಾಗಿ ನಾವು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. 

ಇದನ್ನೂ ಓದಿ: ವಾಟ್ಸಪ್ ಹೊಸ ಫೀಚರ್; ಇನ್ಮುಂದೆ ಎಲ್ಲವೂ ಇಲ್ಲೇ, ಹೋಗಬೇಕಿಲ್ಲ ಬೇರೆಲ್ಲೂ!

ನಿಮ್ಮ Smartphone ಉತ್ತಮ ಬಾಳಿಕೆ ಬರಬೇಕಾದರೆ, ಈ 5 ಸರಳ ಟಿಪ್ಸ್ ಗಳನ್ನು ಫಾಲೋ ಮಾಡಿ.

ಕಳಪೆ ಚಾರ್ಜರ್, ಕೇಬಲ್:

ಸುದ್ದಿ ಓದುವ ಅಭ್ಯಾಸ ನಿಮಗಿದ್ದರೆ, ಫೋನ್‌ ಸ್ಫೋಟಗೊಂಡು  ಗಾಯಗೊಳ್ಳುವ/ ಮೃತಪಡುವ ಸುದ್ದಿಗಳನ್ನು ನೀವು ಖಂಡಿತಾ ಓದಿರುತ್ತೀರಿ. ಅಂತಹ ಘಟನೆಗಳಿಗೆ ಮುಖ್ಯ ಕಾರಣ ಕಳಪೆ ಚಾರ್ಜರ್ ಮತ್ತು ಕೇಬಲ್‌ಗಳು.  ಆದುದರಿಂದ ಹಣ ಉಳಿಸುವ ಉದ್ದೇಶದಿಂದ ಅಥವಾ ಖರೀದಿಸುವ ಅಸಡ್ಡೆಯಿಂದ ನಿಮ್ಮ ಬೆಲೆಬಾಳುವ ಫೋನ್ ಕಳೆದುಕೊಳ್ಳುವ ಸನ್ನಿವೇಶ ತಂದುಕೊಳ್ಳಬೇಡಿ.ಕಳಪೆ ಚಾರ್ಜರ್, ಕೇಬಲ್‌ಗಳನ್ನು ಬಳಸೋದು ನಿಲ್ಲಿಸಿ.

ಫೋನ್ ಕೇಸ್ ಸ್ಕ್ರೀನ್ ಗಾರ್ಡ್:

ನಿಮ್ಮ ಫೋನ್‌ನಲ್ಲಿ ಗೊರಿಲ್ಲಾ ಗ್ಲಾಸ್ ಇದ್ದರೂ, ಅದು ಎಲ್ಲಾ ಸಂದರ್ಭಗಳಲ್ಲಿ ನಿಮ್ಮ ಸ್ಕ್ರೀನನ್ನು ರಕ್ಷಿಸುತ್ತದೆ ಎಂದು ಹೇಳಲಾಗದು. ಫೋನ್ ಕೆಳಬಿದ್ದಾಗ, ಹೆಚ್ಚಿಗೇನು ನಷ್ಟವಾಗದೇ ಇದ್ದರೂ, ಅದರ ಮೇಲೆ ಬೀಳುವ ಗೀರುಗಳು ಫೋನ್‌ನ ಅಂದಗೆಡಿಸುವುದು ಸತ್ಯ. ಫೋನ್ ಅಂದಕ್ಕಿಂತ ಹೆಚ್ಚಾಗಿ ಅದರೊಳಗಿರುವ ಬಿಡಿಭಾಗಗಳು ಕೂಡಾ ಬಹಳ ಸೂಕ್ಷ್ಮವಾಗಿರುತ್ತವೆ. ಅವುಗಳ ಸುರಕ್ಷತೆಯು ಕೂಡಾ ಅಷ್ಟೇ ಮುಖ್ಯ. ಆದುದರಿಂದ ಫೋನಿಗೊಂದು ಕೇಸ್ ಮತ್ತು ಸ್ಕ್ರೀನ್ ಗಾರ್ಡ್ ಹಾಕಿಸಿದರೆ ಉತ್ತಮ.

ಇದನ್ನೂ ಓದಿ: ಹುಷಾರ್! ಈ 5 ಕೆಲಸ ಮಾಡಿದ್ರೆ ವಾಟ್ಸಪ್ ನಿಮ್ಮನ್ನು ಬ್ಯಾನ್ ಮಾಡುತ್ತೆ

ಚಾರ್ಜಿಂಗ್:

ಯಾವುದೇ Smartphone ಇರಲಿ, ಅದರ ಬ್ಯಾಟರಿ ಬಾಳಿಕೆ ಎಲ್ಲರಿಗೂ ಕಳಕಳಿಯ ವಿಷಯವೇ ಸರಿ. ಆದರೆ ಚಾರ್ಜ್ ಸಂಪೂರ್ಣ ಖಾಲಿಯಾಗುವವರೆಗೆ ಬಳಸುವುದು, ಅಥವಾ ಚಾರ್ಜರ್ ಕಂಡಾಗೆಲ್ಲಾ ಪದೇ ಪದೇ ಚಾರ್ಜ್ ಮಾಡುವ ಅಭ್ಯಾಸ ಫೋನ್ ಬ್ಯಾಟರಿ ಪಾಲಿಗೆ ಒಳ್ಳೆಯದಲ್ಲ. ಕನಿಷ್ಟ 20-30% ಚಾರ್ಜ್ ಇರುವ ಹಾಗೇ ನೋಡಿಕೊಳ್ಳಿ.

ವಾಟರ್ ಪ್ರೂಫ್ ಫೋನ್?

ಯಾವುದೇ ಸ್ಮಾರ್ಟ್‌ಫೋನ್ 100 ಶೇ. ವಾಟರ್ ಪ್ರೂಫ್ ಆಗಿರಲ್ಲ. ಮೊಬೈಲ್ ಕಂಪನಿಗಳು ವಾಟರ್ ಪ್ರೂಫ್ ಅಂತ ಹೇಳಿಕೊಂಡರೂ, ಅವುಗಳಿಗೂ ಕೆಲ ಮಿತಿಯಿರುತ್ತದೆ. ಇಷ್ಟೇ ಹೊತ್ತು ಅಥವಾ ಇಷ್ಟೇ ಪ್ರಮಾಣದ ನೀರಿನ ಸಂಪರ್ಕಕ್ಕೆ ಬಂದಾಗ ಅವು ವಾಟರ್ ಪ್ರೂಫ್ ಆಗಿರುತ್ತವೆ. ಅದರರ್ಥ ನೀವು ಫೋನ್ ಪಾಕೆಟ್‌ನಲ್ಲಿಟ್ಟುಕೊಂಡು ಈಜಾಡಬಹುದೆಂದಲ್ಲ. ವಾಟರ್ ಪ್ರೂಫ್ ಇರೋ ಫೋನ್‌ಗಳನ್ನು ಮಳೆ ಅಥವಾ ಕೆಲ ನೀರಿನ ಹನಿಗಳಿಂದ ಮಾತ್ರ ಸುರಕ್ಷಿತವಾಗಿಟ್ಟುಕೊಳ್ಳಬಹುದು.    

ಅಪ್ಡೇಟ್ಸ್:

‘ಆರೋಗ್ಯಕರ’ ಫೋನ್ ಅಂದ್ರೆ ಯಾವುದು? ಅದಕ್ಕುತ್ತರ ‘ಅಪ್ಡೇಟೆಡ್ ಫೋನ್’! ನಿಮ್ಮ ಫೋನ್ ಸರಿಯಾಗಿ ಕೆಲಸ ಮಾಡಬೇಕು, ವೈರಸ್/ಮಾಲ್‌ವೇರ್ ಗಳಿಂದ ಸುರಕ್ಷಿತವಾಗಿರಬೇಕೆಂದರೆ, ನೀವು ಅಗ್ಗಾಗೆ ಸಾಫ್ಟ್‌ವೇರ್ ಅಪ್ಡೇಟ್ ಮಾಡಿಕೊಳ್ಳಲೇಬೇಕು. ಕೇವಲ ನಿಮ್ಮ ಫೋನ್ ಸಾಫ್ಟ್‌ವೇರ್ ಅಪ್ಡೇಟ್ ಮಾಡಿದರೆ ಸಾಲದು, ನೀವು ಬಳಸುವ ಆ್ಯಪ್‌ಗಳನ್ನು ಕೂಡಾ ಅಗ್ಗಾಗೆ ಅಪ್ಡೇಟ್ ಮಾಡುತ್ತಿರಬೇಕು. ಏಕೆಂದರೆ ಅವುಗಳು ಕೂಡಾ ನಿಮ್ಮ ಫೋನ್‌ನ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಆ ರೀತಿ ಅಪ್ಡೇಟ್ ಮಾಡುವುದರಿಂದ, ಬಗ್ಸ್‌ಗಳನ್ನು ಸರಿಪಡಿಸುವ ಹಾಗೂ ವೈರಸ್‌ನಿಂದ ಕಾಪಾಡುವ ಕೆಲಸ ಆಗುತ್ತದೆ. ಹಾಂ.. ಆ್ಯಪ್‌ಗಳನ್ನು ವಿಶ್ವಾಸಾರ್ಹವಲ್ಲದ ಮೂಲಗಳಿಂದ ಡೌನ್‌ಲೋಡ್ ಮಾಡಬೇಡಿ. ಅದು ನಿಮ್ಮ ಫೋನನ್ನು ಕೆಡಿಸುವ ಹೆಚ್ಚು ಸಾಧ್ಯತೆಗಳಿರುತ್ತವೆ. 

Follow Us:
Download App:
  • android
  • ios