ಇಂಟರ್ನೆಟ್ ಇಲ್ವಾ? ಪರ್ವಾಗಿಲ್ಲ ಈ ಆ್ಯಪ್ ಇದ್ರೆ ಸಾಕು!
ಇಂಟರ್ನೆಟ್ ಇಲ್ದಿದ್ರೆ ಟೈಮ್ ಪಾಸ್ ಮಾಡೋದು ಹೇಗಪ್ಪಾ? ಎಷ್ಟು ಸಲ ವಾಟ್ಸಪ್ ತೆರೆದು ಕೆರೆದುದನ್ನೇ ಕೆರೆಯೋದು? ಎಷ್ಟು ಸಲ ಅಂತಾ ಗ್ಯಾಲರಿ ಓಪನ್ ಮಾಡಿ ನೋಡಿದನ್ನೇ ನೋಡೋದು? ನೆಟ್ ಇಲ್ದಿದ್ರೆ ಏನ್ಮಾಡೋದು ಎಂಬ ಯೋಚನೆ ಬಹಳ ಸಲ ಬಂದಿರ್ಬೇಕಲ್ವಾ?
ಯುವ ಪೀಳಿಗೆಗೆ ಇಂಟರ್ನೆಟ್ ಇಲ್ಲದೇ ಜೀವನವನ್ನು ಕಲ್ಪಿಸುವುದು ಬಹಳ ಕಷ್ಟದ ವಿಚಾರ. ಇಂದು ಇಂಟರ್ನೆಟ್ ಸೌಲಭ್ಯ ಎಲ್ಲಾ ಕಡೆ ಇದೆ. ಆದರೆ ಕೆಲವೊಮ್ಮೆ, ಕೆಲವೊಂದು ಕಡೆ ಇಂಟರ್ನೆಟ್ ಲಭ್ಯವಿರಲ್ಲ. ಆಗ ಏನ್ಮಾಡೋದು? ಸಮಯ ಹೇಗೆ ಕಳೆಯೋದು? ಗೂಗಲ್ ಅದಕ್ಕೂ ಒಂದು ಪರಿಹಾರವನ್ನು ಕಂಡು ಹಿಡಿದಿದೆ.
ಹೌದು, ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಆಡೋ ಗೇಮ್ ಒಂದನ್ನ ಗೂಗಲ್ ಅಭಿವೃದ್ಧಿಪಡಿಸಿದೆ. ಡೇಟಾ ಸಂಪರ್ಕವನ್ನು ಆಫ್ ಮಾಡಿಯೂ ಈ ಗೇಮ್ ಆಡಬಹುದಾಗಿದೆ.
ಆ್ಯಂಡ್ರಾಯಿಡ್ ಪೊಲೀಸ್ ಎಂಬ ವೆಬ್‌ಸೈಟ್ ಪ್ರಕಾರ ಫ್ಲಾಪಿ ಬರ್ಡ್ ಗೇಮ್ ತರಹ ಇದೆ. ಈ ಗೇಮನ್ನು ಆಡಬೇಕಾದರೆ ಡೇಟಾ ಸಂಪರ್ಕ ಕಡಿದು ಹೋಗುವವರೆಗೂ ಕಾಯಬೇಕು ಅಥವಾ ಬಳಕೆದಾರರು ಡೇಟಾವನ್ನು ಆಫ್ ಮಾಡಿದರೂ ನಡೆಯುತ್ತೆ.
ಇದನ್ನೂ ಓದಿ: ಮೊಬೈಲ್ ಪ್ರಿಯರಿಗೆ ಹಬ್ಬ! Realme ಹೊಸ ಫೋನ್ ಸಖತ್ ಅಷ್ಟೇಯಲ್ಲ ಬಲು ಅಗ್ಗ
ವರದಿ ಪ್ರಕಾರ, ಬಳಿಕ ಗೂಗಲ್ ಆ್ಯಪ್‌ಗೆ ಹೋಗಿ ಅಲ್ಲಿ ಯಾವುದಾದರು ವಿಷಯವನ್ನು ಸರ್ಚ್ ಮಾಡಬೇಕು. ಆಗ ನಿಮ್ಮ ಫೋನಿನಲ್ಲಿ ‘ಇಂಟರ್ನೆಟ್ ಇಲ್ಲ’ದಿರುವ ಬಗ್ಗೆ ಮೋಡಗಳ ಚಿತ್ರದೊಂದಿಗೆ ನೊಟಿಫೀಕೆಶನ್ ಕಾಣುತ್ತೆ. ಅದನ್ನು ಕ್ಲಿಕ್ ಮಾಡಿದಾಗ ನಿಮಗೆ ಗೇಮ್ ಶುರುವಾಗುತ್ತೆ. ಗೇಮ್ ಬಹಳ ಸರಳವಾಗಿದ್ದು, ಎಂಜಾಯ್ ಮಾಡುವಂಥದ್ದು.
ಹಾಂ... ಅಂದ ಹಾಗೆ ಈ ಗೇಮ್ ಸಿಗಬೇಕಾದರೆ ನೀವು ಗೂಗಲ್‌ನ ಲೇಟೆಸ್ಟ್ ವರ್ಶನ್ ಅಪ್ಡೇಟ್ ಮಾಡಿರಬೇಕು.