ಮೊಬೈಲ್ ಪ್ರಿಯರಿಗೆ ಹಬ್ಬ! Realme ಹೊಸ ಫೋನ್ ಸಖತ್ ಅಷ್ಟೇಯಲ್ಲ ಬಲು ಅಗ್ಗ
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ Realme ಹೊಸ ಫೋನ್ | ಮಂಗಳವಾರದಿಂದ ಖರೀದಿಗೆ ಲಭ್ಯ, ಕೈಗೆಟಕುವ ಬೆಲೆಗೆ ಸಖತ್ ಹ್ಯಾಂಡ್ ಸೆಟ್ | ಅತ್ಯಂತ ದೀರ್ಘ ಅವಧಿಯವರೆಗೆ ಚಾರ್ಜ್ ಉಳಿಸಿಕೊಳ್ಳುವ ಸಾಮರ್ಥ್ಯ
ರಿಯಲ್‌ಮಿ ಕಂಪೆನಿ ಇದೀಗ ‘Realme 3’ ಮೊಬೈಲ್ ಬಿಡುಗಡೆ ಮಾಡಿದೆ. ಮಳೆ ಹನಿಯ (ಡ್ಯೂಡ್ರಾಪ್) ವಿನ್ಯಾಸದ 6.2 ಇಂಚುಗಳಷ್ಟು ದೊಡ್ಡದಾದ ಸ್ಕ್ರೀನ್‌ನಿಂದಾಗಿ ಮೊಬೈಲ್‌ನ ಖದರೇ ಬದಲಾಗಿದೆ.
3GB RAM ಹಾಗೂ 32 GB ROM ಇರುವ ಒಂದು ಮಾದರಿ ಹಾಗೂ 4 GB RAM ಹಾಗೂ 62 GBಗಳ ಇನ್ನೊಂದು ಮಾದರಿಯಲ್ಲಿ ಈ ಫೋನ್‌ಗಳು ಲಭ್ಯ.
256 GBಯವರೆಗೆ ಮೆಮೊರಿಯನ್ನು ವಿಸ್ತರಿಸಬಹುದು. ಮೂರು ಸಿಮ್ ಜೋಡಣೆಗೆ ಅವಕಾಶವಿದೆ. Realme ಸೀರಿಸ್‌ನಲ್ಲೇ ಅಧಿಕ ಸಾಮರ್ಥ್ಯದ 4230 mAhನ ಬ್ಯಾಟರಿ ಇದೆ.
ಇದನ್ನೂ ಓದಿ: ಚುನಾವಣೆ: ವಾಟ್ಸಪ್, ಫೇಸ್ಬುಕ್‌ನಲ್ಲಿ ಏನೇನು ಮಾಡುವಂತಿಲ್ಲ?
ಅತ್ಯಂತ ದೀರ್ಘ ಅವಧಿಯವರೆಗೆ ಚಾರ್ಜ್ ಉಳಿಸಿಕೊಳ್ಳುವ ಗುಣ ಇದರಲ್ಲಿರುವುದು ವಿಶೇಷ. ಈಗೀಗ ಸಾಮಾನ್ಯವಾಗಿರುವ 13MP ಹಾಗೂ 2MP ಡ್ಯುಯೆಲ್ ರೇರ್ ಕ್ಯಾಮರವಿದೆ.
ಜೊತೆಗೆ ನೈಟ್‌ಸ್ಕೇಪ್ ಮತ್ತು ಕ್ರೋಮಾ ಬೂಸ್ಟ್ ಮೋಡ್ ಇರುವ ಕಾರಣ ಫೋಟೋಗ್ರಫಿ ವಿಷಯದಲ್ಲಿ ಮೋಸವಾಗದು. ರೇಡಿಯೆಂಟ್ ಬ್ಲ್ಯೂ, ಡೈನಾಮಿಕ್ ಬ್ಲ್ಯಾಕ್ ಮತ್ತು ಕ್ಲಾಸಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.
Realme 3 ಬಿಡುಗಡೆಯಾದ ಆವೃತ್ತಿಗಳ ಬೆಲೆ 8999 ರುಪಾಯಿ ಹಾಗೂ 10,999 ರುಪಾಯಿಯಾಗಿದ್ದು, ಮಂಗಳವಾರ ಮಧ್ಯಾಹ್ನ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಶುರುವಾಗಲಿದೆ.