Asianet Suvarna News Asianet Suvarna News

Goodbye 2018ರ 18 ಶ್ರೀಮಂತ ಟೆಕ್ ವ್ಯಕ್ತಿಗಳು; ಭಾರತದ ಇಬ್ಬರು!

ತಂತ್ರಜ್ಞಾನದ ಯುಗದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಎಂದಿನಂತೆ ವರ್ಷ 2018 ಕೂಡಾ ತಂತ್ರಜ್ಞಾನ ಮತ್ತು ತಂತ್ರಜ್ಞರ ಪಾಲಿಗೆ ಮಹತ್ವದ್ದಾಗಿತ್ತು. ಕಂಪ್ಯೂಟರ್, ಸಾಫ್ಟ್‌ವೇರ್ ಹಾಗೂ ಇಂಟರ್ನೆಟ್ ಇಲ್ಲದ ಜಗತ್ತನ್ನು ಕಲ್ಪಿಸುವುದು ಅಸಾಧ್ಯವೆಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾದರೆ, ತಂತ್ರಜ್ಞರ ಪೈಕಿ ಅತೀ ಹೆಚ್ಚು ಸಿರಿವಂತರು ಯಾರು? ಇಲ್ಲಿದೆ ಪಟ್ಟಿ

Goodbye 2018 18 Richest Tech Persons of The Year 2018
Author
Bengaluru, First Published Dec 31, 2018, 3:30 PM IST

1. ಜೆಫ್ ಬಿಝೋಸ್:  ಅಮೆಜಾನ್ ಹೆಸರು ಕೇಳದವರಾರಿದ್ದಾರೆ? ವಿವಿಧ ಕ್ಷೇತ್ರ, ವಿಶೇಷವಾಗಿ ಇ-ಕಾಮರ್ಸ್ ಉದ್ಯಮದ ಮೂಲಕ ಮನೆಮಾತಾಗಿರುವ ಅಮೆಜಾನ್ ಮುಖ್ಯಸ್ಥರೇ ಜೆಫ್ ಬಿಝೋಸ್. 54 ವರ್ಷ ಪ್ರಾಯದ  ಅಮೆರಿಕನ್ ಜೆಫ್, ಸಂಪತ್ತಿನ ಮೌಲ್ಯ ಬರೋಬ್ಬರಿ 112 ಬಿಲಿಯನ್ ಡಾಲರ್! ಜೆಫ್ ಜಗತ್ತಿನ ಅತೀ ಶ್ರೀಮಂತರ ಪೈಕಿ ಮೊದಲಿಗರೂ ಕೂಡಾ.

2. ಬಿಲ್ ಗೇಟ್ಸ್: ಸಾಫ್ಟ್‌ವೇರ್ ಕ್ರಾಂತಿಯ ಹರಿಕಾರ ಮೈಕ್ರೋಸಾಫ್ಟ್.  ಅದರ ಸ್ಥಾಪಕ ಬಿಲ್ ಗೇಟ್ಸ್‌ಪರಿಚಯದ ಅಗತ್ಯವಿಲ್ಲ. 63 ವರ್ಷ ವಯಸ್ಸಿನ ಗೇಟ್ಸ್, 90 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನ ಒಡೆಯ. ಇವರು ಜಗತ್ತಿನ 2ನೇ ಶ್ರೀಮಂತ ವ್ಯಕ್ತಿ ಕೂಡಾ.

3.ಮಾರ್ಕ್ ಜುಕರ್ ಬರ್ಗ್:  ಫೇಸ್ಬುಕ್ ಸ್ಥಾಪಕ, 34 ವರ್ಷದ ಮಾರ್ಕ್ ಜುಕರ್‌ಬರ್ಗ್ ಸಾಮಾಜಿಕ ಸಂಪರ್ಕ ಕ್ಷೇತ್ರದಲ್ಲಿ [ಸೋಶಿಯಲ್ ನೆಟ್ವರ್ಕಿಂಗ್] ಕ್ರಾಂತಿ ತಂದವರು. ಅಮೆರಿಕಾದ ಈ ಯುವಕನ ಸಂಪತ್ತು ಬರೋಬ್ಬರಿ 71 ಬಿಲಿಯನ್ ಡಾಲರ್! ಜಾಗತಿಕ ಶ್ರೀಮಂತರ ಪೈಕಿ ಇವರು 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ ₹101 ಪಾವತಿಸಿ, ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಿ

4. ಲ್ಯಾರಿ ಎಲಿಸನ್: ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅಮೆರಿಕನ್ ಕಂಪನಿ ಆರೇಕಲ್ ಕೊಡುಗೆ ಮಹತ್ವದ್ದು. ಆರೇಕಲ್ ಸಹ-ಸಂಸ್ಥಾಪಕ ಹಾಗೂ CTO ಆಗಿರುವ 74 ವರ್ಷ ಪ್ರಾಯದ ಲ್ಯಾರಿ ಎಲಿಸನ್, ಒಟ್ಟು ಆಸ್ತಿ ಮೌಲ್ಯ 58 ಬಿಲಿಯನ್ ಡಾಲರ್ ಆಗಿದೆ.

5. ಲ್ಯಾರಿ ಪೇಜ್ : ತಂತ್ರಜ್ಞಾನದ ಐಡಿಯಾ ಇರುವವರು ಈ ಹೆಸರು ಯಾಕಿನ್ನು ಬಂದಿಲ್ಲ ಎಂದು ಯೋಚನೆ ಮಾಡುತ್ತಿರಬಹುದು. ಹೌದು, ಗೂಗಲ್ ಸಂಸ್ಥಾಪಕ, 45 ವರ್ಷ ಪ್ರಾಯದ ಲ್ಯಾರಿ ಪೇಜ್,  48 ಬಿಲಿಯನ್ ಡಾಲರ್ ಆಸ್ತಿಯ ಒಡೆಯ. ವಿಶ್ವದ ಅತೀ ಶ್ರೀಮಂತರ ಪೈಕಿ 10ನೇ ಸ್ಥಾನದಲ್ಲಿದ್ದಾರೆ.

ಇನ್ನುಳಿದವರು 13 ಮಂದಿ ಯಾರ್ಯಾರು ಇಲ್ಲಿದೆ ಪಟ್ಟಿ: [ಸ್ಥಾನ, ಹೆಸರು, ಆಸ್ತಿ ಮೌಲ್ಯ, ಕಂಪನಿ/ಕ್ಷೇತ್ರ,  ವಯಸ್ಸು, ರಾಷ್ಟ್ರೀಯತೆ]

6. ಸರ್ಗಿ ಬ್ರಿನ್,  5 ಬಿಲಿಯನ್ ಡಾಲರ್, 47, ಗೂಗಲ್, ಅಮೆರಿಕಾ

7. ಮಾ ಹಾಟೆಂಗ್, 45.3 ಬಿಲಿಯನ್ ಡಾಲರ್, ಇಂಟರ್ನೆಟ್ ಮೀಡಿಯಾ,  47,ಚೀನಾ

8. ಜ್ಯಾಕ್ ಮಾ, 39 ಬಿಲಿಯನ್ ಡಾಲರ್, ಅಲಿಬಾಬಾ/ ಇ-ಕಾಮರ್ಸ್, 54, ಚೀನಾ

9. ಸ್ಟೀವ್ ಬಾಲ್ಮರ್, 38.4 ಬಿಲಿಯನ್ ಡಾಲರ್, ಮೈಕ್ರೋಸಾಫ್ಟ್, 62, ಅಮೆರಿಕಾ

10. ಮೈಕೆಲ್ ಡೆಲ್, 22 ಬಿಲಿಯನ್ ಡಾಲರ್,  ಡೆಲ್ ಕಂಪ್ಯೂಟರ್ಸ್, 53, ಅಮೆರಿಕಾ

ಇದನ್ನೂ ಓದಿ: ವಾಟ್ಸಪ್ ಹೊಸ ಫೀಚರ್; ಇನ್ಮುಂದೆ ಎಲ್ಲವೂ ಇಲ್ಲೇ, ಹೋಗಬೇಕಿಲ್ಲ ಬೇರೆಲ್ಲೂ!

11. ಪೌಲ್ ಅಲೆನ್, 21.7 ಬಿಲಿಯನ್ ಡಾಲರ್, ಮೈಕ್ರೋಸಾಫ್ಟ್, 65, ಅಮೆರಿಕಾ

12. ಅಜೀಂ ಪ್ರೇಮ್ ಜೀ, 18.8 ಬಿಲಿಯನ್ ಡಾಲರ್, ಸಾಫ್ಟ್ ವೇರ್/ ವಿಪ್ರೋ, 73, ಭಾರತ

13. ವಿಲಿಯಮ್ ಡಿಂಗ್, 17.4 ಬಿಲಿಯನ್ ಡಾಲರ್, ಆನ್ ಲೈನ್ ಗೇಮ್ಸ್, 47, ಚೀನಾ 

14. ಝಾಂಗ್ ಝಿಡಾಂಗ್, 15.6 ಬಿಲಿಯನ್ ಡಾಲರ್, ಇಂಟರ್ನೆಟ್ ಮೀಡಿಯಾ, 46, ಚೀನಾ

15. ಶಿವ ನಾಡಾರ್, 14.6 ಬಿಲಿಯನ್ ಡಾಲರ್, ಸಾಫ್ಟ್ ವೇರ್/ ಎಚ್ ಸಿಎಲ್, 73, ಭಾರತ

16. ಡಸ್ಟಿನ್ ಮಾಸ್ಕೊವಿಟ್ಜ್, 14.6 ಬಿಲಿಯನ್ ಡಾಲರ್, ಫೇಸ್ಬುಕ್, 34, ಅಮೆರಿಕಾ

17. ಎರಿಕ್ ಸ್ಕ್ಮಿತ್, 13.4 ಬಿಲಿಯನ್ ಡಾಲರ್, ಗೂಗಲ್, 63, ಅಮೆರಿಕಾ

18. ಹ್ಯಾಸೋ ಪ್ಲಾಟ್ನರ್, 12.7 ಬಿಲಿಯನ್ ಡಾಲರ್,  ಸಾಫ್ಟ್ ವೇರ್, 74, ಜರ್ಮನಿ

Follow Us:
Download App:
  • android
  • ios