ಈಗಾಗಲೇ ಕಂಪನಿ ತನ್ನ ಫೋನ್ ಗಳನ್ನು ವಾಪಸ್ಸು ಪಡೆದು ಬೇರೆ ಫೋನ್ ನೀಡುವುದಾಗಿ ಘೋಷಿಸಿದ್ದು, ಅನೇಖ ಸ್ಥಳಗಳಲ್ಲಿ ಈ ನೋಟ್ 7 ಪೋನ್ ಅನ್ನು ಬಳಸುವುದನ್ನೇ ನಿಷೇಧಿಸಲಾಗಿದೆ. ಈಗ ಮತ್ತೊಂದು ಫೋನ್ ಹೊತ್ತಿ ಉರಿದಿದೆ. 

ಕೊರಿಯಾ(ಅ.12): ವಿಶ್ವದಾದ್ಯಂತ ಮಾರಾಟವಾಗಿರುವ ಸ್ಯಾಮ್ ಸಂಗ್ ಗ್ಯಾಲಾಕ್ಸಿ ನೋಟ್ 7 ಫೋನ್ ಗಳು ದೋಷಪೂರಿತಗೊಂಡಿದ್ದು, ಇದಕ್ಕಿದ್ದ ಹಾಗೇ ಬೆಂಕಿ ಹೊತ್ತಿಕೊಂಡು ಬ್ಲಾಸ್ಟ್ ಆಗುತ್ತಿರುವ ಘಟನೆಗಳು ವರದಿಯಾಗುತ್ತಲೇ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಕಂಪನಿ ತನ್ನ ಫೋನ್ ಗಳನ್ನು ವಾಪಸ್ಸು ಪಡೆದು ಬೇರೆ ಫೋನ್ ನೀಡುವುದಾಗಿ ಘೋಷಿಸಿದ್ದು, ಅನೇಖ ಸ್ಥಳಗಳಲ್ಲಿ ಈ ನೋಟ್ 7 ಪೋನ್ ಅನ್ನು ಬಳಸುವುದನ್ನೇ ನಿಷೇಧಿಸಲಾಗಿದೆ. ಈಗ ಮತ್ತೊಂದು ಫೋನ್ ಹೊತ್ತಿ ಉರಿದಿದೆ. 

ಕೊರಿಯಾದ ಬರ್ಗರ್ ಕಿಂಗ್ ನಲ್ಲಿ ಕುಳಿತು ಬರ್ಗರ್ ಸವಿಯುತ್ತಿದ್ದ ಗ್ರಾಹಕರ ನೋಟ್ 7 ಪೋನ್ ವೊಂದು ನೋಡ ನೋಡುತ್ತಿದ್ದಂತೆ ಬೆಂಕಿ ಹತ್ತಿಕೊಂಡು, ಹೊಗೆ ಬರಲು ಆರಂಭಿಸಿದೆ. ನಂತರ ಬರ್ಗರ್ ಕಿಂಗ್ ಸಿಬ್ಬಂದಿ ಆ ಫೋನ್ ಅನ್ನು ಸುರಕ್ಷಿತವಾಗಿ ಹೊರ ಬಿಸಾಕಿದ್ದಾರೆ.

ಒಟ್ಟಿನಲ್ಲಿ ಐಫೋನ್ ಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಬೇಕಿದ್ದ ಸ್ಯಾಮ್ ಸಂಗ್ ನೋಟ್ 7 ಫೋನ್ ಗಳು ಈ ರೀತಿ ಬೆಂಕಿಗೆ ಆಹುತಿಯಾಗುತ್ತಿರುವುದು ಸ್ಯಾಮ್ ಸಂಗ್ ಕಂಪನಿಗೆ ತಲೆ ನೋವು ತಂದಿದೆ.