Asianet Suvarna News Asianet Suvarna News

Gaming Addiction: ಫ್ರೀ ಫೈರ್ ಚಟಕ್ಕೆ ಬಿದ್ದು ತಾಯಿಯ ಚಿನ್ನಾಭರಣಗಳನ್ನೇ ಕದ್ದ ಮಕ್ಕಳು!

ಮಕ್ಕಳಿಬ್ಬರೂ ಮೊಬೈಲ್‌ನಲ್ಲಿ ಫ್ರಿ ಫೈರ್ ಗೇಮ್ ಆಡುತ್ತಿದ್ದು, ಆನ್‌ಲೈನ್ ತರಗತಿಗಳ ವೇಳೆ ಈ ಗೇಮ್‌ಗೆ ಅಡಿಕ್ಟ್ ಆಗಿರುವುದು ತನಿಖೆಯಿಂದ ತಿಳಿದುಬಂದಿದೆ.

free fire game addiction Madhya Pradesh chhattisgarh Children Stole Jewelry of mother from own house for mnj
Author
Bengaluru, First Published Feb 2, 2022, 12:06 PM IST

ಮಧ್ಯಪ್ರದೇಶ (ಫೆ. 02): ಮೊಬೈಲ್ ಗೇಮ್‌ಗಳ ಮಕ್ಕಳ ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಮೊಬೈಲ್‌ ಗೇಮ್‌ ಚಂದಾದಾರಿಕೆ ಪಡೆಯಲು ಲಕ್ಷಾಂತರ ಖರ್ಚು ಮಾಡಿ ಕೊನೆಗೆ ಹಣವಿಲ್ಲದಿದ್ದಾಗ ಕಳ್ಳತನ ಹಾದಿ ಹಿಡಿದ ಅದೆಷ್ಟೋ ಮಕ್ಕಳ ಕತೆಗಳು ವರದಿಯಾಗಿವೆ. ಇದೀಗ ಇದಕ್ಕೆ ಸಂಬಂಧಿಸಿದ ಮತ್ತೊಂದು ಸುದ್ದಿ ಹೊರಬಿದ್ದಿದೆ.  ಛತ್ತರ್‌ಪುರ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಫ್ರೀ ಫೈಯರ್ ಆಟದ ಚಟದಿಂದ ತಮ್ಮದೇ ಮನೆಯಲ್ಲಿ ಕಳ್ಳತನ ಮಾಡಿದ್ದು, ಅವರು ತಮ್ಮ ತಾಯಿಯ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದು ಮಾರಾಟ ಮಾಡಿದ್ದಾರೆ. ತಮ್ಮ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಮಕ್ಕಳಿಬ್ಬರೂ  ಪೊಲೀಸರ ತನಿಖೆಯಲ್ಲಿ  ಸಿಕ್ಕಿಬಿದ್ದಿದ್ದಾರೆ.

ನಡೆದದ್ದೇನು?: ಛತ್ತರ್‌ಪುರ ಜಿಲ್ಲೆಯ ಕೊತ್ವಾಲಿ ಪ್ರದೇಶದಲ್ಲಿ ಮಹಿಳೆಯೊಬ್ಬರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆಕೆಯ ಮನೆಯಲ್ಲಿ ಚಿನ್ನದ ನೆಕ್ಲೇಸ್ ಮತ್ತು ಸರ ಕಳ್ಳತನವಾಗಿದೆ ಎಂದು ಮಹಿಳೆ ತಿಳಿಸಿದ್ದಳು. ಮಹಿಳೆ ಮೊದಲು ತನ್ನ ಪುತ್ರರನ್ನು ಈ ಬಗ್ಗೆ ಕೇಳಿದ್ದಳು ಆದರೆ ಅವರು ನಿರಾಕರಿಸಿದ್ದರು. ಇದಾದ ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಮಕ್ಕಳ ಮೇಲೆ ಅನುಮಾನ ಬಂದಿದ್ದು, ನಂತರ ಮೊಬೈಲ್‌ನಲ್ಲಿ ಸಹೋದರರಿಬ್ಬರ ಸಂಭಾಷಣೆ ಕೇಳಿದ್ದು, ವಿಷಯ ಬಯಲಾಗಿದೆ. ಇದಾದ ಬಳಿಕ ಕಳ್ಳತನ ಮಾಡಿ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ಅಂಗಡಿಯೊಂದರಿಂದ ವಶಪಡಿಸಿಕೊಂಡ ಪೊಲೀಸರು ಮಕ್ಕಳ ಮನವೊಲಿಸಿ ಮಕ್ಕಳನ್ನು ಬಿಡುಗಡೆ ಮಾಡಿದ್ದಾರೆ. 

ಇದನ್ನೂ ಓದಿPUBG Influence ತಾಯಿ, ತಂಗಿ ಸೇರಿ ಕುಟುಂಬವನ್ನೇ ಹತ್ಯೆಗೈದ 14ರ ಬಾಲಕ, ಎದ್ದು ಬರಲು ದಿನವಿಡಿ ಕಾಯುತ್ತಾ ಕುಳಿತ!

ಕಳ್ಳತನ ಮಾಡಿದ ಮಕ್ಕಳಿಬ್ಬರೂ ಅಪ್ರಾಪ್ತರಾಗಿದ್ದು ಒಬ್ಬರಿಗೆ 16 ವರ್ಷ ಮತ್ತು ಒಬ್ಬರಿಗೆ 12 ವರ್ಷ ಎಂದು ತಿಳಿದುಬಂದಿದೆ. ಮಕ್ಕಳಿಬ್ಬರೂ ಮೊಬೈಲ್‌ನಲ್ಲಿ ಫ್ರಿ ಫೈರ್ ಗೇಮ್ ಆಡುತ್ತಿದ್ದು, ಆನ್‌ಲೈನ್ ತರಗತಿಗಳ ವೇಳೆ ಈ ಗೇಮ್‌ಗೆ ಅಡಿಕ್ಟ್ ಆಗಿದ್ದರು. ಹಾಗಾಗಿ ಮಕ್ಕಳೇ ತಮ್ಮ ಮನೆಯಲ್ಲೇ ಕಳ್ಳರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. 

ಮಕ್ಕಳ ಮೇಲೆ ಗೇಮಿಂಗ್‌ ಪರಿಣಾಮ: ಮೊಬೈಲ್ ಗೇಮ್‌ಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಇತ್ತೀಚೆಗೆ ಹಲವು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಪಾಕಿಸ್ತಾನದ(Pakistan) ಪಂಜಾಬ್ ಪ್ರಾವಿನ್ಸ್‌ನಲ್ಲಿ 14ರ ಬಾಲಕ ಪಬ್‌ಜಿ ಪ್ರಭಾವದಿಂದ ಇಡೀ ಕುಟುಂಬವನ್ನೇ ಹತ್ಯೆ ಮಾಡಿದ ಘಟನೆ ವರದಿಯಾಗಿತ್ತು. ಕೆಲ ಸಮಯದ ಹಿಂದೆ ರಾಜ್ಯದಲ್ಲಿ ಮಗುವೊಂದು ಆನ್‌ಲೈನ್ ಗೇಮ್‌ಗಳ ಚಟದಿಂದ ಆತ್ಮಹತ್ಯೆ ಮಾಡಿಕೊಂಡಿತ್ತು. ಪಬ್‌ಜಿ, ಫ್ರೀ ಫೈರ್ ಗೇಮಿಂಗ್‌ ಐಡಿ ಖರೀದಿಸಲು ಯುವಕ ಮನೆಯಿಂದಲೇ ₹17ಲಕ್ಷ ಕದ್ದ ಪ್ರಕರಣ ಚಂಡೀಗಢ ದಾಖಲಾಗಿತ್ತು.

ಇದನ್ನೂ ಓದಿGaming Addiction: ಪಬ್‌ಜಿ, ಫ್ರೀ ಫೈರ್ ಗೇಮಿಂಗ್‌ ಐಡಿ ಖರೀದಿಸಲು ಮನೆಯಿಂದಲೇ ₹17ಲಕ್ಷ ಕದ್ದ ಯುವಕ! 

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳ (Online Class) ಮೊರೆ ಹೋಗಿದ್ದವು. ಇದು ಚಿಕ್ಕ ಮಕ್ಕಳ ಕೈಗೂ ಮೊಬೈಲ್‌ ಸುಲಭವಾಗಿ ದೊರಕುವಂತೆ ಮಾಡಿತ್ತು. ಹೀಗಾಗಿ ಮಕ್ಕಳಲ್ಲಿ ಮೊಬೈಲ್‌ ಬಳಕೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಸಂದರ್ಭದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆ ಹೆಚ್ಚಾಗಿದ್ದು  ಮಕ್ಕಳು ಆನ್‌ಲೈನ್ ಗೇಮಿಂಗ್ ಚಟವನ್ನು ಬೆಳೆಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಆನ್‌ಲೈನ್ ತರಗತಿಗಳ ಸಮಯದಲ್ಲಿ ಮಕ್ಕಳ ಮೇಲೆ ನಿಗಾ ಇಡುವಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೇ ಕಳೆದ ವರ್ಷ ಕೇಂದ್ರ ಸರ್ಕಾರ ಪಾಲಕರಿಗೆ ಮತ್ತು ಶಿಕ್ಷಕರಿಗೆ ವಿಶೇಷ ಸಲಹೆಗಳ ಪಟ್ಟಿ ಕೂಡ ಬಿಡುಗಟೆ ಮಾಡಿತ್ತು.  

Follow Us:
Download App:
  • android
  • ios