ಸಾಮಾನ್ಯವಾಗಿ ಗೂಗಲ್ ಪ್ಲೇಸ್ಟೋರ್‌ನಲ್ಲಿರುವ Appಗಳನ್ನು ನಾವು ಕಣ್ಣುಮುಚ್ಚಿ ಡೌನ್ ಲೋಡ್ ಮಾಡುತ್ತೇವೆ.  ತುರ್ತಾಗಿ ಯಾವುದಾದರೂ App ಅವಶ್ಯಕತೆ ಬಿದ್ದಾಗ ನಾವು ಆ Appನ ವಿಶ್ವಾಸಾರ್ಹತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಪರಿಣಾಮವಾಗಿ ನಮ್ಮ ಫೋನ್‌ನಲ್ಲಿ ವೈರಸ್/ಮಾಲ್‌ವೇರ್‌ಗಳಿಗೆ ಬಲಿಯಾಗುತ್ತದೆ. ಇಲ್ಲವೇ ನಮ್ಮ ಖಾಸಗಿ ಡೇಟಾ ಸೋರಿಕೆಯಾಗುವ ಸಾಧ್ಯತೆಗಳೂ ಇರುತ್ತವೆ.

ಗೂಗಲ್ ಪ್ಲೇಸ್ಟೋರ್‌ನಲ್ಲಿ ಕೆಲವೊಂದು ನಕಲಿ Appಗಳು ಸೇರಿಕೊಂಡಿವೆಯೆಂದು ಕ್ವಿಕ್ ಹೀಲ್ ಸೆಕ್ಯೂರಿಟಿ ಲ್ಯಾಬ್ ವರದಿ ಮಾಡಿವೆ. ಮೇಲ್ನೋಟಕ್ಕೆ, PDF ರೀಡರ್, PDF ಡೌನ್‌ಲೋಡರ್ ಅಥವಾ PDF ಸ್ಕ್ಯಾನರ್‌ನಂತೆ ತೋರಿಸಿಕೊಳ್ಳುವ ಈ Appಗಳು ವಾಸ್ತವದಲ್ಲಿ ಆ ಕೆಲಸವನ್ನೇ ಮಾಡಲ್ಲ! ಬೇರೆ  Appಗಳ ಡೌನ್‌ಲೋಡ್ ಸಂಖ್ಯೆಯನ್ನು ಹೆಚ್ಚಿಸಿ, ಅಥವಾ ರೇಟಿಂಗ್ ಹೆಚ್ಚಿಸಿ ಜನಪ್ರಿಯಗೊಳಿಸುವ ಕೆಲಸ ಈ Appಗಳು ಮಾಡುತ್ತವೆ. 

ಇದನ್ನೂ ಓದಿ: ವಾಟ್ಸಪ್ ಗ್ರೂಪ್ ಇನ್ನು ಸುಲಭವಲ್ಲ? ಬರಲಿದೆ ಹೊಸ ನಿಯಮ!

ಈ ಅಪ್ಲಿಕೇಶನ್‌ಗಳನ್ನು ಬಳಸಬೇಕಾದರೆ ಇತರ Appಗಳನ್ನು ಡೌನ್‌ಲೋಡ್ ಮಾಡಿ, 5 ಸ್ಟಾರ್ ರೇಟಿಂಗ್ ನೀಡುವಂತೆ ಸೂಚಿಸುತ್ತವೆ.  ಬಳಕೆದಾರರು ಅವು ಸೂಚಿಸಿದಂತೆ ಮಾಡಿದರೂ, ಮತ್ತೊಮ್ಮೆ ಅದೇ ಸಂದೇಶವನ್ನು ಪುನಾರವರ್ತಿಸುತ್ತವೆ.   

ಸ್ಪಾನ್ಸರ್ಡ್ ಅಪ್ಲಿಕೇಶನ್‌ಗಳ ಡೌನ್‌ಲೋಡ್ ಸಂಖ್ಯೆಯನ್ನು ಹೆಚ್ಚಿಸಿ, ಜನಪ್ರಿಯಗೊಳಿಸಿ, ಹಣಸಂಪಾದಿಸಲು ಈ  ರೀತಿಯ ವಾಮಮಾರ್ಗಗಳನ್ನು ಬಳಸಲಾಗುತ್ತದೆ. 

ಕ್ವಿಕ್ ಹೀಲ್ ಪ್ರಕಾರ ಈ ಕೆಳಗಿನ ಅಪ್ಲಿಕೇಶನ್‌ಗಳು ನಕಲಿಯಾಗಿವೆ.

Package Name Detection Name
com.frenzy.live Android.Fakeapp.A3f8f
com.shartel.pdfebookconverter Android.Fakeapp.A3f93
com.shartel.pdfebookreader Android.Fakeapp.A3f90
com.shartel.pdfebookdownloader Android.Fakeapp.A3f91
com.shartel.pdfscannerocr Android.Fakeapp.A3f92

ಇದನ್ನೂ ಓದಿ: ಟೆಕ್ ಟಿಪ್ಸ್: ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿಡಲು 5 ಉಪಾಯಗಳು!

ಆದುದರಿಂದ ಬಳಕೆದಾರರು,  Appಗಳನ್ನು ಇನ್ಸ್ಟಾಲ್ ಮಾಡುವಾಗ ಬಹಳ ಎಚ್ಚರದಿಂದಿರಬೇಕು. App ಡೌನ್‌ಲೋಡ್ ಮಾಡುವ ಮುನ್ನ ಈ ಕೆಳಗಿನ ಎಚ್ಚರಿಕೆಯ ಕ್ರಮಗಳನ್ನು ಪಾಲಿಸಿ:

App ಡೌನ್‌ಲೋಡ್ ಮಾಡುವ ಮುನ್ನ App ಡಿಸ್ಕ್ರಿಪ್ಷನ್ ಓದಿಕೊಳ್ಳಿ.

App ಡೆವಲಪರ್ ಹೆಸರು, ಮತ್ತು ಅವರ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ವಿವರಗಳನ್ನು ಚೆಕ್ ಮಾಡಿ. ನಿಮಗೆ ಬೇಕಾದ ಸ್ಪಷ್ಟತೆ ಸಿಕ್ಕಿಲ್ಲವೆಂದರೆ ಆ App ಸಂಶಯಾಸ್ಪದವೇ ಸರಿ.

Appನ ರಿವೀವ್ ಮತ್ತು ರೇಟಿಂಗ್‌ಗಳನ್ನೊಮ್ಮೆ ನೋಡಿ. ಕೆಲವೊಮ್ಮೆ ಅದು ಕೂಡಾ ನಕಲಿಯಾಗಿರಬಹುದು.

ಯಾವ್ಯಾವುದೋ ಮೂಲಗಳಿಂದ App ಡೌನ್‌ಲೋಡ್ ಮಾಡಬೇಡಿ

ವಿಶ್ವಾಸಾರ್ಹ  Anti-Virusಗಳನ್ನು ಬಳಸುವ ಮೂಲಕ ನಕಲಿ, ಅಥವಾ ಹಾನಿಕಾರಕ Appಗಳಿಗೆ ಕಡಿವಾಣ ಹಾಕಬಹುದು.