3 ತಿಂಗಳು Free ಇಂಟರ್‌ನೆಟ್, 18 OTT, 150 ಚಾನೆಲ್ ಆಕ್ಸೆಸ್; Jio, Airtelಗೆ ಟಕ್ಕರ್ ಕೊಡ್ತಿರೋದು ದೇಶಿ ಕಂಪನಿ
ಇದು ಪಕ್ಕಾ ದೇಶಿ ಕಂಪನಿ. ಇಷ್ಟು ದಿನ ಬಿಎಸ್‌ಎನ್‌ಎಲ್ ತನ್ನ ಫ್ರೆಂಡ್ಲಿ ಆಫರ್ ಮೂಲಕ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋಗೆ ಶಾಕ್ ಕೊಟ್ಟಿತ್ತು. ಇದೀಗ ದೇಶಿ ಕಂಪನಿ ಟಕ್ಕರ್ ನೀಡುತ್ತಿದೆ.
ಮುಂಬೈ: ರಿಲಯನ್ಸ್ ಜಿಯೋ ಮತ್ತು ಏರ್‌ಟೈಲ್ ದೇಶದ ಅತಿದೊಡ್ಡ ಬ್ರಾಡ್‌ಬ್ಯಾಂಡ್ ಸರ್ವಿಸ್ ನೀಡುತ್ತಿರುವ ಟೆಲಿಕಾಂ ಕಂಪನಿಗಳಾಗಿವೆ. ಈ ಇಬ್ಬರ ದೈತ್ಯರ ಮಧ್ಯೆ ದೇಶಿ ಕಂಪನಿ ಎಂಟ್ರಿ ಕೊಟ್ಟಿದ್ದು, ಕಡಿಮೆ ಬೆಲೆಯಲ್ಲಿ ಹೆಚ್ಚು ಬೆನೆಫಿಟ್ ನೀಡುತ್ತಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೈಲ್‌ಗೆ ಟಕ್ಕರ್ ಕೊಡುತ್ತಿರೋದು Excitel. ಇದು ತನ್ನ ಗ್ರಾಹಕರಿಗೆ ವಿಶೇಷ ಆಫರ್ ಪರಿಚಯಿಸಿದ್ದು, ಈ ಮೂಲಕ ಹೊಸ ಬಳಕೆದಾರರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಆಫರ್ ನಲ್ಲಿ ಮೂರು ತಿಂಗಳು ಇಂಟರ್‌ನೆಟ್ ಫ್ರೀ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ 18 ವಿವಿಧ ಒಟಿಟಿ ಪ್ಲಾಟ್‌ಫಾರಂ ಮತ್ತು 150ಕ್ಕೂ ಅಧಿಕ ಚಾನೆಲ್‌ಗಳ ಆಕ್ಸೆಸ್ ಸಿಗಲಿದೆ. ಉತ್ತಮ ಸೇವೆ ಒದಗಿಸುವ ಭರವಸೆಯನ್ನು Excitel ನೀಡಿದೆ.
Excitel ಹೊಸ ಆಫರ್ ಮಾಸಿಕ ಪ್ಲಾನ್ ಬೆಲೆ 499 ರೂಪಾಯಿ ಆಗಿದೆ. ನೀವು 9 ತಿಂಗಳವರೆಗೆ Excitel ಇಂಟರ್ನೆಟ್ ಬಳಕೆ ಮಾಡಿದ್ರೆ ಮುಂದಿನ 3 ತಿಂಗಳು ಉಚಿತ ಸೇವೆ ಗ್ರಾಹಕರಿಗೆ ಸಿಗಲಿದೆ. Amazon Prime, Disney+Hotstar, Sony Liv, Altbalaji ಸೇರಿದಂತೆ 18 ಒಟಿಟಿ ಪ್ಲಾಟ್‌ಫಾರಂ, 150ಕ್ಕೂ ಅಧಿಕ ಚಾನೆಲ್‌ಗಳನ್ನು ವೀಕ್ಷಿಸಬಹುದು. ಅಂದರೆ 9 ತಿಂಗಳು ರಿಚಾರ್ಜ್ ಮಾಡಿಸಿಕೊಂಡರೆ 3 ತಿಂಗಳು ಉಚಿತ ಸೇವೆ ಸಿಗಲಿದೆ. ನೆಟ್ ಸ್ಪೀಡ್ 300 Mbps ಇರಲಿದೆ.
ಅಂಬಾನಿ ಜಿಯೋಗಿಂತ ಎತ್ತರಕ್ಕೆ ಜಿಗಿದ ಬಿಎಸ್‌ಎನ್ಎಲ್: ಏನಾಗಲಿದೆ ಮುಂದಿನ ನಡೆ?
ಇದೇ ಪ್ಲಾನ್‌ನಲ್ಲಿ ಉಚಿತವಾಗಿ ಲೈವ್ ಟಿವಿ ಚಾನೆಲ್, ಸ್ಮಾರ್ಟ್ ಟಿವಿ ಸಹ ಆನ್ ಮಾಡಿಕೊಳ್ಳಬಹುದು ಹಾಗೂ ಎಚ್‌ಡಿ ಪ್ರೊಜೆಕ್ಟರ್ ಸಹ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ. Excitel ಈ ಸೇವೆಯನ್ನು ದೇಶದ 35ಕ್ಕೂ ಅಧಿಕ ನಗರಗಳಲ್ಲಿ ನೀಡುತ್ತಿದೆ.
ಈ ತಿಂಗಳು Excitel ಬಿಗ್ ಸ್ಕ್ರೀನ್ ಹೆಸರಿನ ಎರಡು ಹೊಸ ಬ್ರಾಡ್‌ಬ್ಯಾಂಡ್ ಪ್ಲಾನ್ ಲಾಂಚ್ ಮಾಡಿದೆ. 1,299 ರೂ ಮತ್ತು 1,499 ರೂಪಾಯಿ ಎರಡು ರೀಚಾರ್ಜ್ ಪ್ಲಾನ್‌ಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ. ಹೆಚ್ಚಿನ ವೇಗದ ಇಂಟರ್ನೆಟ್, OTT ಚಂದಾದಾರಿಕೆ, ಉಚಿತ ಲೈವ್ ಟಿವಿ ಚಾನೆಲ್‌ಗಳು ಮತ್ತು ಉಚಿತ ಸ್ಮಾರ್ಟ್ ಟಿವಿ ಅಥವಾ HD ಪ್ರೊಜೆಕ್ಟರ್ ಅನ್ನು ಪಡೆಯುತ್ತಾರೆ. ಕಂಪನಿಯ ಈ ಕೊಡುಗೆಯು 35 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ.
ಇನ್ಮುಂದೆ ಬೇಕಾಬಿಟ್ಟಿ ಕೆಲಸ ಮಾಡುವಂತಿಲ್ಲ, ಟೆಲಿಕಾಂ ಕಂಪನಿಗಳಿಗೆ ಮೂಗುದಾರ; ಅಕ್ಟೋಬರ್ 1 ರಿಂದ TRAI ಹೊಸ ನಿಯಮಗಳು