ಡಿಸೆಂಬರ್ 16ಕ್ಕೆ ಎಂಟ್ರಿ ಕೊಡ್ತಿದೆ ದೇಶಿ ಕಂಪನಿಯ ಡಬಲ್ Display 5G ಸ್ಮಾರ್ಟ್‌ಫೋನ್
ಲಾವಾ ಕಂಪನಿಯ Lava Blaze Duo ಸ್ಮಾರ್ಟ್‌ಫೋನ್ ಡಿಸೆಂಬರ್ 16 ರಂದು ಬಿಡುಗಡೆಯಾಗಲಿದೆ. ಈ ಫೋನ್ ಡಬಲ್ ಡಿಸ್‌ಪ್ಲೇ, 64MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ನವದೆಹಲಿ: ಕಳೆದ ತಿಂಗಳಷ್ಟೇ ದೇಶಿ ಕಂಪನಿಯಾಗಿರೋ ಲಾವಾ ಭಾರತದ ಮಾರುಕಟ್ಟೆಗೆ Lava Yuva 4 ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಇದೀಗ ಲಾವ್ ಕಂಪನಿ ಹೊಸ ಸ್ಮಾರ್ಟ್‌ಫೋನ್ ತರಲು ಮುಂದಾಗಿದ್ದು, ಡಿಸೆಂಬರ್ 16ರಂದು ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ನಾಲ್ಕು ದಿನಗಳಲ್ಲಿ ಲಾವಾ ಕಂಪನಿಯ Lava Blaze Duo ಹೆಸರಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ. ಈಗಾಗಲೇ Lava Blaze Duoದ ಬಹುತೇಕ ಫೀಚರ್ಸ್ ಅಧಿಕೃತವಾಗಿವೆ.
ಡಿಸೆಂಬರ್ 16ರ ಮಧ್ಯಾಹ್ನ 12 ಗಂಟೆ ಭಾರತದ ಮಾರುಕಟ್ಟೆಯಲ್ಲಿ Lava Blaze Duo ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಲಾವಾ ಇಂಡಿಯಾ ಇ-ಸ್ಟೋರ್‌ಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಅಮೆಜಾನ್ ಮೈಕ್ರೊಸೈಟ್‌ನಲ್ಲಿ ಲಾವಾ ಹೊಸ ಸ್ಮಾರ್ಟ್‌ಫೋನಿನ ವಿನ್ಯಾಸ ಮತ್ತು ಎಲ್ಲಾ ವೈಶಿಷ್ಟ್ಯಗಳನ್ನು ಪ್ರಕಟಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಡಬಲ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಹಿಂಭಾಗದಲ್ಲಿ ಆಯಾತಕಾರದ ಮತ್ತೊಂದು ಸ್ಕ್ರೀನ್ ಇರಲಿದೆ. ಹಿಂಭಾಗದ ಸ್ಕ್ರೀನ್‌ನಲ್ಲಿ ನೋಟಿಫಿಕೇಶನ್, ಕಾಲ್ ಅಲರ್ಟ್, ಕ್ಯಾಮೆರಾಗಾಗಿ ವ್ಯೂವ್ ಫೈಂಡರ್, ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್‌ಗಳು ಲಭ್ಯ ಇವೆ.
ಲಾವಾ ಬ್ಲೇಜ್ ಡ್ಯೂದ ವೈಶಿಷ್ಟ್ಯಗಳು
Display And Processor: ಅಮೆಜಾನ್ ಲಿಸ್ಟಿಂಗ್ ಪ್ರಕಾರ, ಅಪ್‌ಕಮಿಂಗ್ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಜೊತೆ 6.67 ಇಂಚು, FHD+ 3D Quard AMOLED ಡಿಸ್‌ಪ್ಲೇ ಹೊಂದಿರಲಿದೆ. ಸೆಕ್ಯೂರಿಟಿಗಾಗಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಪೀಚರ್ ಸಹ ಒಳಗೊಂಡಿದೆ. ಹಿಂಭಾಗದ (ಸೆಕೆಂಡರಿ) 1.58 ಇಂಚಿನ ಅಮೋಲ್ಡ್ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮಿಡಿಯಾಟೆಕ್ ಡೈಮೇಶನ್ 7025 ಚಿಪ್‌ಸೆಟ್ ಒಳಗೊಂಡಿದೆ
ಇದನ್ನೂ ಓದಿ: ಜಸ್ಟ್ 599 ರೂಪಾಯಿಯಲ್ಲಿ ಸಿಗ್ತಿದೆ ₹33,999 ಬೆಲೆಯ Vivo V40e 5G AI ಸ್ಮಾರ್ಟ್‌ಫೋನ್
Memory And OS: 6GB/8GB LPDDR5 RAM ಮತ್ತು 128GB UFS 3.1 ಸ್ಟೋರೇಜ್ ಹೊಂದಿದೆ. ಇದರಲ್ಲಿ 6GB/8GB RAM ಸಪೋರ್ಟ್ ಮಾಡುತ್ತದೆ. ಫೋನ್ ಆಂಡ್ರಾಯ್ಡ್ 14 ಓಎಸ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಆಂಡ್ರಾಯ್ಡ್ 15 ಅಪ್‌ಡೇಟ್ ಮಾಡಿಕೊಳ್ಳುವ ಆಯ್ಕೆಯೂ ಲಭ್ಯವಿದೆ.
Camera And Battery: ಲಾವಾ ಸ್ಮಾರ್ಟ್‌ಫೋನ್ ಪ್ರೈಮರಿ ಕ್ಯಾಮೆರಾ ಸೋನಿ ಗುಣಮಟ್ಟದ 64MP (64MP Sony Sensor Camera + 2MP Camera with LED Flash) ಮತ್ತು ಸೆಲ್ಫಿಗಾಗಿ 15MP ಕ್ಯಾಮೆರಾ ನೀಡಲಾಗಿದೆ. 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 79 ನಿಮಿಷದಲ್ಲಿ ಬ್ಯಾಟರಿ 100% ಚಾರ್ಜ್ ಆಗುತ್ತದೆ. ಒಮ್ಮೆ ಚಾರ್ಜ್ ಮಾಡಿದ್ರೆ 36.6 ಗಂಟೆವರೆಗೆ ಯಾವುದೇ ಅಡೆತಡೆಯಿಲ್ಲದೇ ಮಾತನಾಡಬಹುದು. ಬೆಲೆ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.
ಇದನ್ನೂ ಓದಿ: ಸೂಪರ್ ಕ್ಯಾಮೆರಾ, ಪವರ್‌ಫುಲ್ ಬ್ಯಾಟರಿ, ಅಧಿಕ ಸ್ಟೋರೇಜ್; ಬಜೆಟ್ ಫ್ರೆಂಡ್ಲಿ ಟಾಪ್ 5 ಸ್ಮಾರ್ಟ್‌ಫೋನ್‌ಗಳು