Small Screen
ರವೀಂದರ್ ಲಿಬ್ರಾ ಪ್ರೊಡಕ್ಷನ್ಸ್ ನ ಮಾಲೀಕರಾಗಿರುವ ರವೀಂದರ್ ಚಂದ್ರಶೇಖರ್ (Ravinder Chandrashekar)ತಮ್ಮ ಪತ್ನಿ ಹಾಗೂ ಮಗನೊಂದಿಗೆ ಎಂಜಾಯ್ ಮಾಡುತ್ತಾ, ಶಾಪಿಂಗ್ ಮಾಡುತ್ತಿರುವ ಫೋಟೊಗಳು ವೈರಲ್ ಆಗಿವೆ.
ರವೀಂದರ್ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇವರು ಜನಪ್ರಿಯ ಸೀರಿಯಲ್ ನಟಿ ಮಹಾಲಕ್ಷ್ಮಿ ಅವರನ್ನು ವಿವಾಹವಾಗಿದ್ದರು. ಇವರ ಮದುವೆ ಹಲವರಿಗೆ ಶಾಕ್ ನೀಡಿದ್ದು, ಮದುವೆ ಫೋಟೊಗಳು ಸಖತ್ ಟ್ರೋಲ್ ಆಗಿದ್ದವು.
ಅರಸಿ ಧಾರಾವಾಹಿ ಮೂಲಕ ಮಹಾಲಕ್ಷ್ಮಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಇಂದಿನವರೆಗೆ, ಕಿರುತೆರೆಯಲ್ಲಿ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ತಮಿಳು ಸೀರಿಯಲ್ ವೀಕ್ಷಕರ ಮನ ಗೆದ್ದಿದ್ದರು.
ಮಹಾಲಕ್ಷ್ಮಿ ಈ ಮೊದಲು ಅನಿಲ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು. ಅನಿಲ್ ಮತ್ತು ಮಹಾಲಕ್ಷ್ಮಿ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಇದೀಗ ಮಹಾಲಕ್ಷ್ಮೀಯ ಮಗನನ್ನು ಜೊತೆಯಾಗಿ ಕರೆದುಕೊಂಡು ಫ್ಯಾಮಿಲಿ ಶಾಪಿಂಗ್ ಮಾಡಿದೆ.
ರವೀಂದರ್ ತಮ್ಮ ಪತ್ನಿ ಮಹಾಲಕ್ಷ್ಮೀ ಹಾಗೂ ಪುತ್ರನೊಂದಿಗೆ ಎಂಜಾಯ್ ಮಾಡುತ್ತಿರುವ ಫೋಟೊ ವೈರಲ್ ಆಗಿದೆ. ಮಲ ತಂದೆಯಾಗಿದ್ದರೂ ರವೀಂದರ್ ಮಹಾಲಕ್ಷ್ಮೀ ಪುತ್ರನ ಮೇಲೆ ತೋರಿತ್ತಿರುವ ಪ್ರೀತಿಯನ್ನು ಜನ ಮೆಚ್ಚಿಕೊಂಡಿದ್ದಾರೆ.