2025ರ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳು: ಡೇಟಾ, ವ್ಯಾಲಿಡಿಟಿ, ಬೆಲೆ ಮಾಹಿತಿ

2025ರಲ್ಲಿ ರಿಲಯನ್ಸ್ ಜಿಯೋ ನೀಡುತ್ತಿರುವ ಪ್ರಿಪೇಯ್ಡ್ ಪ್ಲಾನ್‌ಗಳ ಬಗ್ಗೆ ತಿಳಿಯಿರಿ. ಡೇಟಾ, ವ್ಯಾಲಿಡಿಟಿ, ಬೆಲೆ ಮತ್ತು ಇತರ ವಿವರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

Reliance Jio prepaid recharge plans for 2025 price validity and Data Details mrq

ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ 2025ಕ್ಕೆ ಜಗತ್ತು ಕಾಲಿಡುತ್ತಿದೆ. ಹಾಗಾಗಿ 2025ಕ್ಕೆ ಜೀವನ ಹೇಗಿರಬೇಕು ಎಂಬುದರ ಬಗ್ಗೆ ಹಲವರು ಪ್ಲಾನ್ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲೊಂದು ಹಣಕಾಸಿನ ಪ್ಲಾನ್ ಸಹ ಆಗಿರುತ್ತದೆ. ಬೆಲೆ ಏರಿಕೆ ನಂತರ ಟ್ಯಾರಿಫ್ ಪ್ಲಾನ್‌ಗಳು ಸಹ ದುಬಾರಿಯಾಗಿವೆ. ಹಾಗಾಗಿ ರೀಚಾರ್ಜ್ ಮಾಡಿಕೊಳ್ಲುವ ಮುನ್ನ ಪ್ರಿಪೇಯ್ಡ್ ಪ್ಲಾನ್‌ಗಳ ಬಗ್ಗೆ ತಿಳಿದುಕೊಳ್ಳಬೇಕು.  ಭಾರತದ ನಂಬರ್ 1 ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ನೆಟ್‌ವರ್ಕ್ ಬಳಕೆದಾರರು ನೀವಾಗಿದ್ರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. 2025ರ ರಿಲಯನ್ಸ್ ಜಿಯೋ ಉತ್ತಮ ಪ್ರಿಪೇಯ್ಡ್ ಪ್ಲಾನ್‌ಗಳ ಮಾಹಿತಿ ಈ ಲೇಖನದಲ್ಲಿದೆ. 

ರಿಲಯನ್ಸ್ ಜಿಯೋ ತನ್ನ ಎಲ್ಲಾ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಕೆಲವೊಂದು ವಿಷಯಗಳು ಕಾಮನ್ ಆಗಿವೆ. ಎಲ್ಲ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಬಳಕೆದಾರರಿಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದು. ಪ್ರತಿದಿನ ಉಚಿತವಾಗಿ 100 ಎಸ್ಎಂಎಸ್ ಕಳುಹಿಸಬಹುದಾಗಿದೆ. ಇದರ ಜೊತೆಯಲ್ಲಿ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಆಕ್ಸೆಸ್ ಉಚಿತವಾಗಿ ಸಿಗಲಿದೆ. ಆದ್ರೆ ಪ್ರತಿಯೊಂದು ಪ್ಲಾನ್‌ನಲ್ಲಿ ಡೇಟಾ ಮತ್ತು ವ್ಯಾಲಿಡಿಟಿ ಬೇರೆ ಬೇರೆಯಾಗಿರುತ್ತದೆ.ಇಷ್ಟು ಮಾತ್ರವಲ್ಲ ರಿಲಯನ್ಸ್ ಜಿಯೋ ಬಳಕೆದಾರರಿಗೆ 5G ಕೆನೆಕ್ಟಿವಿಟಿಯನ್ನು ನೀಡುತ್ತಿದೆ. ಈ ಮೂಲಕ ಯಾವುದೇ ಅಡಚಣೆ ಇಲ್ಲದೇ ಲೈವ್ ಸ್ಟ್ರೀಮಿಂಗ್, ವಿಡಿಯೋ,  ಗೇಮಿಂಗ್ ಆನಂದಿಸಬಹುದು. 

1GB/Day Plans
ನೀವು ಸಾಮಾನ್ಯ ಬಳಕೆದಾರರಾಗಿದ್ರೆ ಕೈಗಟುಕುವ ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ 209 ರೂ.ಯ ಪ್ಲಾನ್ 22 ದಿನ  ವ್ಯಾಲಿಡಿಟಿ ಮತ್ತು 249 ರೂ.ಯ ಪ್ಲಾನ್ 28 ದಿನದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಎರಡೂ ಪ್ಲಾನ್‌ಗಳಲ್ಲಿ ಗ್ರಾಹಕರಿಗೆ ಪ್ರತಿದಿನ 1 GB ಡೇಟಾ ಸಿಗುತ್ತದೆ. ಇನ್ನುಳಿದಂತೆ ಅನ್‌ಲಿಮಿಟೆಡ್ ಕಾಲ್, ಎಸ್‌ಎಂಎಸ್ ಜೊತೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಆಕ್ಸೆಸ್ ಸಿಗುತ್ತದೆ. 

1.5GB/Day Plans
ನೀವು ಸಾಮಾನ್ಯಗಿಂತ ಹೆಚ್ಚು ಇಂಟರ್‌ನೆಟ್ ಬಳಕೆ ಮಾಡುತ್ತಿದ್ರೆ  18 ದಿನ ವ್ಯಾಲಿಡಿಟಿಯ ಪ್ಲಾನ್ 199 ರೂಪಾಯಿಯಲ್ಲಿ ಸಿಗುತ್ತದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ 27GB ಡೇಟಾ ಸಿಗುತ್ತದೆ.  319 ರೂಪಾಯಿಯ 1 ತಿಂಗಳ ಮತ್ತು 799 ರೂಪಾಯಿಯ 84 ದಿನ ವ್ಯಾಲಿಡಿಟಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಈ ಎರಡೂ ಪ್ಲಾನ್‌ಗಳಲ್ಲಿ ಪ್ರತಿದಿನ 1.5 GB ಡೇಟಾ ಸಿಗುತ್ತದೆ.

2GB/Day Plans
ಪ್ರತಿದಿನ 2GB ಡೇಟಾಗಾಗಿ 198 ರೂಪಾಯಿ (14 ದಿನ), 349 ರೂಪಾಯಿ (28 ದಿನ) ಪ್ಯಾಕ್ ಆಕ್ಟಿವೇಟ್  ಮಾಡಿಕೊಳ್ಳಬಹುದು.  ಈ ಪ್ಲಾನ್‌ಗಳ ಜೊತೆಯಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ 5G ಡೇಟಾ ಲಭ್ಯವಾಗುತ್ತದೆ. 1,299 ರೂಪಾಯಿ ಮತ್ತು 1029 ರೂಪಾಯಿಯ 84  ದಿನ ವ್ಯಾಲಿಡಿಟಿಯಲ್ಲಿಯೂ ಗ್ರಾಹಕರಿಗೆ 2GB ಡೇಟಾ ಜೊತೆ  Netflix Mobile subscription ಸಿಗುತ್ತದೆ.            

ಇದನ್ನೂ ಓದಿ: ಅಂಬಾನಿಗೆ ನಡುಕ ಹುಟ್ಟಿಸಿದ ವೊಡಾಫೋನ್ ಐಡಿಯಾ; ಫ್ರೀ ಇಂಟರ್‌ನೆಟ್‌ನ ಸೂಪರ್ ಹೀರೋ ಪ್ಲಾನ್ ತಂದ Vi

2.5GB and 3GB/Day Plans
ಇನ್ನು ಪ್ರತಿದಿನ  2.5GB ಅಥವಾ 3GB ಡೇಟಾಗಾಗಿ ಈ ಪ್ಲಾನ್‌ಗಳನ್ನುಆಕ್ಟಿವೇಟ್ ಮಾಡಿಕೊಳ್ಳಬಹುದು.  399 ರೂಪಾಯಿ (2.5GB+28 ದಿನ) ಅಥವಾ 1799 ರೂಪಾಯಿ (3GB+84 ದಿನ ವ್ಯಾಲಿಡಿಟಿ)  ಅಥವಾ 84 ದಿನ ವ್ಯಾಲಿಡಿಟಿಯ 1,199 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಪ್ರತಿದಿನ 3GB ಡೇಟಾ ಸಿಗುತ್ತದೆ.  ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಬೇಸಿಕ್, True Unlimited 5G ಅಪ್‌ಗ್ರೇಡ್ ಪ್ಯಾಕ್ ಸಿಗುತ್ತದೆ.  

4G ನೆಟ್‌ವರ್ಕ್ ಬಳಕೆದಾರರಿಗೆ ಡೇಟಾ ಬೂಸ್ಟ್ ಮಾಡಿಕೊಳ್ಳಲು  Rs 51, Rs 101, and Rs 151 ಪ್ಯಾಕ್‌ಗಳನ್ನು ಜಿಯೋ ನೀಡುತ್ತಿದೆ.  2025ರಲ್ಲಿ ಯಾವುದೇ ಟ್ಯಾರಿಫ್ ಬೆಲೆಯಲ್ಲಿ ಬದಲಾವಣೆ ಆಗದಿದ್ರೆ ಇದೇ ಪ್ಲಾನ್‌ಗಳು ಮುಂದುವರಿಯಲಿವೆ. ಜಿಯೋ ಮಾರುಕಟ್ಟೆಯಲ್ಲಿ ಬದಲಾವಣೆಗಳಿಗೆ ತಕ್ಕಂತೆ ಹೊಸ ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ.

ಇದನ್ನೂ ಓದಿ: 2025ರಲ್ಲಿ ರೀಚಾರ್ಜ್ ಮಾಡೋ ಮುನ್ನ ಏರ್‌ಟೆಲ್‌ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಒಮ್ಮೆ ನೋಡಿಕೊಳ್ಳಿ

Latest Videos
Follow Us:
Download App:
  • android
  • ios