Asianet Suvarna News Asianet Suvarna News

ಜಿಯೋ ಜೊತೆ ಸೇರಿ SpaceXನಿಂದ ರಿಮೋಟ್‌ ಏರಿಯಾಗಳಿಗೂ ಸೇವೆ

  • ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elan Musk) ಮಾಲೀಕತ್ವದ ಸ್ಪೇಸ್‌ ಎಕ್ಸ್‌ನಿಂದ ಭಾರತದಲ್ಲಿ ಟೆಲಿಕಾಂ ಸೇವೆ
  •  ಭಾರತದಲ್ಲಿ ತಮ್ಮ ಸೇವಾ ವಲಯ ವಿಸ್ತರಣೆಗೆ ಇಲ್ಲಿನ ಟೆಲಿಕಾಂ ಸಂಸ್ಥೆಗಳ ಜೊತೆ ಮಾತುಕತೆ 
Elon Musk-backed SpaceX likely to get in talks with Jio, Vodafone  collaboration snr
Author
Bengaluru, First Published Nov 6, 2021, 7:55 AM IST

ನವದೆಹಲಿ (ನ.06):  ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elan Musk) ಮಾಲೀಕತ್ವದ ಸ್ಪೇಸ್‌ ಎಕ್ಸ್‌ (Spacex) ಇದೀಗ ಭಾರತದಲ್ಲಿ ತಮ್ಮ ಸೇವಾ ವಲಯ ವಿಸ್ತರಣೆಗೆ ಇಲ್ಲಿನ ಟೆಲಿಕಾಂ ಸಂಸ್ಥೆಗಳ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. 

ಸ್ಪೇಸ್ ಎಕ್ಸ್‌ ಜೊತೆಗೆ ಭಾರತದ ಟೆಲಿಕಾಂ ಸೇವೆ ಪೂರೈಕೆದಾರರಾದ ರಿಲಿಯನ್ಸ್ ಜಿಯೋ, ವೊಡಾಫೋನ್, ಭಾರತ್ ನೆಟ್, ರೈಲೆಟ್‌ ಉಪಗ್ರಹ ಸಂವಹನ ಸಂಪರ್ಕ ನೀಡಲು ಸಹಯೋಗಕ್ಕಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ. 

ಭಾರತದ ಸ್ಟಾರ್‌ಲಿಂಕ್ ಮುಖ್ಯಸ್ಥ  ಸಂಜಯ್‌ ಭಾರ್ಗವ್ ಪ್ರಕಾರ ರಿಮೋಟ್‌  ಏರಿಯಾಗಳಲ್ಲಿ  ಉಪ ಗ್ರಹ ಸಂವಹನ ಹಾಗೂ ಬ್ರಾಡ್‌ ಬ್ಯಾಂಡ್‌ ಸೇವೆ ಸೇವೆಯನ್ನು ನೀಡಲು ಸಹಕಾರ  ನೀಡಲು ಆಫರ್ ನೀಡಲಾಗಿದೆ.  ಜ ಎಲಾನ್‌ ಮಸ್ಕ್‌ (Elan Musk) ಮಾಲೀಕತ್ವದ ಸ್ಪೇಸ್‌ ಎಕ್ಸ್‌ (Spacex) ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ (Star Link) ಭಾರತದಲ್ಲಿ 2022ರ ಡಿಸೆಂಬರ್‌ನಿಂದ ಉಪಗ್ರಹ (satellite) ಆಧರಿತ ಬ್ರಾಡ್‌ಬ್ಯಾಂಡ್‌ (Broadband) ಸೇವೆ ಆರಂಭಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ 2 ಲಕ್ಷ ಸಕ್ರಿಯ ಟರ್ಮಿನಲ್‌ಗಳಿಗೆ ಭಾರತ (India) ಸರ್ಕಾರದಿಂದ ಅನುಮತಿ ಕೋರಿದೆ.  ಇದರಿಮದ ಶೇ.80ರಷ್ಟು ಭಾರತದ ಗ್ರಾಮೀಣ ಭಾಗಗಳನ್ನು ಕವರ್ ಮಾಡಹುದಾಗಿದೆ.  

ಇನ್ನು  ಸ್ಟಾರ್ಲಿಂಕ್ ಗೆ ಅನುಮತಿ ನೀಡಿದಲ್ಲಿ 100 ಡಿವೈಸ್‌ಗಳನ್ನು ದೆಹಲಿ ಹಾಗೂ ಸುತ್ತಲಿನ ಗ್ರಾಮೀಣ ಜಿಲ್ಲೆಗಳಿಗೆ ನೀಡುವ  ಆಫರ್  ನೀಡಿದೆ.  12 ಗ್ರಾಮೀಣ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಅಲ್ಲದೇ ಅತ್ಯಂತ ದುರ್ಗ ಪ್ರದೇಶಗಳಲ್ಲಿಯೂ ಸಂಪರ್ಕ ನೀಡುವ ಗುರಿಯನ್ನು ಸ್ಟಾರ್‌ಲಿಂಕ್ ಹೊಂದಿದೆ ಎಂದು ಭಾರ್ಗವ ಹೇಳಿದರು. 

ನ.1ರಿಂದಲೇ ಕಚೇರಿ

‘ಸ್ಪೇಸ್‌ ಎಕ್ಸ್‌ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಕಮ್ಯುನಿಕೇಷನ್‌ ಪ್ರೈ.ಲಿ (SSCPL) ಭಾರತದಲ್ಲಿ ನ.1ರಿಂದ ತನ್ನ ಕಚೇರಿಯನ್ನು ಆರಂಭಿಸಿದೆ. ನಾವು ಇನ್ಮುಂದೆ ಪರವಾನಗಿ ಪಡೆಯಲು, ಬ್ಯಾಂಕ್‌ (Bank) ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದು’ ಕಂಪನಿಯ ಭಾರತದ ನಿರ್ದೇಶಕ ಸಂಜಯ್‌ ಭಾರ್ಗವ (Sanjay Bhargav) ತಿಳಿಸಿದ್ದಾರೆ.

ಭಾರತದಿಂದ ಈಗಾಗಲೇ ಸುಮಾರು 5000 ಬ್ರಾಡ್‌ಬ್ಯಾಂಡ್‌ ಆರ್ಡರ್‌ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಕಂಪನಿಯು ಸೆಕೆಂಡಿಗೆ 50ರಿಂದ 150 ಮೆಗಾ ಬೈಟ್‌ ವೇಗದಲ್ಲಿ ಡೇಟಾ (Data ) ಸೌಲಭ್ಯ ಒದಗಿಸಲು ಪ್ರತಿ ಗ್ರಾಹಕರಿಂದ 7,350 ರು. ಡೆಪಾಸಿಟ್‌ (Deposit) ಶುಲ್ಕ ಪಡೆಯಲಿದೆ. ಈ ಮೂಲಕ ಈಗಾಗಲೇ ಭಾರತದಲ್ಲಿ ಅಸ್ತಿತ್ವದಲ್ಲಿರುವ ರಿಲಯನ್ಸ್‌ (Reliance), ಜಿಯೋ, ಭಾರತಿ ಏರ್‌ಟೆಲ್‌, ವಡಾಫೋನ್‌ ಬ್ರಾಡ್‌ಬ್ಯಾಂಡ್‌ ಸೇವೆಗಳಿಗೆ ಪೈಪೋಟಿ ನೀಡಲಿದೆ.

ಜಿಯೋ ಬ್ರಾಡ್ ಬ್ಯಾಂಡ್

 41ನೇ ವಾರ್ಷಿಕ ಮಹಾಸಭೆಯಲ್ಲಿ ರಿಲಯನ್ಸ್ ಮುಖ್ಯಸ್ಥ  ಮುಕೇಶ್ ಅಂಬಾನಿ,  ಜಿಯೋಗಿಗಾಫೈಬರ್ ಸೇವೆ ಹಾಗೂ ಜಿಯೋ ಫೋನ್ 2 ಬಿಡುಗಡೆ ಬಗ್ಗೆ ಪ್ರಕಟಿಸಿದ್ದರು.

ಜಿಯೋಗಿಗಾಫೈಬರ್ ಹೊಸ ಬ್ರಾಡ್‌ಬ್ಯಾಂಡ್ ಸೇವೆಯಾಗಿದ್ದು, 1 ಜಿಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೇವೆ ಕಲ್ಪಿಸುವುದಾಗಿ ಹೇಳಿದ್ದರು.  ಅದೇ ರೀತಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಫೋನ್‌ನ ಹೊಸ ಹಾಗೂ ಮೇಲ್ದರ್ಜೆಗೇರಿಸಲಾಗಿರುವ ಜಿಯೋ ಫೋನ್ 2 ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ಈ 2 ಸೇವೆ/ಫೋನ್‌ ಗಳನ್ನು ಪಡೆಯಲು ಸ್ವಾತಂತ್ರ್ಯ ದಿನದಂದು [ಆ.15]  ನೋಂದಣಿ ಆರಂಭಿಸಲಾಗಿದೆ.

ನೋಂದಣಿ ಹೇಗೆ:

ಜಿಯೋನ ಜಿಯೋ ಫೋನ್ 2 ಮತ್ತು ಜಿಯೋಗಿಗಾಫೈಬರ್ ಹೊಸ ಸೇವೆಗಳನ್ನು ಪಡೆಯಬಯಸುವ ಗ್ರಾಹಕರು MyJio ಆ್ಯಪ್ ಅಥವಾ Jio.Com.ನಲ್ಲಿ ನೋಂದಣಿ ಮಾಡಬೇಕು.

ತಮ್ಮ ಹೆಸರು, ನೋಂದಾಯಿತ ಈಮೇಲ್ ವಿಳಾಸವನ್ನು ನಮೂದಿಸಿ ಶುಲ್ಕವನ್ನು ಪಾವತಿಸಬೇಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್,  ಅಥವಾ ಜಿಯೋಮನಿ, ಪೇಟಿಎಂನಂತಹ ವ್ಯಾಲೆಟ್ ಆ್ಯಪ್‌ಗಳ ಮೂಲಕವೂ ಶುಲ್ಕವನ್ನು ಪಾವತಿಸಬಹುದಾಗಿದೆ.

ಜಿಯೋ ಗಿಗಾ ಫೈಬರ್ ಸೇವೆಯೂ ಸದ್ಯ ಬೀಟಾ-ಪರೀಕ್ಷೆ ಹಂತದಲ್ಲಿದೆ. ಯಾವ ಸ್ಥಳದಿಂದ ಹೆಚ್ಚು ಬೇಡಿಕೆ ಬರುತ್ತದೋ ಆ ಸ್ಥಳಗಳಿಗೆ ಆದ್ಯತೆಯ ಮೇರೆಗೆ ಜಿಯೋಗಿಗಾ ಫೈಬರ್ ಸಂಪರ್ಕ ಕಲ್ಪಿಸಲಾಗುವುದು ಎಂದು ಮುಕೇಶ್ ಅಂಬಾನಿ ಪ್ರಕಟಿಸಿದ್ದರು.

ಜಿಯೋ ಗಿಗಾ ಫೈಬರ್  ಸಂಪರ್ಕ ಅಳವಡಿಸಲು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಕಂಪನಿಯು ವಿಧಿಸುತ್ತಿಲ್ಲ.  ಆದರೆ ಗ್ರಾಹಕರು  ₹4500 ರಿಫಂಡೇಬಲ್ ಡಿಪಾಸಿಟನ್ನು ಪಾವತಿಸಬೇಕಾಗುತ್ತದೆ. 

Follow Us:
Download App:
  • android
  • ios