ಜಿಯೋನಿಂದ ಬ್ರಾಡ್‌ಬ್ಯಾಂಡ್ ಸೇವೆ; ಸ್ಪೀಡ್ ಹೇಗಿದೆ? ಎಲ್ಲಿ? ಯಾವಾಗ? ಹೇಗೆ? ಇಲ್ಲಿದೆ ಫುಲ್ ಡೀಟೆಲ್ಸ್
ಮೊಬೈಲ್ ಸೇವೆ, ಮೊಬೈಲ್ ಫೋನ್ ಬಳಿಕ ಇದೀಗ ರಿಲಾಯನ್ಸ್ ಜಿಯೋ ಕಂಪನಿಯು ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಈ ಹೊಸ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸ್ಪೀಡ್ ಎಷ್ಟು? ಯಾವಾಗ ಆರಂಭ? ಎಲ್ಲಿ ಶುರು? ಹೇಗೆ ಪಡೆಯಬೇಕು? ಇಲ್ಲಿದೆ ಫುಲ್ ಡಿಟೇಲ್ಸ್...
ಗುರುವಾರ ನಡೆದ 41ನೇ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿರುವ ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಜಿಯೋಗಿಗಾಫೈಬರ್ ಸೇವೆಯನ್ನು ಪ್ರಕಟಿಸಿದ್ದಾರೆ. ಈ ಹೊಸ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸ್ಪೀಡ್ ಎಷ್ಟು? ಯಾವಾಗ ಆರಂಭ? ಎಲ್ಲಿ ಶುರು? ಹೇಗೆ ಪಡೆಯಬೇಕು? ಇಲ್ಲಿದೆ ಫುಲ್ ಡಿಟೇಲ್ಸ್...
• ಈ ಸೇವೆಯ ಮೂಲಕ ಗೃಹಬಳಕೆ, ಸಣ್ಣ ವ್ಯಾಪಾರ ಮತ್ತು ಬೃಹತ್ ಉದ್ಯಮಗಳಿಗೆ ಪ್ರಯೋಜನವಾಗಲಿದೆ
• ಜಿಯೋಗಿಗಾಫೈಬರ್ ಮೂಲಕ 1 ಜಿಬಿಪಿಎಸ್ ವರೆಗೆ ಅತೀವೇಗದ ಇಂಟರ್ನೆಟ್ ಸೇವೆ ಒದಗಿಸುವ ಉದ್ದೇಶ
• ಗಿಗಾಫೈಬರ್ ಸೇವೆ ಪಡೆಯಲು ಗಿಗಾರೂಟರ್ ಮತ್ತು ಗಿಗಾ ಟಿವಿ ಸೆಟ್-ಟಾಪ್ ಬಾಕ್ಸ್ ಸೇವೆ
• ಗ್ರಾಹಕರಿಗೆ ಒಂದು ಗಂಟೆಯೊಳಗೆ ಜಿಯೋಗಿಗಾಫೈಬರ್ ಸಂಪರ್ಕ ಒದಗಿಸಲಾಗುವುದು
• ಜಿಯೋಗಿಗಾಫೈಬರ್ ಸಂಪರ್ಕ ಪಡೆಯಲು ಇಚ್ಚಿಸುವವರು ಆಗಸ್ಟ್ 15 ರಿಂದ ಮೈಜಿಯೋ ಅಥವಾ ಜಿಯೋ.ಕಾಂನಲ್ಲಿ ನೋಂದಣಿಮಾಡಿಕೊಳ್ಳಬಹುದು.
• ಯಾವ ಪ್ರದೇಶದಿಂದ ಹೆಚ್ಚು ಬೇಡಿಕೆ ಬರುತ್ತದೋ ಅಲ್ಲಿ ಈ ಸೇವೆಯನ್ನು ಮೊದಲು ಒದಗಿಸಲಾಗುತ್ತದೆ