ಬೆಂಗಳೂರು (ನ.25): ನಿಮ್ಮ ಮೇಲೆ ಯಾರಾದರೂ ನಿಗಾ ಇಡೋದು ಓಕೆ ಅಂತಾದ್ರೆ ಪರ್ವಾಗಿಲ್ಲ, ಇಲ್ಲದಿದ್ರೆ ಕೂಡಲೇ ವಾಟ್ಸಪನ್ನು ನಿಮ್ಮ ಫೋನಿನಿಂದ ಡಿಲೀಟ್ ಮಾಡಿ ಎಂದು ಟೆಲಿಗ್ರಾಂ ಮುಖ್ಯಸ್ಥ ಪ್ಯಾರೆಲ್ ಡ್ಯುರೋವ್ ಹೇಳಿದ್ದಾರೆ.

ಫೇಸ್ಬುಕ್ ಒಡೆತನದ ವಾಟ್ಸಪ್ ಇತ್ತೀಚೆಗೆ ತಪ್ಪು ಕಾರಣಗಳಿಗೆ ಸುದ್ದಿಯಲ್ಲಿದೆ.  ನಿಮ್ಮ ಫೋನಿನಲ್ಲಿರುವ ಮಾಹಿತಿ ಕದಿಯಲು, ಬೇಹುಗಾರಿಕೆ ನಡೆಸಲು ವಾಟ್ಸಪನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮುಂದೊಂದು ದಿನ ನಿಮ್ಮ ಎಲ್ಲಾ ವೈಯುಕ್ತಿಕ ಮಾಹಿತಿ  ಬಟಾಬಯಲಾಗಬಾರದು, ಸುರಕ್ಷಿತವಾಗಿರಬೇಕು ಎಂದು ನೀವು ಬಯಸುವವರಾದರೆ ಕೂಡಲೇ ಡಿಲೀಟ್ ಮಾಡಿ ಎಂದು ಡ್ಯುರೋವ್  ಸಲಹೆ ನೀಡಿದ್ದಾರೆ.

ವಾಟ್ಸಪ್ ವಿಶ್ವದಾದ್ಯಂತ 1.6 ಬಿಲಿಯನ್ ಬಳಕೆದಾರರನ್ನು ಹೊಂದಿದ್ದರೆ, ಟೆಲಿಗ್ರಾಂ 200 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ವಾಟ್ಸಪ್ ಮೂಲಕ ಬರೋ mp4 ಫೈಲ್ ಒಂದು ಬಳಕೆದಾರರ ವೈಯುಕ್ತಿಕ ಮತ್ತು ಮಹತ್ವದ ಮಾಹಿತಿಗಳನ್ನು ಕದಿಯುತ್ತಿರುವುದು ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿತ್ತು.

ಇಸ್ರೇಲ್‌ನ ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಬಳಸಿ ಭಾರತೀಯರು ಸೇರಿದಂತೆ ವಿಶ್ವದ 4 ಖಂಡಗಳ 1400 ಮಂದಿಯ ಮೊಬೈಲ್‌ಗೆ  ಕನ್ನ ಹಾಕಿರುವ ಗಂಭೀರ ಪ್ರಕರಣ ಕಳೆದ ತಿಂಗಳು  ಬೆಳಕಿಗೆ ಬಂದಿತ್ತು.

ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: