ಕೃಷ್ಣಮೋಹನ ತಲೆಂಗಳ 

ಮಂಗಳೂರು(ಏ. 20)  ದೇಶವೇ ಲಾಕ್‌ಡೌನ್ ಆಗಿರುವಾಗ ದೇವಸ್ಥಾನಗಳಿಗೆ ಭಕ್ತರ ಪ್ರವೇಶವೇ ನಿರ್ಬಂಧಿಸಲಾಗಿದೆ. ಆದರೂ ದ.ಕ.ಜಿಲ್ಲೆಯ ಪ್ರಸಿದ್ಧ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದದ ಅಲಂಕೃತ ಭ್ರಮರಾಂಬೆಯ ದರ್ಶನ ಭಕ್ತರ ಅಂಗೈಯಲ್ಲೇ ದಿನಕ್ಕೆರಡು ಬಾರಿ ಆಗುತ್ತಿದೆ! ಇದನ್ನು ಸಾಧ್ಯವಾಗಿಸಿದ್ದು ತಂತ್ರಜ್ಞಾನ.

ಕಟೀಲು ದೇವಸ್ಥಾನಕ್ಕೆ ದೇಶ, ವಿದೇಶಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಸ್ಥಳೀಯವಾಗಿಯೂ ಲಾಕ್‌ಡೌನ್ ಬಳಿಕವೂ ಕಟೀಲು ದೇವಿ ದರ್ಶನಕ್ಕೆ ಕಾಲ್ನಡಿಗೆಯಲ್ಲೂ ಸ್ಥಳೀಯ ಭಕ್ತರು ಬರುತ್ತಿದ್ದರು. ಆದರೆ, ನಿಯಮಾನುಸಾರ ದೇವಸ್ಥಾಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಗರ್ಭಗುಡಿಯಲ್ಲಿ ದೇವಿಗೆ ಪೂಜೆ ನಿರಂತರವಾಗಿ ನಡೆಯುತ್ತಿದೆ. ಭಕ್ತರಿಗೆ ದೇವಿ ದರ್ಶನ ತಪ್ಪಬಾರದು ಎಂಬ ಕಾರಣಕ್ಕೆ ಅರ್ಚಕರು, ಪೂಜೆಯ ಬಳಿಕ ಅಲಂಕೃತ ದೇವಿಯ ಫೋಟೋವನ್ನು ಬೆಳಗ್ಗೆ ಮತ್ತು ಸಂಜೆ ಜಾಲತಾಣಗಳ ಮೂಲಕ ಹಂಚಿಕೊಳ್ಳಲು ಶುರು ಮಾಡಿದರು.

ಎರಡು ಲಕ್ಷ ಅರ್ಚಕರ ಜೀವನಕ್ಕೆ ಲಾಕ್ ಡೌನ್ ಕುತ್ತು

ಇದಕ್ಕೆೆಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಫೋಟೋ ವಾಟ್ಸಪ್ (ಬ್ರಾಾಡ್‌ಕಾಸ್‌ಟ್‌ ಮೆಸೇಜ್‌ಗಳ ಮೂಲಕ) ಹಾಗೂ ಫೇಸ್‌ಬುಕ್‌ನ ದೇವಸ್ಥಾಾನದ ಪುಟದ ಮೂಲಕ ಹಂಚಿಕೆಯಾಗಿ ಕ್ಷಣ ಮಾತ್ರದಲ್ಲಿ ಸಾವಿರಾರು ಮಂದಿಯನ್ನು ತಲಪುತ್ತಿತ್ತು. ಕಳೆದ ಸುಮಾರು 15 ದಿನಗಳಿಂದ ಪೂಜೆ ಮುಗಿದ ಕೆಲವೇ ನಿಮಿಷಗಳಲ್ಲಿ ಸಹಸ್ರಾರು ಮಂದಿಯ ಸ್ಟೇಟಸ್‌ಗಳಲ್ಲಿ ಕಟೀಲು ದೇವಿಯ ಫೋಟೋಗಳು ರಾರಾಜಿಸುತ್ತಿವೆ. ಮುಂಬೈ, ದುಬೈಯ ಭಕ್ತರೂ ಕಾತರದಿಂದ ಕಾದು ಅದೇ ಸಮಯಕ್ಕೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಬ್ರಾಡ್ ಕಾಸ್ಟ್ ಮೆಸೇಜ್: 

ಜನತೆಗೆ ಶ್ರೀ ದೇವಿಯ ದರ್ಶನ ಭಾಗ್ಯ ವಂಚನೆಯಾಗಬಾರದು ಅಂತ ಲಾಕ್‌ಡೌನ್ ಘೋಷಣೆ ಬಳಿಕ ದಿನಕ್ಕೆರಡು ಬಾರಿ ಪೂಜೆಯ ನಂತರ ದೇವಿಯ ಅಲಂಕೃತ ಫೋಟೋಗಳನ್ನು ಬ್ರಾಾಡ್‌ಕಾಸ್‌ಟ್‌ ಮೆಸೇಜ್ ಮೂಲಕ ಆಸಕ್ತ ಭಕ್ತರಿಗೆ ಪ್ರತಿದಿನ ಕಳುಹಿಸಲು ಆರಂಭಿಸಿದೇವು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಿಯೆ ಬಂತು. ಫೋಟೋ ಕಳುಹಿಸುವುದು ಸ್ವಲ್ಪ ವಿಳಂಬವಾದರೂ ಯಾಕೆ ಬರಲಿಲ್ಲ ಅಂತ ಕೇಳಿ ತರಿಸಿಕೊಳ್ಳುವ ಭಕ್ತರೂ ಇದ್ದಾಾರೆ. ಇದು ಈ ಅಭಿಯಾನದಕ್ಕೆ ಸಿಕ್ಕ ಜನಪ್ರಿಯತೆಗೆ ಸಾಕ್ಷಿ ಎನ್ನುತ್ತಾರೆ  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ  ಶ್ರೀಹರಿದಾಸ ಆಸ್ರಣ್ಣ,.

ಏ.13ರಿಂದ 21ರ ತನಕ ಕಟೀಲು ವರ್ಷಾವಧಿ ಜಾತ್ರೆ ದೇವಳದೊಳಗೆ ಅತ್ಯಂತ ಸರಳವಾಗಿ ಬೆರಳೆಣಿಕೆಯ ಅರ್ಚಕ ವೃಂದದೊಂದಿಗೆ ನಡೆದಿದ್ದು, ಉತ್ಸವ ಕಾಲದ ಅಲಂಕೃತ ಫೋಟೋಗಳು ಬಹಳಷ್ಟ ವೈರಲ್ ಆಗಿದ್ದವು. ಕಟೀಲಿನ ಬಳಿಕ ಮಂಗಳೂರಿನ ಮಂಗಳಾದೇವಿ, ಏಳಿಂಜೆ ಜನಾರ್ದನ ದೇವಸ್ಥಾನಗಳ ದೇವರ ಫೋಟೋಗಳೂ ವಾಟ್ಸಪ್‌ನಲ್ಲಿ ವೈರಲ್ ಆಗುತ್ತಿವೆ.

ಜಾತ್ರೆ, ಹಬ್ಬ, ಹರಿದಿನಗಳ ಸದ್ದಿಲ್ಲ; ಆನ್ ಲೈನ್ ಇದೆಯಲ್ಲ

ಅರ್ಚಕರು ಬ್ರಾಡ್‌ಕಾಸ್ಟ್ ಮೆಸೇಜ್ ಹಾಗೂ ವಾಟ್ಸಪ್ ಗ್ರೂಪುಗಳಿಗೆ ಫೋಟೋ ಶೇರ್ ಮಾಡಿದ ತಕ್ಷಣ ಅದು ಫಾರ್ವರ್ಡ್ ಆಗುತ್ತಾ ಹೋಗುತ್ತದೆ. ಏಕಕಾಲಕ್ಕೆ ಫೋಟೋಗಳನ್ನು ಹಂಚಿಕೊಳ್ಳಲು ಪ್ರತ್ಯೇಕ ಗ್ರೂಪ್ ಮಾಡಿದವರೂ ಇದ್ದಾರೆ. ಈ ಮೂಲಕ ರೇಶ್ಮೆ ಸೀರೆ ಹಾಗೂ ಮಲ್ಲಿಗೆಗೆಳಿಂದ ಅಲಂಕೃತ ದೇವಿಯ ಫೋಟೋಗಳು ಭಕ್ತರ ಮೊಬೈಲುಗಳಲ್ಲಿ ರಾರಾಜಿಸುತ್ತಿವೆ.

ಕೇಮಾರು ಶ್ರೀ ಉತ್ಸಾಹ:
ಮೂಡುಬಿದಿರೆ ಕೊಡ್ಯಡ್ಕದ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲ ದಾಸ ಸ್ವಾಮೀಜಿ ಈ ಥರ ದೇವರ ಫೋಟೋಗಳನ್ನು ಲಾಕ್‌ಡೌನ್‌ಗಿಂತಲೂ ಮೊದಲೇ ಜಾಲತಾಣಗಳಲ್ಲಿ ಪ್ರಚುರ ಪಡಿಸುತ್ತಿದ್ದರು. ಈಗ ಅದನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಲಾಕ್‌ಡೌನ್ ಬಳಿಕ ವಿವಿಧ ದೇವಸ್ಥಾನಗಳ ಅಲಂಕೃತ ದೇವರ ಫೋಟೋಗಳನ್ನು ಅದೇ ಹೊತ್ತಿಗೆ ಕಾದು ಜನ ಕೇಳಿ ಪಡೆದುಕೊಳ್ಳುತ್ತಾರೆ ಎನ್ನುತ್ತಾರೆ ಅವರು. 

ದೇಶದ ವಿವಿಧ ದೇವಸ್ಥಾಾನಗಳ ಸಂಪರ್ಕ ಹೊಂದಿರುವ ಸ್ವಾಮೀಜಿ, ಪಂಡರಾಪುರದ ಪಾಂಡುರಾಗ, ಉಜ್ಜೈಯಿನಿದ ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೌರಾಷ್ಟ್ರದ ಸೋಮನಾಥ ಜ್ಯೋತಿರ್ಲಿಂಗ, ನಾಸಿಕ್‌ನ ತ್ರೈಯಂಬಕೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶದ ಉಜ್ಜೈಯಿನಿ ಸಿದ್ಧಪೀಠ, ಕೊಲ್ಹಾಪುರದ ಮಹಾಲಕ್ಷ್ಮೀ, ಕೋಲ್ಕೊತ್ತಾ ಕಾಳಿ ಘಾಟ್, ಹಿಮಾಚಲ ಪ್ರದೇಶದ ಬೈದ್ಯನಾಥ ಕ್ಷೇತ್ರ, ಪೂನಾದ ದಗಡು ಗಣಪತಿ ಕ್ಷೇತ್ರ, ಶಿರ್ಡಿ ಸಾಯಿ ಬಾಬ ಕ್ಷೇತ್ರ, ಜಮ್ಮು ಕಾಶ್ಮೀರದ ವೈಷ್ಣೋದೇವಿ ಕ್ಷೇತ್ರ, ಅಯೋಧ್ಯೆಯ ಹನುಮಾನ್ ಗಾಧಿ ಮತ್ತಿತರ ಪ್ರಸಿದ್ಧ ಕ್ಷೇತ್ರಗಳಲ್ಲಿ ಪೂಜೆಯಾದ ತಕ್ಷಣ ಅಲ್ಲಿನ ದೇವರ ಫೋಟೋ ಅಥವಾ ವಿಡಿಯೋ ತುಣುಕುಗಳು ಅವರಿಗೆ ತಲಪುತ್ತವೆ. ಅವುಗಳನ್ನು ಅವರು ತಾವು ಸ್ಟೇಟಸ್‌ಗಳಲ್ಲಿ ಹಾಕುವುದಲ್ಲದೆ, ಆಸಕ್ತರಿಗೆ ಫಾರ್ವರ್ಡ್ ಮಾಡುತ್ತಾಾರೆ. ಕೆಲವೇ ನಿಮಿಷಗಳಲ್ಲಿ ಉತ್ತರ ಭಾರತದ ಈ ದೇವರ ಫೋಟೋಗಳು ಪ್ರತಿದಿನ ಸಾವಿರಾರು ಮಂದಿಯನ್ನು ಕೇಮಾರು ಶ್ರೀಗಳ ಮುಖಾಂತರ ತಲಪುತ್ತಿದೆ.

ಮಾತ್ರವಲ್ಲ ಕಟೀಲು ದೇವಿಯ ಫೋಟೋವೂ ಕ್ಷಣಮಾತ್ರದಲ್ಲಿ ಮೊಬೈಲ್ ಮೂಲಕ ಉತ್ತರ ಭಾರತದ ಸಾಧು ಸಂತರನ್ನು ತಲಪುತ್ತಿದೆಯಂತೆ. ದೇವರ ಫೋಟೋಗಳು ಉತ್ತರ-ದಕ್ಷಿಣದ ಸೇತುವಾಗಿದೆ ಎನ್ನುತ್ತಾರೆ ಸ್ವಾಮೀಜಿ.

ದೇವರ ದರ್ಶನ ಭಕ್ತರಿಗೆ ಮುಕ್ತವಾಗಿರಬೇಕು, ಹಿಂದೆ ಋಷಿ ಮುನಿಗಳ ಕಾಲದಲ್ಲಿ ಆಧ್ಯಾಾತ್ಮಿಕ ಸಂದೇಶವನ್ನು ಜನರಿಗೆ ತಲುಪಿಸಲು ಕಷ್ಟವಿತ್ತು. ಈಗ ತಂತ್ರಜ್ಞಾನವಿದೆ, ಇದರ ಸದುಪಯೋಗವಾಗಬೇಕು. ಜನರಿಗೆ ದಿನಾ ದೇವಸ್ಥಾನಕ್ಕೆ ಬರಲು ಆಗುವುದಿಲ್ಲ. ಈ ಮೂಲಕವಾದರೂ ದೇವರ ಶೀಘ್ರ ದರ್ಶನವಾಗಲಿ. ಲಾಕ್‌ಡೌನ್ ಮುಗಿದ ಬಳಿಕವೂ ಸಂಸ್ಕೃತಿಯ ಪ್ರಸಾರದ ಭಾಗವಾಗಿ ಈ ಅಭಿಯಾನವನ್ನು ಮುಂದುವರಿಸಬೇಕು,