Asianet Suvarna News Asianet Suvarna News

ಕೇಂದ್ರ ಸರ್ಕಾರದ ಒತ್ತಡದಿಂದ ತಮ್ಮ ಟ್ವೀಟರ್‌ ಫಾಲೊವರ್ಸ್ ಸಂಖ್ಯೆ ಕುಸಿತ: ರಾಹುಲ್ ಗಾಂಧಿ ಆರೋಪ!

*ಟ್ವೀಟರ್‌ ಸಿಇಓ ಪರಾಗ್‌ ಅಗರವಾಲ್‌ಗೆ ಪತ್ರ ಬರೆದ ಕಾಂಗ್ರೆಸ್‌ ನಾಯಕ
*ಫಾಲೋವರ್ಸ್‌ ಸಂಖ್ಯೆ ಬೆಳವಣಿಗೆ ಹಠಾತ್ ಸ್ಥಗಿತಗೊಂಡಿದೆ ಎಂದ ರಾಹುಲ್‌
*ಧ್ವನಿ ಹತ್ತಿಕ್ಕಲು ನರೇಂದ್ರ ಮೋದಿ ಸರ್ಕಾರದಿಂದ ಒತ್ತಡದ ಆರೋಪ

Congress Leader Rahul Gandhi letter to Twitter CEO Parag Agrawal alleging drop in Followers in His account mnj
Author
Bengaluru, First Published Jan 27, 2022, 12:13 PM IST

ನವದೆಹಲಿ (ಜ. 27): ಭಾರತದಲ್ಲಿ ವಾಕ್‌ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವಲ್ಲಿ ಟ್ವಿಟರ್‌ ನಿಯಮಗಳು ಕ್ಲಿಷ್ಟಕರವಾಗಿವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ. ಈ ಬೆನ್ನಲ್ಲೇ ಕಳೆದ ತಿಂಗಳು ಕಂಪನಿಯ ಸಿಇಒ ಪರಾಗ್‌ ಅಗರವಾಲ್‌ (Parag Agrawal) ಅವರಿಗೆ ಪತ್ರ ಬರೆದಿದ್ದು, ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ವ್ಯಾಪ್ತಿಯನ್ನು ಹತ್ತಿಕ್ಕಲು ಸರಕಾರ ಪಿತುರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.  ಡಿಸೆಂಬರ್ 27 ರಂದು  ಟ್ವಿಟ್ಟರ್ ಖಾತೆಯ ಡೇಟಾದ ವಿಶ್ಲೇಷಣೆ ಮತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೊಂದಿಗಿನ ಹೋಲಿಕೆಗಳನ್ನು ಒಳಗೊಂಡಿರುವ ರಾಹುಲ್‌ ಪತ್ರದಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ.

2021ರ ಮೊದಲ ಏಳು ತಿಂಗಳುಗಳಲ್ಲಿ ಸರಾಸರಿ 4 ಲಕ್ಷ ಅನುಯಾಯಿಗಳನ್ನು ತಮ್ಮ ಖಾತೆ ಪಡೆದಿತ್ತು. ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಎಂಟು ದಿನ ತಮ್ಮ ಖಾತೆ ಅಮಾನತುಗೊಳಿಸಿದ ನಂತರ ಹಲವಾರು ತಿಂಗಳುಗಳವರೆಗೆ ಬೆಳವಣಿಗೆಯು ಹಠಾತ್ ಸ್ಥಗಿತಗೊಂಡಿದೆ ಎಂದು ರಾಹುಲ್ ಗಾಂಧಿ  ಆರೋಪಿಸಿದ್ದಾರೆ."ಭಾರತದ ಕಲ್ಪನೆಯ ವಿನಾಶದಲ್ಲಿ ಟ್ವಿಟರ್ ಒಂದು ವೇದಿಕೆಯಾಗಲು ಬಿಡದಂತೆ ನಾನು ಶತಕೋಟಿಗೂ ಹೆಚ್ಚು ಭಾರತೀಯರ ಪರವಾಗಿ ನಿಮಗೆ ಪತ್ರ ಬರೆಯುತ್ತಿದ್ದೇನೆ" ಎಂದು ಕಾಂಗ್ರೆಸ್‌ ನಾಯಕ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಚೀನಾ ಸೇತುವೆ ಮೋದಿಯಿಂದ ಉದ್ಘಾಟನೆ: Rahul Gandhi ವ್ಯಂಗ್ಯ

"ಬಹುಶಃ ಇದು ಆಕಸ್ಮಿಕವಲ್ಲ, ನಿಖರವಾಗಿ ಈ ತಿಂಗಳುಗಳಲ್ಲಿ ನಾನು ದೆಹಲಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದೇನೆ, ರೈತರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದೇನೆ ಮತ್ತು ಇತರ ಅನೇಕ ಮಾನವ ಹಕ್ಕುಗಳ ವಿಷಯಗಳಲ್ಲಿ ಸರ್ಕಾರದ ವಿರುದ್ಧ ಮಾತನಾಡಿದ್ದೇನೆ. ವಾಸ್ತವವಾಗಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು  ಭರವಸೆ ನೀಡಿದ ನನ್ನ ವೀಡಿಯೊ ಇತ್ತೀಚಿನ ದಿನಗಳಲ್ಲಿ ಭಾರತದ ಯಾವುದೇ ರಾಜಕೀಯ ನಾಯಕರಿಂದ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋಗಿಂತ  ಹೆಚ್ಚು ವೀಕ್ಷಿಸಿದ ವೀಡಿಯೊಗಳಲ್ಲಿ ಒಂದಾಗಿದೆ" ಎಂದು  ರಾಹುಲ್ ಬರೆದಿದ್ದಾರೆ.‌

"ನನ್ನ ಧ್ವನಿಯನ್ನು ಮೌನಗೊಳಿಸಲು ಸರ್ಕಾರದಿಂದ ಅಪಾರ ಒತ್ತಡವಿದೆ ಎಂದು  ಜನರು ನನಗೆ ವಿಶ್ವಾಸಾರ್ಹವಾಗಿ, ವಿವೇಚನೆಯಿಂದ ತಿಳಿಸಿದ್ದಾರೆ. ಯಾವುದೇ ಕಾನೂನುಬದ್ಧ ಕಾರಣವಿಲ್ಲದೆ ನನ್ನ ಖಾತೆಯನ್ನು ಕೆಲವು ದಿನಗಳವರೆಗೆ ನಿರ್ಬಂಧಿಸಲಾಗಿತ್ತು. ಅದೇ ವ್ಯಕ್ತಿಗಳ ಒಂದೇ ರೀತಿಯ ಫೋಟೋಗಳನ್ನು ಟ್ವೀಟ್ ಮಾಡಿದ ಸರ್ಕಾರದ ಖಾತೆ ಒಳಗೊಂಡಂತೆ ಇನ್ನೂ ಅನೇಕ ಟ್ವಿಟರ್ ಹ್ಯಾಂಡಲ್‌ಗಳಿವೆ. ಆದರೆ ಆ ಯಾವುದೇ ಖಾತೆಗಳನ್ನು ನಿರ್ಬಂಧಿಸಲಾಗಿಲ್ಲ. ನನ್ನ ಖಾತೆಯನ್ನು ಮಾತ್ರ ಟಾರ್ಗೆಟ್‌ ಮಾಡಲಾಗಿದೆ ”ಎಂದು ರಾಹುಲ್‌ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿCovid Booster Dose: ನನ್ನ ಸಲಹೆ ಎಂದ ರಾಹುಲ್ ಗಾಂಧಿ

ಇದಕ್ಕೆ ಪ್ರತಿಕ್ರಯಿಸಿರುವ ಟ್ವೀಟರ್‌ ವಕ್ತಾರರು ಪ್ಲಾಟ್‌ಫಾರ್ಮ್‌ನಲ್ಲಿ ಅನುಸರಿಸುವವರ (Followers) ಸಂಖ್ಯೆಯು "ಅರ್ಥಪೂರ್ಣ" ಮತ್ತು "ನಿಖರ" ಎಂದು ಹೇಳಿದ್ದಾರೆ. "ಟ್ವಿಟ್ಟರ್ ಪ್ಲಾಟ್‌ಫಾರ್ಮ್ ಮ್ಯಾನಿಪ್ಯುಲೇಷನ್ ಮತ್ತು ಸ್ಪ್ಯಾಮ್‌ಗೆ ಯಾವುದೇ ಅವಕಾಶ ನೀಡುವುದಿಲ್ಲ. ನಾವು ಸ್ಪ್ಯಾಮ್ ಮತ್ತು ದುರುದ್ದೇಶಪೂರಿತ ಪೋಸ್ಟ್‌ ವಿರುದ್ಧ ತಂತ್ರಜ್ಞಾನದ ಸಾಧನಗಳನ್ನು ಬಳಸಿ ಕ್ರಮ ಕೈಗೊಳ್ಳತ್ತೇವೆ. ಉತ್ತಮ ಸೇವೆ ಮತ್ತು ವಿಶ್ವಾಸಾರ್ಹ ಖಾತೆಗಳನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಸತತ ಪ್ರಯತ್ನಗಳ ಭಾಗವಾಗಿ, ಅನುಯಾಯಿಗಳ ಸಂಖ್ಯೆಗಳು ಏರಿಳಿತವಾಗುತ್ತವೆ," ಎಂದು ಟ್ವೀಟರ್‌ ವಕ್ತಾರರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. 

 

 

Follow Us:
Download App:
  • android
  • ios