ನವದೆಹಲಿ[ಏ.24]: ವಿವಿಧ ಸಿನಿಮಾ ಹಾಗೂ ಕಾಮಿಡಿ ಡೈಲಾಗ್‌ಗಳ ಧ್ವನಿಗೆ ಸಾರ್ವಜನಿಕರು ತಮ್ಮದೇ ಆದ ಸಣ್ಣ ವಿಡಿಯೋಗಳನ್ನು ಪೋಣಿಸುವ ಅವಕಾಶ ಕಲ್ಪಿಸುವ ಜನಪ್ರಿಯ ಟಿಕ್‌ಟಾಕ್‌ ಆ್ಯಪ್‌ ಮೇಲೆ ಭಾರತದಲ್ಲಿ ನಿಷೇಧ ಹೇರಿದ ಪರಿಣಾಮ ತನಗೆ ದಿನಕ್ಕೆ ಸುಮಾರು 3.50 ಕೋಟಿ ರು.(5,00,000 ಅಮೆರಿಕ ಡಾಲರ್‌) ನಷ್ಟವಾಗುತ್ತಿದೆ ಚೀನಾದ ಕಂಪನಿ ಗೋಳಿಟ್ಟಿದೆ.

TikTok ಬೆನ್ನಲ್ಲೇ ಮತ್ತೊಂದು ಜನಪ್ರಿಯ ಆ್ಯಪ್ ಬ್ಯಾನ್?

ಅಲ್ಲದೆ, ಇದರಿಂದ 250 ಮಂದಿ ನೌಕರರು ಸಹ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಟಿಕ್‌ಟಾಕ್‌ ಆ್ಯಪ್‌ ನಿರ್ವಹಿಸುವ ಬೀಜಿಂಗ್‌ ಮೂಲದ ಬೈಟ್‌ಡ್ಯಾನ್ಸ್‌ ಟೆಕ್ನಾಲಜಿ ಕಂ. ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆ್ಯಪ್‌ ಮೇಲೆ ನಿಷೇಧ ಹೇರಿದ್ದ ಮದ್ರಾಸ್‌ ಹೈಕೋರ್ಟ್‌ಗೆ ಸೂಚನೆ ನೀಡಿರುವ ಸುಪ್ರೀಂಕೋರ್ಟ್‌ ಏ.24ರೊಳಗೆ ಪ್ರಕರಣ ಇತ್ಯರ್ಥಪಡಿಸುವಂತೆ ಸೂಚಿಸಿದೆ. ಇಲ್ಲದೇ ಹೋದಲ್ಲಿ ನಿಷೇಧದ ಆದೇಶ ರದ್ದಾಗಲಿದೆ ಎಂದು ಹೇಳಿದೆ.

ಟಿಕ್ ಟಾಕ್ ಬಳಕೆದಾರರಿಗೆ ಆಘಾತ, ಪ್ಲೇ ಸ್ಟೋರ್ ಚೆಕ್ ಮಾಡ್ಕೊಳ್ಳಿ!

ಭಾರತವೊಂದರಲ್ಲೇ 30 ಕೋಟಿ ಮಂದಿ ಟಿಕ್‌ಟಾಕ್‌ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಆದರೆ, ಇದು ಯುವ ಜನಾಂಗದ ಮೇಲೆ ಬೇರೆ ರೀತಿಯ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಟಿಕ್‌ಟಾಕ್‌ ಮೇಲೆ ನಿಷೇಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ನಿರ್ದೇಶನ ನೀಡಿತ್ತು.