ಚೀನಾದಲ್ಲಿ ವಿಶ್ವದ ಅತೀ ದೊಡ್ಡ ರೆಡಿಯೋ ಟೆಲಿಸ್ಕೋಪ್ ಕಾರ್ಯಾಚರಣೆ ಆರಂಭ!
ವಿಶ್ವದ ಅತಿದೊಡ್ಡ ರೇಡಿಯೊ ಟೆಲಿಸ್ಕೋಪ್ ಅನಾವರಣಗೊಳಿಸಿದ ಚೀನಾ| ಚೀನಾದ ನೈರುತ್ಯ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಟೆಲಿಸ್ಕೋಪ್ ನಿರ್ಮಾಣ| 500 ಮೀಟರ್ ಸುತ್ತಳತೆಯ ಗೋಳಾಕಾರದ ದೂರದರ್ಶಕ ಯಂತ್ರ| 0 ಫುಟ್ಬಾಲ್ ಮೈದಾನಗಳ ಗಾತ್ರ ಹೊಂದಿರುವ ಟೆಲಿಸ್ಕೋಪ್|ಭೂಮಿಯ ಹೊರತು ಜೀವನದ ಹುಡುಕಾಟಕ್ಕೆ ರೆಡಿಯೋ ಟೆಲಿಸ್ಕೋಪ್ ಸಹಾಯ|
ಬೀಜಿಂಗ್(ಜ.11): ವಿಶ್ವದ ಅತಿದೊಡ್ಡ ರೇಡಿಯೊ ಟೆಲಿಸ್ಕೋಪ್‌ನ್ನು ಚೀನಾ ಅನಾವರಣಗೊಳಿಸಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ಭೂಮಿಯ ಹೊರತು ಜೀವನದ ಹುಡುಕಾಟಕ್ಕೆ ಈ ರೆಡಿಯೋ ಟೆಲಿಸ್ಕೋಪ್ ಸಹಾಯ ಮಾಡಲಿದೆ ಎಂದು ಚೀನಾ ಹೇಳಿದೆ.
500 ಮೀಟರ್ ಸುತ್ತಳತೆಯ ಗೋಳಾಕಾರದ ದೂರದರ್ಶಕ ಯಂತ್ರ, 30 ಫುಟ್ಬಾಲ್ ಮೈದಾನಗಳ ಗಾತ್ರ ಹೊಂದಿದೆ ಎನ್ನಲಾಗಿದೆ.
ಚೀನಾದ ನೈರುತ್ಯ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಟೆಲಿಸ್ಕೋಪ್‌ನ್ನು ನಿರ್ಮಾಣ ಮಾಡಲಾಗಿದ್ದು, ಇದನ್ನು 'ಸ್ಕೈ ಐ' ಎಂದೂ ಕರೆಯಲಾಗುತ್ತದೆ.
ಚೀನಾದಲ್ಲಿ ನಿರ್ಮಾಣವಾಗಲಿದೆ ಅತಿ ಎತ್ತರದ ಟೆಲಿಸ್ಕೋಪ್
ರೆಡಿಯೋ ಟೆಲಿಸ್ಕೋಪ್ ಕಾರ್ಯಾಚರಣೆಗೆ ಚೀನಾ ಸರ್ಕಾರ ಅಧಿಕೃತ ಅನುಮೋದನೆ ನೀಡಿದ್ದು, ಇಂದಿನಿಂದಲೇ ಟೆಲಿಸ್ಕೋಪ್ ಕಾರ್ಯಾಚರಣೆ ನಡೆಸಲಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಸ್ಪಷ್ಟಪಡಿಸಿದೆ.
2016ರಲ್ಲಿ ಪ್ರಾರಂಭಗೊಂಡ ಈ ರೆಡಿಯೋ ಟೆಲಿಸ್ಕೋಪ್ ನಿರ್ಮಾಣ ಕಾರ್ಯ, ನಾಲ್ಕು ವರ್ಷಗಳ ಬಳಿಕ ಕಾರ್ಯಾಚರಣೆಗೆ ಸಿದ್ಧವಾಗಿದೆ.
ದೂರದರ್ಶಕದ ಪ್ರಯೋಗ ಕಾರ್ಯಾಚರಣೆಗಳು ಇಲ್ಲಿಯವರೆಗೆ ವಿಶ್ವಾಸಾರ್ಹ ಮತ್ತು ಸ್ಥಿರವಾಗಿದ್ದು, ವಿಶ್ವದ ಎರಡನೇ ಅತಿದೊಡ್ಡ ದೂರದರ್ಶಕಕ್ಕಿಂತ 2.5 ಪಟ್ಟು ಹೆಚ್ಚು ಕಾರ್ಯಕ್ಷಮತೆ ಹೊಂದಿದೆ ಎಂದು ಮುಖ್ಯ ಎಂಜಿನಿಯರ್ ಜಿಯಾಂಗ್ ಪೆಂಗ್ ಹೇಳಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ಕಡಿಮೆ-ಆವರ್ತನದ ಗುರುತ್ವ ತರಂಗ ಪತ್ತೆ ಮತ್ತು ಅಂತರತಾರಾ ವಲಯದ ಪ್ರದೇಶಗಳ ಕುರಿತು ಈ ಟೆಲಿಸ್ಕೋಪ್ ಸಂಶೋಧನೆ ನಡೆಸಲಿದೆ.
ಇನ್ನು ಚೀನಾ ತನ್ನದೇ ಆದ ಮಾನವಸಹಿತ ಬಾಹ್ಯಾಕಾಶ ಕೇಂದ್ರದ ನಿರ್ಮಾಣವನ್ನು ಮುಂದಿನ ವರ್ಷ ಪ್ರಾರಂಭಿಸಲು ಸಿದ್ಧತೆ ನಡೆಸಿದೆ.