ಚೀನಾದಲ್ಲಿ ನಿರ್ಮಾಣವಾಗಲಿದೆ ಅತಿ ಎತ್ತರದ ಟೆಲಿಸ್ಕೋಪ್
2021ಕ್ಕೆ ಮೊದಲ ದೂರದರ್ಶಕದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಚೀನಾ ಅಕಾಡೆಮಿ ಆಫ್ ಸೈನ್ಸ್ ತಿಳಿಸಿದೆ.
ವಿಶ್ವದ ಅತಿ ಎತ್ತರದ ಗುರುತ್ವ ತರಂಗ ದೂರದರ್ಶಕ (ಟೆಲಿಸ್ಕೋಪ್)ವನ್ನು ನಿರ್ಮಿಸಲು ಚೀನಾ ಮುಂದಾಗಿದೆ.
ಬಿಗ್ ಬ್ಯಾಂಗ್ ಸಿದ್ಧಾಂತದ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲು ಇದು ನೆರವಾಗಲಿದೆ ಎಂದು ಚೀನಾ ಹೇಳಿಕೊಂಡಿದೆ.
ವಿಶ್ವದ ಅತ್ಯಂತ ಕ್ಷೀಣವಾದ ಧ್ವನಿಯನ್ನೂ ಪತ್ತೆಹಚ್ಚುವ ಸಾಮರ್ಥ್ಯವನ್ನು ಈ ಟೆಲಿಸ್ಕೋಪ್ ಹೊಂದಿರಲಿದೆ. ಭಾರತದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಗೆ ಸಮೀಪದಲ್ಲೇ ₹1.28 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತದೆ. ಇದು ಸಮುದ್ರ ಮಟ್ಟದಿಂದ ಸುಮಾರು 5,250 ಮೀಟರ್'ನಲ್ಲಿ ತಲೆ ಎತ್ತಲಿದೆ.
2021ಕ್ಕೆ ಮೊದಲ ದೂರದರ್ಶಕದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಚೀನಾ ಅಕಾಡೆಮಿ ಆಫ್ ಸೈನ್ಸ್ ತಿಳಿಸಿದೆ.