ರದ್ದಾಯ್ತು ಮಹತ್ವಾಕಾಂಕ್ಷಿ ಇಸ್ರೋ ಚಂದ್ರಯಾನ - 2
ಮಹತ್ವಾಕಾಂಕ್ಷಿ ಚಂದ್ರಯಾನ 2 ಉಡಾವಣೆ ಮುಂದೂಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ರದ್ದು ಮಾಡಲಾಗಿದೆ.
ಶ್ರೀಹರಿಕೋಟಾ [ಜು.15]: ಶತಶತಮಾನಗಳಿಂದಲೂ ಅಗಣಿತ ರಹಸ್ಯದ ಗಣಿಯಾಗಿರುವ ಚಂದ್ರನಲ್ಲಿ ಶೋಧ ನಡೆಸುವ ಇಸ್ರೋದ ಚಂದ್ರಯಾನ 2 ಪ್ರಯಾಣ ಮುಂದೂಡಲಾಗಿದೆ.
"
ಅಂದುಕೊಂಡಂತೆ ನಡೆದಿದ್ದರೆ ಜುಲೈ 15ರ ಮುಂಜಾವು 2.51ಕ್ಕೆ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಹೊತ್ತ ಜಿಎಸ್‌ಎಲ್‌ವಿ ಎಂಕೆ 3 ರಾಕೆಟ್ ಬಾಹ್ಯಾಕಾಶಕ್ಕೆ ಚಿಮ್ಮಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಉಡಾವಣೆ ರದ್ದಾಗಿದೆ.
ಚಂದ್ರಯಾನ ನೌಕೆ ಉಡಾವಣೆಯಾದ ಕೆಲ ದಿನಗಳಲ್ಲಿ ನಿಗದಿತ ಕಕ್ಷೆಯಲ್ಲೇ ಭೂಮಿಯನ್ನು ಸುತ್ತು ಹೊಡೆದು ಬಳಿಕ ಹಂತಹಂತವಾಗಿ ಚಂದ್ರನ ಕಕ್ಷೆ ಪ್ರವೇಶಿಸಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯು ಇದಕ್ಕೆ ಅಡ್ಡಿಯಾಗಿದೆ.
ಉದ್ದೇಶ ಏನು?:
ಚಂದ್ರ ಸೃಷ್ಟಿಯಾಗಿದ್ದು ಹೇಗೆ? ಬೆಳವಣಿಗೆ ಹೊಂದಿದ್ದು ಹೇಗೆ? ಅಲ್ಲಿ ನೀರಿದೆಯಾ? ಯಾವೆಲ್ಲ ಖನಿಜಗಳು ಇವೆ? ಭೂಮಿಗೂ ಚಂದ್ರನಿಗೂ ಏನು ಸಂಬಂಧ ಎಂಬೆಲ್ಲಾ ಕೌತುಕ ಭೇದಿಸುವ ನಿಟ್ಟಿನಲ್ಲಿ ಇಸ್ರೋ ಈ ಅಧ್ಯಯನ ಕೈಗೊಂಡಿದೆ. ಜೊತೆಗೆ ಇದುವರೆಗೂ ಯಾರ ಕಣ್ಣಿಗೂ ಕಾಣಿಸಿದ ದಕ್ಷಿಣ ಧ್ರುವದ ಕುರಿತು ಬೆಳಕು ಚೆಲ್ಲವು ಉದ್ದೇಶ.