Asianet Suvarna News Asianet Suvarna News

BSNL 425 Days Validityಯೊಂದಿಗೆ ಭರ್ಜರಿ ರಿಚಾರ್ಜ್ ಪ್ಲ್ಯಾನ್: ಡಿ.31ಕ್ಕೆ ಆಫರ್‌ ಮುಕ್ತಾಯ!

BSNL 425 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ₹2399 ನಲ್ಲಿ ನೀಡುತ್ತಿದೆ. ಈ ಆಫರ್ ಡಿಸೆಂಬರ್ 31, 2021 ರವರೆಗೆ ಲಭ್ಯವಿರಲಿದೆ. ಇಂಥಹ  ದೀರ್ಘಾವಧಿಯ ವ್ಯಾಲಿಡಿಟಿ ಪ್ರಸ್ತುತ ಯಾವುದೇ ಟೆಲಿಕಾಂ ಕಂಪನಿ ನೀಡುತ್ತಿಲ್ಲ.

BSNL Rs 2399 prepaid plan giving 425 days validity until December 31 check all annual plans mnj
Author
Bengaluru, First Published Dec 20, 2021, 3:57 PM IST
  • Facebook
  • Twitter
  • Whatsapp

Tech Desk: ಇತ್ತೀಚೆಗೆ ಜಿಯೋ, ಏರಟೆಲ್‌ ಸೇರಿದಂತೆ ಬಹುತೇಕ ಟೆಲಿಕಾಂ ಕಂಪನಿಗಳು (Telecm Companies) ತಮ್ಮ ಪ್ರಿಪೇಡ್‌ ಪ್ಲಾನ್‌ಗಳ ದರವನ್ನು ಹೆಚ್ಚಿಸಿದ್ದವು. ‌ಇದರಿಂದ ಡಾಟಾ ಪ್ಯಾಕ್‌, ಟಾಕ್‌ಟೈಮ್ ಹಾಗೂ ಎಲ್ಲ ಸೇವೆಗಳು ದಬಾರಿಯಾಗಿವೆ. ಸಹಜವಾಗಿ ಬಳಕೆದಾರರು 1 ತಿಂಗಳು ಅಥವಾ 3 ತಿಂಗಳ ರಿಚಾರ್ಜ್‌ ಪ್ಯಾಕ್‌ಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಇಡೀ ವರ್ಷದಲ್ಲಿ ಒಂದೇ ಬಾರಿ ರೀಚಾರ್ಜ್‌ ಮಾಡಿ ವರ್ಷವೆಲ್ಲ ಎಂಜಾಯ್‌ ಮಾಡೋ ಬಗ್ಗೆ ಯಾವಾಗಾದ್ರೂ ಯೋಚನೆ ಮಾಡಿದ್ದೀರಾ?. ಯಸ್!‌ ಇಂಥಹದೊಂದು ಭರ್ಜರಿ ರಿಚಾರ್ಜ್‌ ಪ್ಯಾಕ್‌ ಬಿಎಸ್‌ಎನ್‌ಎಲ್ (BSNL) ನೀಡುತ್ತಿದೆ.  ಟೆಲಿಕಾಂ ಯೋಜನೆಗಳನ್ನು ಮತ್ತೆ ಮತ್ತೆ ರೀಚಾರ್ಜ್ ಮಾಡಲು ಇಷ್ಟಪಡದ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಸುದ್ದಿ ನಿಮಗೆ ಸಮಾಧಾನ ತರಬಹುದು! ಆದರೆ ಈ ಕೊಡುಗೆಯು ಪ್ರಚಾರದ ಸ್ವರೂಪದ್ದಾಗಿದ್ದು  ಡಿಸೆಂಬರ್ 31, 2021 ರವರೆಗೆ ಮಾತ್ರ ಲಭ್ಯವಿರಲಿದೆ ಎಂದು ಹೇಳಲಾಗಿದೆ.

ಪ್ರಮೋಷನಲ್‌ ಆಫರ್ ಡಿಸೆಂಬರ್ 31, 2021 ರವರೆಗೆ ಲಭ್ಯ!

ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) 425 ದಿನಗಳ ವ್ಯಾಲಿಡಿಟಿ ಯೋಜನೆ ಸೇರಿದಂತೆ ದೀರ್ಘಾವಧಿಯ ಯೋಜನೆಗಳನ್ನು ನೀಡುತ್ತಿದೆ. ಅಂತಹ ದೀರ್ಘಾವಧಿಯ ವ್ಯಾಲಿಡಿಟಿ  ಯಾವುದೇ ಟೆಲಿಕಾಂ ಕಂಪನಿ ನೀಡುತ್ತಿಲ್ಲ. BSNL 425 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ₹2500 ನಲ್ಲಿ ನೀಡುತ್ತಿದೆ. 455 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ಹೊರತುಪಡಿಸಿ, BSNL ಇನ್ನೂ ಹೆಚ್ಚಿನ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳನ್ನು ನೀಡುತ್ತಿದೆ. 

ರೂ 2399 ಬೆಲೆಯ ಪ್ರಿಪೇಯ್ಡ್ ಯೋಜನೆಗೆ ಹಿಂದೆ 365 ದಿನಗಳ ವ್ಯಾಲಿಡಿಟಿ ಇತ್ತು, ಆದರೆ ಕಂಪನಿ ಅದನ್ನು 60 ದಿನಗಳವರೆಗೆ ವಿಸ್ತರಿಸಿತು. ಈ ಕೊಡುಗೆಯು ಪ್ರಚಾರದ ಸ್ವರೂಪದ್ದಾಗಿದೆ ಮತ್ತು ಡಿಸೆಂಬರ್ 31, 2021 ರವರೆಗೆ ಲಭ್ಯವಿರುತ್ತದೆ. ರೂ 2399 ಪ್ಲಾನ್ ದಿನಕ್ಕೆ 3GB ಯ ನಂತರ 80 Kbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ. ಇದು ಯಾವುದೇ ನೆಟ್‌ವರ್ಕ್‌ಗೆ ದಿನಕ್ಕೆ 100 SMS ಕಳುಹಿಸಲು ಅವಕಾಶ ನೀಡುತ್ತದೆ ಮತ್ತು BSNL ಟ್ಯೂನ್ಸ್ ಮತ್ತು Eros Now Contentಗೆ 425 ದಿನಗಳವರೆಗೆ ಆ್ಯಕ್ಸಸ್ ನೀಡುತ್ತದೆ.‌‌

BSNL ಇತರ ಯೋಜನೆಗಳು:

BSNL ತನ್ನ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಗಳೊಂದಿಗೆ ವ್ಯಾಲಿಡಿಟಿ ವಿಷಯದಲ್ಲಿ BSNL ಉತ್ತಮ ಆಫರ್‌ ಗಳನ್ನು ನೀಡುತ್ತದೆ. ಇದು 24GB ಡೇಟಾ, ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಅನ್ನು ನೀಡುವ ರೂ 1499 ಬೆಲೆಯ ವಾರ್ಷಿಕ ಯೋಜನೆಯನ್ನು ಹೊಂದಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಹೊಂದಿದೆ.

100GB ಹೆಚ್ಚುವರಿ ಡೇಟಾ ಪ್ಲ್ಯಾನ್!

ಇದಕ್ಕಿಂತ ಕಡಿಮೆ ಬೆಲೆಯ ಯೋಜನೆಯು ರೂ 1999 ಬೆಲೆಯದ್ದಾಗಿದ್ದು 100GB ಹೆಚ್ಚುವರಿ ಡೇಟಾದೊಂದಿಗೆ 500GB ನಿಯಮಿತ ಡೇಟಾವನ್ನು ನೀಡುತ್ತದೆ. ಈ ಡೇಟಾ ಖಾಲಿಯಾದ ಬಳಿಕ  ವೇಗವನ್ನು 80 Kbps ಗೆ ಇಳಿಸಲಾಗುತ್ತದೆ. ಇದು ಯಾವುದೇ FUP ಮಿತಿಯಿಲ್ಲದೆ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಯೋಜನೆಯು ಯಾವುದೇ ನೆಟ್‌ವರ್ಕ್‌ಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ ಜೊತೆಗೆ  ಅನಿಯಮಿತ ಹಾಡು ಬದಲಾವಣೆ ಆಯ್ಕೆ ಮತ್ತು 365 ದಿನಗಳವರೆಗೆ Lokdhun content ಆ್ಯಕ್ಸಸ್ ನೀಡುತ್ತದೆ. ಇದು 365 ದಿನಗಳವರೆಗೆ Eros Now ಮನರಂಜನಾ ಸೇವೆಗೆ  ಕೂಡ ಆ್ಯಕ್ಸಸ್ ನೀಡುತ್ತದೆ.‌

ವರ್ಕ್‌ ಫ್ರಾಮ್‌ ಹೋಮ್‌ಗೆ ಸುಟೇಬಲ್‌ ಪ್ಲ್ಯಾನ್!

BSNL ಪ್ರಿಪೇಯ್ಡ್ ವಾರ್ಷಿಕ ಡೇಟಾ ವೋಚರ್ ಅನ್ನು ರೂ 1498 ಬೆಲೆಗೆ ಹೊಂದಿದೆ. ಡೇಟಾ ವೋಚರ್ ದಿನಕ್ಕೆ 2GB ಡೇಟಾದೊಂದಿಗೆ ಅನಿಯಮಿತ ವೇಗವನ್ನು ನೀಡುತ್ತದೆ ನಂತರ ವೇಗವನ್ನು 40 Kbps ಗೆ ಕಡಿಮೆ ಮಾಡಲಾಗುತ್ತದೆ. ವರ್ಕ್‌ ಫ್ರಾಮ್‌ ಹೋಮ್‌ ಮಾಡುವವರಿಗೆ  ಈ ಯೋಜನೆ ಉತ್ತಮ ಎಂದು ಹೇಳಬಹುದು. ಬಿಎಸ್‌ಎನ್ಎಲ್‌ ಕಡಿಮೆ ಆ್ಯಕ್ಟೀವ್‌ ಇರುವ   ಗ್ರಾಹಕರಿಗೂ 1199 ರೂಗಳಲ್ಲಿ ಪ್ರಿಪೇಯ್ಡ್ ಯೋಜನೆಯನ್ನು ಸಹ ನೀಡುತ್ತಿದೆ. ಈ ಯೋಜನೆಯು ಕೇರಳ ವಲಯದಲ್ಲಿ ಅನ್ವಯಿಸುತ್ತದೆ ಮತ್ತು 24GB ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ.

ಇದನ್ನೂ ಓದಿ:

1) UPI Payments Safety: ಹಣ ಪಾವತಿಗಾಗಿ UPI ಬಳಸುತ್ತಿರಾ? ಹಾಗಾದ್ರೆ ಈ ಮುನ್ನೆಚ್ಚರಿಕೆ ಕ್ರಮ ತಪ್ಪದೇ ಪಾಲಿಸಿ!

2) WhatsApp Voice Message Preview: ಧ್ವನಿ ಸಂದೇಶ ಕಳುಹಿಸುವ ಮುನ್ನವೇ ರೆಕಾರ್ಡಿಂಗ್ ಚೆಕ್‌ ಮಾಡುವುದು ಹೇಗೆ?

3) Most Spammed Countries: ಅತಿ ಹೆಚ್ಚು ಸ್ಪ್ಯಾಮ್ ಕರೆಗಳು ಸ್ವೀಕರಿಸಿದ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ!

Follow Us:
Download App:
  • android
  • ios