Asianet Suvarna News Asianet Suvarna News

ಬಿಎಸ್‌ಎನ್‌ಎಲ್‌ 4G ಲಾಂಚ್ ಯಾವಾಗ? ಮೋದಿ ಸರ್ಕಾರದಿಂದ ಮಹತ್ವದ ಮಾಹಿತಿ

ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ಅಳವಡಿಕೆ ಮತ್ತು ವಿಸ್ತರಣೆಗೆ ಕೇಂದ್ರ ಸರ್ಕಾರದಿಂದ ಭಾರೀ ಅನುದಾನ ಘೋಷಣೆಯಾಗಿದೆ. BSNL ನೆಟ್‌ವರ್ಕ್  ಸಂಬಂಧ ಕೇಂದ್ರದಿಂದ ಮಹತ್ವದ ಮಾಹಿತಿ ಹೊರಗೆ ಬಂದಿದೆ.

BSNL 4G Network Launching Update Government says reach 25000 villages mra
Author
First Published Sep 16, 2024, 1:28 PM IST | Last Updated Sep 16, 2024, 1:28 PM IST

ನವದೆಹಲಿ: ಬಿಎಸ್‌ಎನ್‌ಎಲ್ ದೇಶದ ಜನಪ್ರಿಯ ಟೆಲಿಕಾಂ ಕಂಪನಿ ಆಗಿದೆ. ಕಳೆದ ಎರಡ್ಮೂರು ತಿಂಗಳಿನಿಂದ ಟೆಲಿಕಾಂ ಅಂಗಳದಲ್ಲಿ ಖಾಸಗಿ ಕಂಪನಿಗಳ ನಿದ್ದೆ ಕೆಡಿಸಿರುವ ಬಿಎಸ್‌ಎನ್‌ಎಲ್, 4G ನೆಟ್‌ವರ್ಕ್ ಅಳವಡಿಕೆ ಜೊತೆಯಲ್ಲಿ ಹಲವು ಆಫರ್‌ಗಳನ್ನು ನೀಡುತ್ತಿದೆ. ಖಾಸಗಿ ಕಂಪನಿಗಳಿಗೆ ಹೋಲಿಸಿದ್ರೆ ಬಿಎಸ್‌ಎನ್‌ಎಲ್ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಗ್ರಾಹಕರಿಗೆ ಶೇ.15ರಷ್ಟು ಕಡಿಮೆ ಬೆಲೆಯಲ್ಲಿ ಆಫರ್‌ಗಳನ್ನು ನೀಡುತ್ತಿದೆ. ಈ ಕಾರಣದಿಂದಲೇ ಬಿಎಸ್‌ಎನ್‌ಎಲ್ ಸೇರ್ಪಡೆಯಾಗುತ್ತಿರುವ ಬಳಕೆದಾರರ  ಸಂಖ್ಯೆ ಏರಿಕೆಯಾಗುತ್ತಿದೆ. ಇತ್ತ ಕೇಂದ್ರ ಸರ್ಕಾರವೂ ಬಿಎಸ್ಎನ್ಎಲ್ 4G ನೆಟ್‌ವರ್ಕ್ ಅಳವಡಿಕೆಗಾಗಿ 6 ಸಾವಿರ ಕೋಟಿ ಅನುದಾನ ಮೀಸಲಿಟ್ಟ ವರದಿಯೂ ಬಹಿರಂಗಗೊಂಡಿದೆ. ಈ ಎಲ್ಲಾ ಕಾರಣಗಳಿಂದಾಗಿ ಬಿಎಸ್‌ಎನ್ಎಲ್ ರೀಚಾರ್ಜ್ ಬೆಲೆಗಳು ಕಡಿಮೆಯಾಗಿವೆ ಎಂದು ವರದಿಯಾಗಿದೆ.

ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಹೆಚ್ಚಳವನ್ನ ಎನ್‌ಕ್ಯಾಶ್ ಮಾಡಿಕೊಂಡಿರುವ ಬಿಎಸ್‌ಎನ್‌ಎಲ್ ಹೊಸ ಬಳಕೆದಾರರಿಗೆ ಸ್ವಾಗತದ ಆಫರ್ ನೀಡುತ್ತಾ, 4ಜಿ ನೆಟ್‌ವರ್ಕ್  ಅಳವಡಿಕೆಯ ಪ್ರತಿಯೊಂದು ಮಾಹಿತಿಯನ್ನು ನೀಡುತ್ತಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮುಂಬರುವ ವರ್ಷಗಳಲ್ಲಿ ಎಲ್ಲಾ  ನಗರಗಳಲ್ಲಿಯೂ 4ಜಿ ನೆಟ್‌ವರ್ಕ್ ವಿಸ್ತರಣೆ ಮಾಡಲಾಗುವುದು. 2025ರ ಮಧ್ಯೆದೊಳಗೆ ನಾವು 1 ಲಕ್ಷಕ್ಕೂ ಅಧಿಕ ಹೊಸ 4ಜಿ ಟವರ್  ಅಳವಡಿಸಲಾಗುವುದು. ದೇಶದ 25 ಸಾವಿರಕ್ಕೂ ಅಧಿಕ ಹಳ್ಳಿಗಳಲ್ಲಿಯೂ ದೂರಸಂಚಾರದ ಸಂಪರ್ಕ ಮಾಡಲಾಗುವುದು. ಈ 25 ಸಾವಿರ ಹಳ್ಳಿಗಳಲ್ಲಿ ಇದುವರೆಗೂ ಯಾವುದೇ ಮೊಬೈಲ್ ಇಂಟರ್‌ನೆಟ್ ಸೌಲಭ್ಯವಿಲ್ಲ, ಅಂತಹ ಹಳ್ಳಿಗಳನ್ನ ತಲುಪೋ ಗುರಿಯನ್ನು ಬಿಎಸ್‌ಎನ್‌ಎಲ್ ಹೊಂದಿದೆ ಎಂದು ಹೇಳಿದ್ದಾರೆ.

ಬಿಎಸ್‌ಎನ್‌ಎಲ್‌ 4G ನೆಟ್‌ವರ್ಕ್ ಧನಾಧನ್: ಹೆಚ್ಚಾಯ್ತು ಖಾಸಗಿ ಕಂಪನಿಗಳಿಗೆ ನಡುಕ!

ಬಿಎಸ್‌ಎನ್ಎಲ್ ದೀಪಾವಳಿ 2024ರೊಳಗೆ 75,000 4G ನೆಟ್‌ವರ್ಕ್ ಅಳವಡಿಕೆ ಮಾಡುವ ಗುರಿಯನ್ನು ಹೊಂದಿದೆ. ಆದರೆ ಇದುವರೆಗೂ ಕೇವಲ 25 ಸಾವಿರ 4G ನೆಟ್‌ವರ್ಕ್ ಅಳವಡಿಕೆ ಮಾಡಲಾಗಿದೆ. ಮತ್ತೊಂದೆಡೆ ಭಾರತದ ದೇಶಿ ಕಂಪನಿ ಟಿಸಿಎಸ್ ಸಹ ಬಿಎಸ್‌ಎನ್‌ಎಲ್ ಸಾಥ್ ನೀಡಿದೆ. ಇತ್ತ ಮತ್ತೊಂದೆಡೆ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಕಂಪನಿಗಳು 5ಜಿ ಸೇವೆಯನ್ನು ನೀಡಲು ಆರಂಭಿಸಿವೆ.  TCS, C-DoT ಮತ್ತು Tejas Networks ಜೊತೆ ಸೇರಿ BSNL 4G ರೋಲ್‌ಔಟ್‌   ಗಾಗಿ ಟೆಕ್ನಿಕಲ್ ಸಪೋರ್ಟ್ ಪಡೆದುಕೊಂಡಿದೆ. ಟಿಸಿಎಸ್ ಪ್ರತ್ಯೇಕ ಡೇಟಾ ಸೆಂಟರ್ ಆರಂಭಿಸಲು ಮುಂದಾಗಿದೆ.

ಸದ್ಯ ಭಾರತದಲ್ಲಿ 4G ಮತ್ತು 5G ನೆಟ್‌ವರ್ಕ್ ಬಳಕೆಯಲ್ಲಿದೆ. ಆದ್ರೆ ಜಗತ್ತಿನ ಶೇ.10ರಷ್ಟು ಭಾಗದಲ್ಲಿ 6G ತಂತ್ರಜ್ಞಾನ ಚಾಲ್ತಿಯಲ್ಲಿದೆ. BSNL ನ 4G ನೆಟ್‌ವರ್ಕ್ 2025 ರ ಮಧ್ಯದ ವೇಳೆಗೆ ಪೂರ್ಣಗೊಳ್ಳಲಿರುವ ಕಾರಣ ಹೈಸ್ಪೀಡ್ ಡೇಟಾ ಬಳಕೆದಾರರನ್ನುಸೆಳೆಯೋದು ಬಿಎಸ್‌ಎನ್ಎಲ್‌ಗೆ ಕಷ್ಟವಾಗಲಿದೆ. ಆದರೆ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆಯಲು ಬಿಎಸ್‌ಎನ್‌ಎಲ್‌ ಸ್ಪರ್ಧಾತ್ಮಕ ಬೆಲೆ ಮತ್ತು ಸೇವೆಗಳನ್ನು ನೀಡಬೇಕಾಗುತ್ತದೆ.

ದೂರವಾಯ್ತು ಬಿಎಸ್‌ಎನ್‌ಎಲ್‌ಗೆ ಇದ್ದ ಸಮಸ್ಯೆ-  ಕೈ ಜೋಡಿಸಿದ  ದೇಶಿ ಕಂಪನಿ  

Latest Videos
Follow Us:
Download App:
  • android
  • ios