ಬಿಎಸ್ಎನ್‌ಎಲ್ ವಾರ್ಷಿಕ ಧಮಾಕಾ.. ಏನೇನು ಕೊಡುಗೆ?

BSNL Goes a Step Ahead, Bundles 2GB Daily Data for a Year at Rs 1,999
Highlights

ಒಂದೆಡೆ ಟೆಲಿಕಾಂ ಕಂಪನಿಗಳ ಸಮರದಲ್ಲಿ ಡಾಟಾ ಅಗ್ಗವಾಗುತ್ತಿದ್ದರೆ ಇದೀಗ ಬಿಎಸ್‌ಎನ್ಎಲ್ ಸಹ ವಿಶೇಷ ಕೊಡುಗೆ ನೀಡಿದೆ. ವಾರ್ಷಿಕ ಕೊಡುಗೆಯನ್ನು ಬಿಡುಗಡೆ ಮಾಡಿದ್ದು ಏನೆಲ್ಲಾ ಆಫರ್‌ಗಳಿವೆ ನೋಡಿಕೊಂಡು ಬನ್ನಿ

ನವದೆಹಲಿ[ಜೂ.27]  ವಿವಿಧ ಟೆಲಿಕಾಂ ಸಂಸ್ಥೆಗಳು ತಿಂಗಳ ಲೆಕ್ಕದಲ್ಲಿ ಡಾಟಾ ಪ್ಲಾನ್ ನೀಡುವುದನ್ನು ನೋಡಿದ್ದೇವೆ. ಆದರೆ ಇದೀಗ ಬಿಎಸ್‌ಎನ್‌ಎಲ್ [ಭಾರತ ಸಂಚಾರ ನಿಗಮ] ವಾರ್ಷಿಕ ಯೋಜನೆಯೊಂದನ್ನು ತನ್ನ ಗ್ರಾಹಕರಿಗಾಗಿ ನೀಡುತ್ತಿದೆ.

ತಮಿಳುನಾಡು ಮತ್ತು ಚೆನ್ನೈ ವಿಭಾಗದವರಿಗೆ ಈ ಯೋಜನೆಯನ್ನು ಮೊದಲು ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದೆ. 365 ದಿನಕ್ಕೆ 730 ಜಿಬಿ ಡಾಟಾ ಲಭ್ಯವಾಗಲಿದ್ದು 1999 ರೂಪಾಯಿ ನೀಡಬೇಕಾಗುತ್ತದೆ. ಯೋಜನೆ ಗ್ರಾಹಕರಿಗೆ ಅನ್ ಲಿಮಿಟೆಡ್ ಕರೆ ಮತ್ತು ದಿನಕ್ಕೆ ನೂರು ಎಸ್ಎಂಎಸ್ ಸೇವೆಯನ್ನು ಒದಗಿಸಲಿದೆ. ರಿಲಯನ್ಸ್ ಜಿಯೋ ಈ ಹಿಂದೆ ವಾರ್ಷಿಕ ಆಫರ್ ನೀಡಿತ್ತು ಇದೀಗ ಬಿಎಸ್‌ಎನ್‌ಎಲ್ ತಾನು ಒಂದು ಹೆಜ್ಜೆ ಇಟ್ಟಿದೆ.

ಜಿಯೋ ಹಿಂದಿಕ್ಕಲು ಬಿಎಸ್‌ಎನ್‌ಎಲ್‌ ಸಜ್ಜು

ಯೋಜನೆಯನ್ನು ಪ್ರಚುರ ಪಡಿಸಲು ದಿನಕ್ಕೆ 2 ಜಿಬಿ ಡಾಟಾದ ಕೊಡುಗೆಯನ್ನು ನೀಡಿದ್ದು ಜೂನ್ 25 ರಿಂದ ಸೆಪ್ಟಂಬರ್ 22, 2018 ರೊಳಗೆ ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಅಂದರೆ ಒಮದು ಜಿಬಿ ಡಾಟಾಕ್ಕೆ ನೀವು ನೀಡಬೇಕಾದ್ದು 2.73ರೂ. ಮಾತ್ರ!

loader