ಸರ್ಕಾರಿ ಸ್ವಾಮ್ಯದ  ಬಿಎಸ್ಎನ್ಎಲ್ ಈಗ  ರಿಲಾಯನ್ಸ್ ಜಿಯೋಗೆ ಭರ್ಜರಿ ಸ್ಪರ್ಧೆಯನ್ನು ಒಡ್ಡುತ್ತಿದೆ.  ಸದ್ಯ ದಿನಕ್ಕೆ 1 ಜಿಬಿ ಡೇಟಾ ಸೌಲಭ್ಯ ನೀಡುತ್ತಿದ್ದ ಬಿಎಸ್ಎನ್ಎಲ್ ನಿಂದ ಇದೀಗ ದಿನಕ್ಕೆ 3ಜಿಯ 2 ಜಿಬಿ ಡೇಟಾ ನೀಡಲಾಗುತ್ತಿದೆ.   

ನವದೆಹಲಿ : ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಈಗ ರಿಲಾಯನ್ಸ್ ಜಿಯೋಗೆ ಭರ್ಜರಿ ಸ್ಪರ್ಧೆಯನ್ನು ಒಡ್ಡುತ್ತಿದೆ. ಸದ್ಯ ದಿನಕ್ಕೆ 1 ಜಿಬಿ ಡೇಟಾ ಸೌಲಭ್ಯ ನೀಡುತ್ತಿದ್ದ ಬಿಎಸ್ ಎನ್ ಎಲ್ ನಿಂದ ಇದೀಗ ದಿನಕ್ಕೆ 3ಜಿಯ 2 ಜಿಬಿ ಡೇಟಾ ನೀಡಲಾಗುತ್ತಿದೆ.

ಬಿಎಸ್‌ಎನ್‌ಎಲ್‌ನಿಂದ ಈ ಹೊಸ ಆಫರ್ ಜೂನ್ 18ನೇ ತಾರೀಕಿನಿಂದಲೇ ಆರಂಭವಾಗಿದೆ. ಈ ಆಫರ್ನಲ್ಲಿ 999, 666,485, 429, 186 ರು. ರೀಚಾರ್ಜ್ ಪ್ಲಾನ್‌ಗಳಲ್ಲಿ ಲಭ್ಯವಾಗಲಿದೆ. ಈ ಹಿಂದೆ ಇದ್ದ ಕೋಂಬೋ ಆಫರ್ ರೀಚಾರ್ಜ್ ಮೌಲ್ಯದಲ್ಲಿಯೇ ಡೇಟಾ ನೀಡುವ ಪ್ರಮಾಣವನ್ನು ಹೆಚ್ಚಳ ಮಾಡಿದೆ. 

ಅಲ್ಲದೇ ಬಿಎಸ್‌ಎನ್‌ಎಲ್‌ ಮತ್ತೊಂದು ಹೊಸ ಆಫರ್ ಪರಿಚಯಿಸಿದ್ದು, ಜುಲೈ 15ರವರೆಗೂ ರೀಚಾರ್ಜ್ ಮಾಡಿಸಿಕೊಂಡವರಿಗೆ ಲಭ್ಯವಾಗಲಿದೆ. 149 ರು. ರೀಚಾರ್ಜ್ ಮಾಡಿಸಿಕೊಂಡಲ್ಲಿ 28 ದಿನಗಳ ಕಾಲ 4ಜಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಈ ಆಫರ್ ದಿಲ್ಲಿ ಮತ್ತು ಮುಂಬೈ ಗ್ರಾಹಕರಿಗೆ ಮಾತ್ರ ಅನ್ವಯವಾಗುವುದಿಲ್ಲ. ಫುಟ್ ಬಾಲ್ ಫ್ಯಾನ್‌ಗಳಿಗಾಗಿ ಈ ಆಫರ್ ಪರಿಚಯಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೊಸ ಹೊಸ ಆಫರ್ ನೀಡುವ ಮೂಲಕ ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಭಾರೀ ಪ್ರಮಾಣದಲ್ಲಿ ಸ್ಪರ್ಧೆಯನ್ನೊಡ್ಡುತ್ತಿದೆ.