ಬಿಎಸ್‌ಎನ್‌ಎಲ್‌ 4G ನೆಟ್‌ವರ್ಕ್ ಧನಾಧನ್: ಹೆಚ್ಚಾಯ್ತು ಖಾಸಗಿ ಕಂಪನಿಗಳಿಗೆ ನಡುಕ!

ಬಿಎಸ್‌ಎನ್‌ಎಲ್ ದೇಶದ ಪ್ರಮುಖ ನಗರಗಳಲ್ಲಿ 4G ಸೇವೆಯನ್ನು ಆರಂಭಿಸುತ್ತಿದೆ. ಈ  ಮೂಲಕ ಖಾಸಗಿ ಕಂಪನಿಗಳ ನಡುಕವನ್ನು ಹೆಚ್ಚಿಸಿದೆ.

BSNL 4G network service start this cities  mrq

ನವದೆಹಲಿ: ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್) 10 ನಗರಗಳಲ್ಲಿ ತನ್ನ 4ಜಿ ಸೇವೆಯನ್ನು ಆರಂಭಿಸಿದೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಖಾಸಗಿ ಟೆಲಿಕಾಂ ಕಂಪನಿಗಳು ತನ್ನ ರಿಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಿಕೊಂಡಿವೆ. ಬೆಲೆಗಳ ಏರಿಕೆ ಬೆನ್ನಲ್ಲೇ ದೊಡ್ಡ ಸಂಖ್ಯೆಯಲ್ಲಿ  ಬಳಕೆದಾರರು ಎಂಎನ್‌ಪಿ ಮೂಲಕ ಬಿಎಸ್‌ಎನ್‌ಎಲ್‌ಗೆ ಪೋರ್ಟ್  ಆಗುತ್ತಿದ್ದಾರೆ. ಖಾಸಗಿ ಕಂಪನಿಗಳ ಬೆಲೆ ಏರಿಕೆ ಬೆನ್ನಲ್ಲೇ ಹೊಸ  ಆಫರ್ ನೀಡುವ ಮೂಲಕ ಬಳಕೆದಾರರನ್ನು  ಸೆಳೆಯುವ ಬಿಎಸ್‌ಎನ್‌ಎಲ್ ಪ್ಲಾನ್ ಭಾಗಶಃ ಯಶಸ್ವಿಯಾಗಿದೆ. 

ತಮಿಳುನಾಡಿನಲ್ಲಿ ಬಿಎಸ್‌ಎನ್ಎಲ್ 4ಜಿ  ಸೇವೆಯನ್ನು ಮೊದಲು ಆರಂಭಿಸಿತ್ತು. ಇದರ ಜೊತೆಯಲ್ಲಿ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶಗಳಲ್ಲಿ ವೇಗವಾಗಿ 4ಜಿ ನೆಟ್‌ವರ್ಕ್ ಟವರ್ ಅಳವಡಿಸಲಾಗುತ್ತಿದೆ. ಇದುವರೆಗೂ ಈ ನಾಲ್ಕು ರಾಜ್ಯಗಳಲ್ಲಿ 6,000 ಟವರ್ ಅಳವಡಿಸಲಾಗಿದೆ. ಕಳೆದ ಒಂದೇ ವಾರದಲ್ಲಿ 2 ಸಾವಿರಕ್ಕೂ ಅಧಿಕ ಟವರ್ ಅಳವಡಿಸಲಾಗಿದೆ. ಈ ತಿಂಗಳೊಳಗೆ ಎಲ್ಲಾ ನಗರಗಳಲ್ಲಿ 4ಜಿ ಸೇವೆ ಆರಂಭಿಸುವ ಗುರಿಯನ್ನು ಬಿಎಸ್‌ಎನ್‌ಎಲ್ ಹೊಂದಿದೆ.

ಜಿಯೋದಿಂದ ಹೆಚ್ಚು ವ್ಯಾಲಿಡಿಟಿಯ ಕಡಿಮೆ ಬೆಲೆಯ ಪ್ಲಾನ್; ದಿನಕ್ಕೆ 10 ರೂಪಾಯಿ ಹಣ ಖರ್ಚಾಗಲ್ಲ!

ಬಿಎಸ್‌ಎನ್‌ಎಲ್ ಪ್ರಕಾರ, ಇದುವರೆಗೂ ಭಾರತದಲ್ಲಿ ಅಂದಾಜು 1.12 ಲಕ್ಷ 4ಜಿ ಟವರ್ ಅಳವಡಿಸಲಾಗಿದೆ. ಇದರಲ್ಲಿ  ಇಡೀ ನಗರ ಹಾಗೂ ಗ್ರಾಮೀಣ ಭಾಗದಲ್ಲಿ 4ಜಿ ಸೇವೆಯನ್ನು ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ 12,000ಕ್ಕೂ ಅಧಿಕ 4ಜಿ ನೆಟ್‌ವರ್ಕ್ ಸೌಲಭ್ಯವನ್ನು ಒದಗಿಸಲಾಗಿದೆ. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಮುಂಬೈ, ಚೆನ್ನೈ, ತಮಿಳುನಾಡು ಮತ್ತು ಗುಜರಾತಿನಲ್ಲಿ ಟವರ್ ಅಳವಡಿಕೆ ಕಾರ್ಯ ವೇಗದಿಂದ ಸಾಗುತ್ತಿದೆ.

ಬಿಎಸ್‌ಎನ್‌ಎಲ್ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿಯೂ 4ಜಿ ಸೇವೆ ನೀಡುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ತಿಂಗಳೊಳಗೆ ಎಲ್ಲಾ ನಗರಗಳಲ್ಲಿ 4ಜಿ ಸೇವೆಯನ್ನು ಕಲ್ಪಿಸುವ ಭರವಸೆಯನ್ನು ತನ್ನ ಬಳಕೆದಾರರಿಗೆ ಬಿಎಸ್ಎನ್‌ಎಲ್ ನೀಡಿದೆ. ಕಳೆದ ಒಂದು ವಾರದಲ್ಲಿಯೇ ಬಿಎಸ್‌ಎನ್ಎಲ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 1,000  ಟವರ್‌ಗಳನ್ನು ಅಳವಡಿಸಲಾಗಿದೆ ಎಂದು ಬಿಎಸ್‌ಎನ್ಎಲ್ ಮಾಹಿತಿ ನೀಡಿದೆ. ಇತ್ತ  ಖಾಸಗಿ ಕಂಪನಿಗಳು 5ಜಿ ಸೇವೆಯನ್ನು ನೀಡುತ್ತಿವೆ.

BSNL ಗ್ರಾಹಕರಿಗೆ ಬಂಪರ್, ದಿನಕ್ಕೆ 6 ರೂಪಾಯಿಗೆ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್,100 SMS!

Latest Videos
Follow Us:
Download App:
  • android
  • ios