ನಿಮ್ಮ ಮೊಬೈಲ್’ನಲ್ಲಿ ಹೆಚ್’ಟಿಎಂಎಲ್ ಸೋರ್ಸ್ ಕೋಡ್ ವೀವರ್ ಎಂಬ ಅಫ್ಲಿಕೇಶನ್ ಏನಾದರು ಇದ್ದರೆ ತಕ್ಷಣ ಡಿಲೀಟ್ ಮಾಡಿ. ಏಕೆಂದರೆ ಈ ಆ್ಯಪ್ ನಿಮ್ಮ ಮೊಬೈಲ್’ನಲ್ಲಿರುವ ಖಾಸಗಿ ಫೋಟೋಗಳನ್ನು, ವಿಡಿಯೋಗಳನ್ನು ಕಾನೂನುಬಾಹಿರವಾಗಿ ಸ್ಕ್ಯಾನ್ ಮಾಡಿ ಮಾಹಿತಿ ಸಂಗ್ರಹಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್’ಟಿಎಂಎಲ್ ಸೋರ್ಸ್ ಕೋಡ್ ವೀವರ್ ಆ್ಯಪ್ ಅನ್ನು ಪ್ಲೇ ಸ್ಟೂರ್ ಈಗಾಗಲೆ ಅಳಿಸಿಹಾಕಿದ್ದು ಮಾತ್ರವಲ್ಲದೆ ಆದಷ್ಟು ಬೇಗ ಅನ್ಇನ್ಸ್ಟಾಲ್ ಮಾಡುವಂತೆ ಕೋರಿದೆ. ಈ ಆ್ಯಪ್ ವೆಬ್ ಪುಟದಲ್ಲಿ ಖಾಸಗಿ ಮಾಹಿತಿಯನ್ನು ಲಿಂಕ್ ಬಳಸಿ ನೋಡಲು ಇತರೆ ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿದೆ. ನಮ್ಮ ಮೊಬೈಲ್ ಖಾಸಗಿತನವನ್ನು ಕಾಪಾಡಿಕೊಳ್ಳಬೇಕು ಎಂದಾದರೆ ಮೊದಲು ಈ ಆ್ಯಪ್ ಡಿಲಿಟ್ ಮಾಡಿ.