Asianet Suvarna News Asianet Suvarna News

ಬಹುನಿರೀಕ್ಷಿತ Apple WWDC 2022 ಈವೆಂಟ್‌ ದಿನಾಂಕ ಘೋಷಣೆ: iOS 16 ಅನಾವರಣ?

ಡೆವಲಪರ್‌ಗಳಿಗಾಗಿ ಮುಂಬರುವ ಆಪಲ್ ಈವೆಂಟನ್ನು ವರ್ಚುವಲ್‌ ಮಾದರಿಯಲ್ಲಿ ಹೋಸ್ಟ್ ಮಾಡಲಾಗುತ್ತಿದೆ, ಕಾರ್ಯಕ್ರಮದಲ್ಲಿ ನಾವು ಈ ವರ್ಷದ ನಂತರ iPhone 14 ಸರಣಿ ಮತ್ತು ಇತರ ಮಾದರಿಗಳಿಗಾಗಿ ಬಿಡುಗಡೆಯಾಗಲಿರುವ ಹೊಸ iOS 16 ವೈಶಿಷ್ಟ್ಯಗಳ ನೋಟವನ್ನು ಪಡೆಯಲಿದ್ದೇವೆ
 

Apple WWDC 2022 date June 6 to 10 what can we expect eyes on iOS 16 mnj
Author
Bengaluru, First Published Apr 6, 2022, 9:16 AM IST

Apple WWDC 2022: ಆ್ಯಪಲ್ ತನ್ನ ಬಹುನಿರೀಕ್ಷಿತ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ ( WWDC) 2022 ದಿನಾಂಕಗಳನ್ನು ದೃಢಪಡಿಸಿದೆ. ಕಂಪನಿಯು ತನ್ನ ವಾರ್ಷಿಕ ಡೆವಲಪರ್ ಈವೆಂಟನ್ನು ಜೂನ್ 6ರಿಂದ 10ರ ವರೆಗೆ ಆಯೋಜಿಸುತ್ತಿದೆ. ಡೆವಲಪರ್‌ಗಳಿಗಾಗಿ ಮುಂಬರುವ ಆ್ಯಪಲ್ ಈವೆಂಟನ್ನು ವರ್ಚುವಲ್‌ ಮಾದರಿಯಲ್ಲಿ ಹೋಸ್ಟ್ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ನಾವು ಈ ವರ್ಷದ ನಂತರ iPhone 14 ಸರಣಿ ಮತ್ತು ಇತರ ಮಾದರಿಗಳಿಗಾಗಿ ಬಿಡುಗಡೆಯಾಗಲಿರುವ ಹೊಸ iOS 16 ವೈಶಿಷ್ಟ್ಯಗಳ ನೋಟವನ್ನು ಪಡೆಯಲಿದ್ದೇವೆ.

ಹೊಸ ಆ್ಯಪಲ್ ಈವೆಂಟನ್ನು ವರ್ಚುವಲ್‌ ಮಾದರಿಯಲ್ಲಿ ಹೋಸ್ಟ್ ಮಾಡಲಾಗುತ್ತಿದ್ದು ಆ್ಯಪಲ್ ಸಾಮಾನ್ಯವಾಗಿ iOS, iPadOS, macOS, watchOS ಮತ್ತು tvOS ನಲ್ಲಿ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸುತ್ತದೆ. ಆಪಲ್ ಸಾಮಾನ್ಯವಾಗಿ ಸಮ್ಮೇಳನದ ಮೊದಲ ದಿನದಂದು ಡೆವಲಪರ್‌ಗಳಿಗಾಗಿ ಸಂವಾದವನ್ನು ಆಯೋಜಿಸುತ್ತದೆ. WWDCಯಂತಹ ಸಮ್ಮೇಳನಗಳು ಆ್ಯಪಲ್‌ನ ಜನಪ್ರಿಯ ಉತ್ಪನ್ನಗಳಾದ iPhone ಮತ್ತು Macಗಾಗಿ ಅಪ್ಲಿಕೇಶನ್‌ಗಳನ್ನು ನಿರ್ಮಿಸುವ ಡೆವಲಪರ್‌ಗಳನ್ನು ಗುರಿಯಾಗಿರಿಸಿಕೊಂಡಿವೆ. 

ಜತಗೆ ವಾರ್ಷಿಕ ಡೆವಲಪರ್ ಸಮ್ಮೇಳನವನ್ನು iPhone, Mac, Apple Watch ಮತ್ತು iPadಗಾಗಿ ಹೊಸ ಸಾಫ್ಟ್‌ವೇರ್‌ ಬಗ್ಗೆ ಮಾಹಿತಿ ನೀಡಲು ಬಳಸಲಾಗುತ್ತದೆ. ಅಂದರೆ ಗ್ರಾಹಕರು iOS 16, iPadOS 16, WatchOS 9 ಮತ್ತು macOS ನ ಹೊಸ ಆವೃತ್ತಿಯ ಆರಂಭಿಕ ನೋಟವನ್ನು ನಿರೀಕ್ಷಿಸಬಹುದು. 

ಇದನ್ನೂ ಓದಿ: Apple iOS 15.4.1 ಅಪ್‌ಡೇಟ್ ಲಭ್ಯ; ಏನೆಲ್ಲ ಇದೆ ಇದರಲ್ಲಿ?

ಸಾಮಾನ್ಯವಾಗಿ, ಜೂನ್‌ನಲ್ಲಿ WWDCನಲ್ಲಿ ಘೋಷಿಸಲಾದ ಸಾಫ್ಟ್‌ವೇರ್ ಕೆಲ ದಿನಗಳ ಬಳಿಕ ಬಿಡುಗಡೆಯ ದಿನಾಂಕವನ್ನು ಪಡೆಯುತ್ತವೆ, ಅದೇ ಸಮಯದಲ್ಲಿ Apple iPhone ಮತ್ತು Apple Watchನ ಹೊಸ ಮಾದರಿಗಳನ್ನು ಪ್ರಾರಂಭಿಸುತ್ತದೆ.

ಹಿಂದಿನ WWDC ಸಮ್ಮೇಳನಗಳ ಮಾದರಿಯನ್ನು ಗಮನಿಸಿದರೆ, ಕಂಪನಿ ತನ್ನ ಆಪ್ ಸ್ಟೋರ್, ಡೆವಲಪರ್‌ಗಳಿಗೆ ಹೇಗೆ ಅತ್ಯಂತ ಆಕರ್ಷಕ ವೇದಿಕೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಸಂಖ್ಯೆಗಳನ್ನು ಹಲವಾರು ಮಾಹಿತಿಗಳನ್ನು ನೀಡುತ್ತದೆ. ಕಳೆದ ವರ್ಷ, ಆಪಲ್ 2008 ರಿಂದ ತನ್ನ ಆಪ್ ಸ್ಟೋರನ್ನು ಬಳಸುವುದಕ್ಕಾಗಿ ಡೆವಲಪರ್‌ಗಳಿಗೆ $230 ಶತಕೋಟಿ ಪಾವತಿಸಿದೆ ಎಂದು ಹೇಳಿದೆ.

ಭಾರತದ ಮೇಲೆ ಹೆಚ್ಚಿನ ಗಮನ: ಕಂಪನಿಯು ತನ್ನ ಆಪ್ ಸ್ಟೋರ್‌ಗೆ 175 ದೇಶಗಳಲ್ಲಿ ಪ್ರತಿ ವಾರ 600 ದಶಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಪಡೆಯುತ್ತದೆ ಎಂದು ಬಹಿರಂಗಪಡಿಸಿತ್ತು. ಇತ್ತೀಚೆಗೆ, ಆಪಲ್ ಭಾರತೀಯ ಡೆವಲಪರ್‌ಗಳು ಮತ್ತು ಅಪ್ಲಿಕೇಶನ್ ತಯಾರಕರ ಮೇಲೆ ಹೆಚ್ಚಿನ ಗಮನವನ್ನು ನೀಡುತ್ತಿದೆ, ಇದು ವಿಶ್ವದ ಅತ್ಯಮೂಲ್ಯ ಟೆಕ್ ಕಂಪನಿಗೆ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ಈ ಈವೆಂಟ್‌ನಲ್ಲಿ  iOS 16 ಮತ್ತು macOS 13 ಅನ್ನು ಘೋಷಿಸುವುದರ ಜೊತೆಗೆ, ಆಪಲ್ homeOS ಎಂಬ ಹೊಚ್ಚ ಹೊಸ OS ಅನ್ನು ಘೋಷಿಸಬಹುದೆಂದು ಟೆಕ್ ತಜ್ಞರ ವರದಿಗಳು ಸೂಚಿಸಿವೆ. ಆ್ಯಪಲ್‌ನ ಈ ಹೊಸ ಕಾರ್ಯತಂತ್ರವು ಇನ್ನೂ ಸ್ಪಷ್ಟವಾಗಿಲ್ಲ, ಆದರೆ WWDC 2022  ಡೆವಲಪರ್‌ಗಳಿಗೆ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ ಹೋಮ್ ವಿಭಾಗದಲ್ಲಿ ಕಂಪನಿ ಹೇಗೆ ಮುಂದುವರಿಯಲು ಬಯಸುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಬಹುದು. 

ಇದನ್ನೂ ಓದಿ: Nothing Phone (1): ಆ್ಯಪಲ್‌ ಐಫೋನ್‌ಗೆ ಸೆಡ್ಡು ಹೊಡೆಯಲು ಹೊಸ ಸ್ಮಾರ್ಟ್‌ಫೋನ್ ಕಂಪನಿ ಸಜ್ಜು!

Mixed Reality Headset?: WWDC ಸಾಫ್ಟ್‌ವೇರ್-ಕೇಂದ್ರಿತ ಈವೆಂಟ್ ಆಗಿದ್ದರೂ, ಆಪಲ್ ಈ ಹಿಂದೆ ಹೊಸ ಹಾರ್ಡ್‌ವೇರನ್ನು ಪ್ರದರ್ಶಿಸಲು ಡೆವಲಪರ್ ಕಾನ್ಫರೆನ್ಸನ್ನು ಬಳಸಿದೆ. ಈ ಹಿಂದಿನ ಸೋರಿಕೆ ಹಾಗೂ ಮಾಹಿತಿಗಳ ಪ್ರಕಾರ WWDC 2022 ರಲ್ಲಿ ಕಂಪನಿ ಮಿಕ್ಸಡ್ ರಿಯಾಲಿಟಿ (MR) ಹೆಡ್‌ಸೆಟ್‌ ಪರಿಚಯಿಸಬಹುದು. 

ಟೆಕ್ನಾಲಜಿ ಡೆವಲಪ್‌ಮೆಂಟ್ ಗ್ರೂಪ್ ಎಂಬ ದೊಡ್ಡ ತಂಡವು ಹೆಡ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಆಪಲ್ ಹೆಡ್‌ಸೆಟ್‌ ಬಿಡುಗಡೆಯನ್ನು ಎಂದಿಗೂ ಸಾರ್ವಜನಿಕವಾಗಿ ದೃಢೀಕರಿಸದಿದ್ದರೂ, ವರದಿಗಳು ಮತ್ತು ಟೆಕ್ ವಿಶ್ಲೇಷಕರು ಅಂತಹ ಸಾಧನವು ಹೊಸ ಮಾರುಕಟ್ಟೆಯನ್ನು ಪ್ರವೇಶಿಸಲು ಆಪಲ್‌ಗೆ ಅವಕಾಶವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  

ಹೆಡ್‌ಸೆಟ್ ಒಂದೇ ಸಾಧನದಲ್ಲಿ ವರ್ಚುವಲ್ ರಿಯಾಲಿಟಿ (VR) ಮತ್ತು ಆಗ್‌ಮೆಂಟೆಡ್ ರಿಯಾಲಿಟಿ (AR) ನೀಡುತ್ತದೆ ಎಂದು ವರದಿಯಾಗಿದೆ. ಕೆಲವು ವರದಿಗಳು ಮೆಟಾದ $299 ಕ್ವೆಸ್ಟ್ VR ಹೆಡ್‌ಸೆಟ್‌ಗೆ ಹೋಲಿಸಿದರೆ ಇದು $2000 ರಷ್ಟು ಹೆಚ್ಚು ವೆಚ್ಚವಾಗಬಹುದು ಎಂದು ತಿಳಿಸಿವೆ. 

Follow Us:
Download App:
  • android
  • ios