Asianet Suvarna News Asianet Suvarna News

Nothing Phone (1): ಆ್ಯಪಲ್‌ ಐಫೋನ್‌ಗೆ ಸೆಡ್ಡು ಹೊಡೆಯಲು ಹೊಸ ಸ್ಮಾರ್ಟ್‌ಫೋನ್ ಕಂಪನಿ ಸಜ್ಜು!

ಚೈನೀಸ್ ಮೂಲದ ಸ್ವೀಡಿಷ್ ಇಂಟರ್ನೆಟ್ ಉದ್ಯಮಿ ಕಾರ್ಲ್ ಪೈ   2013 ರಲ್ಲಿ ಪೀಟ್ ಲಾವ್ ಜೊತೆಗೆ ಒನ್‌ಪ್ಲಸ್ ಆರಂಭಿಸಿದ್ದರು ಮತ್ತು  ಒನ್‌ಪ್ಲಸ್‌ನ ಗ್ಲೋಬಲ್ ನಿರ್ದೇಶಕರಾಗಿದ್ದರು.‌
 

Carl Pie Nothing Phone 1 specifications price to compete with apple iPhone mnj
Author
Bengaluru, First Published Mar 24, 2022, 12:16 PM IST

Nothing Phone (1): ಒನ್‌ಪ್ಸಸ್‌ನ  ಸಹ ಸಂಸ್ಥಾಪಕ ಕಾರ್ಲ್ ಪೀ ( Carl Pie) ಹೊಸ  ಹಾರ್ಡ್‌ವೇರ್ ಉದ್ಯಮವಾದ  "ನಥಿಂಗ್" ಬುಧವಾರ ಸಂಜೆ ನಡೆದ ಜಾಗತಿಕ ಸಮಾರಂಭದಲ್ಲಿ ತನ್ನ ಬಹು ನಿರೀಕ್ಷಿತ ಸ್ಮಾರ್ಟ್‌ಫೋನನ್ನು ಘೋಷಿಸಿದೆ. ಅದರ ಮೊದಲ ಉತ್ಪನ್ನವಾದ ನಥಿಂಗ್ ಇಯರ್ (1) ನೊಂದಿಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಕಂಪನಿ ನಥಿಂಗ್ ಫೋನ್ (1)  ಘೋಷಿನೆ ಮಾಡಿದೆ. ಮುಂಬರುವ ಸ್ಮಾರ್ಟ್‌ಫೋನ್ ಕುರಿತು ಕಾರ್ಲ್ ಪೈ ಕೆಲವು ನಿರ್ಣಾಯಕ ವಿವರಗಳನ್ನು ಬಹಿರಂಗಪಡಿಸಿದ್ದು, ಬಿಡುಗಡೆ ದಿನಾಂಕ ಬಗ್ಗೆ ಇನ್ನು ಯಾವುದೇ ಮಾಹಿತಿ ನೀಡಿಲ್ಲ.‌ ಈ ಹೊಸ ಸ್ಮಾರ್ಟ್‌ಫೋನ್ ಆಪಲ್‌ ಐಫೋನ್‌ ಜತೆಗೆ ಸ್ಪರ್ಧಿಸಲಿದೆ ಎಂದು ಸ್ವತ: ಕಾರ್ಲ್‌ ಹೇಳಿದ್ದಾರೆ. 

ಚೈನೀಸ್ ಮೂಲದ ಸ್ವೀಡಿಷ್ ಇಂಟರ್ನೆಟ್ ಉದ್ಯಮಿ ಕಾರ್ಲ್  2013 ರಲ್ಲಿ ಪೀಟ್ ಲಾವ್ ಜೊತೆಗೆ ಒನ್‌ಪ್ಲಸ್ ಆರಂಭಿಸಿದ್ದರು ಮತ್ತು  ಒನ್‌ಪ್ಲಸ್‌ನ ಗ್ಲೋಬಲ್ ನಿರ್ದೇಶಕರಾಗಿದ್ದರು.‌  ಸೆಪ್ಟೆಂಬರ್ 2020 ರಲ್ಲಿ ಸಂಸ್ಥೆಯನ್ನು ತೊರೆದು "ನಥಿಂಗ್" ಎಂಬ ಹೊಸ ಹಾರ್ಡ್‌ವೇರ್ ಉದ್ಯಮವನ್ನು ಪ್ರಾರಂಭಿಸಿದ್ದರು. 

ಆ್ಯಪಲ್‌ನೊಂದಿಗೆ ಸ್ಪರ್ಧೆ: ನಥಿಂಗ್ ಫೋನ್ (1) ಬಿಡುಗಡೆಯಾದರೆ ಅದು ಒನ್‌ಪ್ಲಸ್‌ನೊಂದಿಗೆ ಸ್ಪರ್ಧಿಸಲಿದೆ ಎಂಬ ವದಂತಿಗಳಿಗೆ ಬ್ರೇಕ್‌ ಹಾಕಿರುವ ಕಾರ್ಲ್ ಹೊಸ ಫೋನ್‌ ಆಪಲ್‌ ಸಾಧನಗಳೊಂದಿಗೆ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಲಂಡನ್ ಮೂಲದ ಟೆಕ್ ಕಂಪನಿಯು ಸದ್ಯಕ್ಕೆ ಬಜೆಟ್ ಗ್ರಾಹಕರತ್ತ ಗಮನ ಹರಿಸುತ್ತಿಲ್ಲ ಎಂದು ಇದು ಸೂಚಿಸುತ್ತದೆ.  

ಇದನ್ನೂ ಓದಿ: iPhone SE 2022 Launched: ಐಫೋನ್ ಎಸ್ಇ 2022 ಲಾಂಚ್, ಏನೆಲ್ಲ ವಿಶೇಷತೆ, ಬೆಲೆ ಎಷ್ಟಿದೆ?

ನಥಿಂಗ್ ಈವೆಂಟ್‌ನ ಐದು ಪ್ರಮುಖ ಪ್ರಕಟಣೆಗಳು: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಾವೀನ್ಯತೆ ಕೊರತೆಯಿದೆ ಮತ್ತು ನಥಿಂಗ್ ಫೋನ್ (1) ಈ ಕೊರತೆಯನ್ನು ನೀಗಿಸಲಿದೆ ಎಂದ ಕಾರ್ಲ್ ಅಭಿಪ್ರಾಯಪಟ್ಟಿದ್ದಾರೆ. ಬ್ರ್ಯಾಂಡ್‌ನಿಂದ ಮುಂಬರುವ ಫೋನ್ ಹೊಸತನದ ಮೇಲೆ ಮಾತ್ರ ಗಮನಹರಿಸುವುದಿಲ್ಲ, ಆದರೆ ಕಾರ್ಯಕ್ಷಮತೆ, ಬಳಕೆದಾರ ಇಂಟರ್ಫೇಸ್, ಧ್ವನಿ ಮತ್ತು ಹೆಚ್ಚಿನ ವೈಶಿಷ್ಟ್ಯಗಳತ್ತ ಗಮನ ಹರಿಸಲಿದೆ ಎಂದು ಕಳೆದ ಸಂಜೆ ಈವೆಂಟ್‌ನಲ್ಲಿ ಕಂಪನಿಯ ಸಂಸ್ಥಾಪಕರು ಹೈಲೈಟ್ ಮಾಡಿದ್ದಾರೆ.

1) ನಥಿಂಗ್ ಫೋನ್ (1) ಗಾಗಿ ಕ್ವಾಲ್‌ಕ್ವಾಮ್‌ ನ ಸ್ನಾಪ್‌ಡ್ರಾಗನ್ ಮೊಬೈಲ್ ಪ್ಲಾಟ್‌ಫಾರ್ಮನ್ನು ಬಳಸುವುದಾಗಿ ಕಂಪನಿಯು ಅಧಿಕೃತವಾಗಿ ದೃಢಪಡಿಸಿದೆ. ನಿಖರವಾದ ಚಿಪ್‌ಸೆಟ್‌ನ ಹೆಸರನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಇದು ಇತ್ತೀಚಿನ ಸ್ನಾಪ್‌ಡ್ರಾಗನ್ 800 ಸರಣಿಯ ಚಿಪ್, ಸ್ನಾಪ್‌ಡ್ರಾಗನ್ 8 ಜನ್ 1 SoC ಅನ್ನು ಬಳಸಬಹುದೆಂದು ವರದಿಗಳು ತಿಳಿಸಿವೆ.

2) ನಥಿಂಗ್ ಓಎಸ್‌ನ ಕಸ್ಟಮೈಸೇಶನ್‌ಗಳೊಂದಿಗೆ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್  ಆಧರಿಸಿದೆ ಎಂದು ಕಂಪನಿಯು ಪ್ರಕಟಿಸಿದೆ. ಫೋನ್ ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯಾದ ಆಂಡ್ರಾಯ್ಡ್ 12 ರನ್‌ ಮಾಡುವ ಸಾಧ್ಯತೆ ಇದೆ. ನಥಿಂಗ್ ಓಎಸ್ ಯಾವುದೇ ಬ್ಲೋಟ್‌ವೇರ್ ಇಲ್ಲದೆ ಶುದ್ಧ ಆಂಡ್ರಾಯ್ಡ್ ಅನುಭವವನ್ನು ನೀಡುತ್ತದೆ ಎಂದು ಕಂಪನಿಯು ಹೈಲೈಟ್ ಮಾಡಿದೆ. 

“ನಥಿಂಗ್ ಓಎಸ್ ಶುದ್ಧ ಆಂಡ್ರಾಯ್ಡ್‌ನ ಉತ್ತಮ ವೈಶಿಷ್ಟ್ಯಗಳಳೊಂದಿಗೆ, ಆಪರೇಟಿಂಗ್ ಸಿಸ್ಟಮನ್ನು ಕೇವಲ ಅಗತ್ಯಗಳಿಗಣುಸಾರವಾಗಿ ಬಳಸುತ್ತದೆ, ಅಲ್ಲಿ ಪ್ರತಿ ಬೈಟ್‌ಗೆ ಒಂದು ಉದ್ದೇಶವಿದೆ. ಇದು ವೇಗದ, ಸುಗಮ ಮತ್ತು ವೈಯಕ್ತಿಕ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಒಂದು ಸುಸಂಬದ್ಧ ಇಂಟರ್ಫೇಸ್, ಹಾರ್ಡ್‌ವೇರ್ ಬೆಸ್ಪೋಕ್ ಫಾಂಟ್‌ಗಳು, ಬಣ್ಣಗಳು, ಚಿತ್ರಾತ್ಮಕ ಅಂಶಗಳು ಮತ್ತು ಧ್ವನಿಗಳ ಮೂಲಕ ಸಾಫ್ಟ್‌ವೇರ್‌ನೊಂದಿಗೆ  ಸಂಯೋಜಿಸುತ್ತದೆ, ”ಎಂದು ಕಂಪನಿ ವಿವರಿಸಿದೆ.

ಇದನ್ನೂ ಓದಿಬಹುನೀರಿಕ್ಷಿತ OnePlus 10 Pro ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ: ನಿರೀಕ್ಷಿತ ಬೆಲೆ ಎಷ್ಟು?

3) ನಥಿಂಗ್ ಫೋನ್‌ನ ವಿನ್ಯಾಸವನ್ನು ಇನ್ನೂ ದೃಢೀಕರಿಸದಿದ್ದರೂ, ಕಂಪನಿಯ ನಥಿಂಗ್ ಇಯರ್ (1)  ನಮಗೆ ಸಾಕಷ್ಟು ಸುಳಿವುಗಳನ್ನು ನೀಡುತ್ತದೆ. ನಥಿಂಗ್ ಫೋನ್ (1) ಮೊದಲ ಉತ್ಪನ್ನದಂತೆಯೇ  ಪಾರದರ್ಶಕ ವಿನ್ಯಾಸವನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಇದುವರೆಗೆ ಯಾರೂ ನೋಡಿರದ ಈತಿ ಫೋನ್‌ನ ವಿನ್ಯಾಸ ಕ್ರಾಂತಿಕಾರಿಯಾಗಲಿದೆ, ಎಂದು ಕಾರ್ಲ್ ಹೇಳಿದ್ದಾರೆ. ಆದರೆ ಫೋನ್‌ನ ನೋಟವನ್ನು ಇನ್ನೂ ಹಂಚಿಕೊಂಡಿಲ್ಲ.

4) ಒನ್‌ಪ್ಲಸ್‌ನ ಮಾಜಿ ಸಂಸ್ಥಾಪಕರಾಗಿರುವುದರಿಂದ, ನಥಿಂಗ್‌ನಿಂದ ಮುಂಬರುವ ಫೋನ್ ಚೀನಾದ ಸ್ಮಾರ್ಟ್‌ಫೋನ್ ಒನ್‌ಪ್ಲಸ್‌ ಜತೆಯೇ ಸ್ಪರ್ಧಿಸಲಿದೆ ಎಂದು ವದಂತಿಗಳಿವೆ. ಆದರೆ ಅದು ಸ್ಪಷ್ಟವಾಗಿಲ್ಲ. ಈವೆಂಟ್‌ನಲ್ಲಿ, ಕಳೆದ ಸಂಜೆ, ಆಪಲ್ ಪ್ರತಿಸ್ಪರ್ಧಿಯನ್ನು ನಿರ್ಮಿಸುವ ಆಲೋಚನೆ ಇದೆ ಎಂದು ಪೀ ಹೇಳಿದರು. 

“ನಾವು ಆಪಲ್‌ಗೆ ಅತ್ಯಂತ ಬಲವಾದ ಪರ್ಯಾಯವನ್ನು ನಿರ್ಮಿಸುತ್ತಿದ್ದೇವೆ. ನೀವು ಸಂಪರ್ಕಿಸುವ ಮತ್ತು ಮನಬಂದಂತೆ ಒಟ್ಟಿಗೆ ಕೆಲಸ ಮಾಡುವ ಉತ್ಪನ್ನಗಳನ್ನು ಬಯಸಿದರೆ, ಏಕೈಕ ಆಯ್ಕೆ ಆಪಲ್ ಆಗಿದೆ. ಮ್ಯಾಕ್‌ಬುಕ್, ಐಫೋನ್, ಏರ್‌ಪಾಡ್‌ಗಳು ನಿಮಗೆ ಬೇಕಾದ ರೀತಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತವೆ. ಆದರೆ ನೀವು ಆ  ಐಓಎಸ್ ವ್ಯವಸ್ಥೆಯನ್ನು ವಿಂಡೋಸ್ ಪಿಸಿ ಅಥವಾ ಆಂಡ್ರಾಯ್ಡ್ ಫೋನ್‌ಗಾಗಿ ತೊರೆದ ತಕ್ಷಣ ಅದು ಕೆಲಸ ಮಾಡುವುದಿಲ್ಲ, ” ಎಂದು ಈವೆಂಟ್‌ನಲ್ಲಿ ಪೀ ಹೇಳಿದ್ದಾರೆ.

5) ಹಾಗಾದರೆ, ನಥಿಂಗ್ ಫೋನ್ (1) ಯಾವಾಗ ಬಿಡುಗಡೆಯಾಗುತ್ತದೆ? ಈ ಬೇಸಿಗೆಯಲ್ಲಿ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಅಧಿಕೃತವಾಗಿ ದೃಢಪಡಿಸಿದೆ. ಅದರೆ ನಿಖರವಾದ ತಿಂಗಳು ಅಥವಾ ದಿನಾಂಕವನ್ನು ಇನ್ನೂ ದೃಢೀಕರಿಸಿಲ್ಲ. ಆದಾಗ್ಯೂ ನಥಿಂಗ್ ಫೋನ್ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಕೆಲವು ವರದಿಗಳು ತಿಳಿಸಿವೆ. 

ಮತ್ತೊಂದು ವರದಿಯು 2022 ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದೆ. ಕಂಪನಿಯು ಭಾರತದ ಬಿಡುಗಡೆ ಬಗ್ಗೆ ಇನ್ನೂ ಏನನ್ನೂ ಬಹಿರಂಗಪಡಿಸದಿದ್ದರೂ, ಸ್ಮಾರ್ಟ್‌ಫೋನ್ ಮೊದಲ ಉತ್ಪನ್ನವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 

Follow Us:
Download App:
  • android
  • ios