ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ತೆಕ್ಕೆಗೆ ಬಿದ್ದ ಮೇಲೆ ವಾಟ್ಸಪ್'ನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಆಡಿಯೋ ಕಾಲಿಂಗ್ ನಿಂದ ಹಿಡಿದು, ಗೂಡಲಿಪಿಕರಣದ ವರೆಗೂ ಎಲ್ಲ ಸೌಲಭ್ಯಗಳು ವಾಟ್ಸಪ್ ಬಳಕೆದಾರರಿಗೆ ಲಭ್ಯವಾಗಿತ್ತು. ಈಗ ಮತ್ತೊಂದು ಹೊಸ ಆಯ್ಕೆಯೂ ವಾಟ್ಸಪ್ ನಲ್ಲಿ ದೊರೆಯಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೇರೆ ಎಲ್ಲಾ ಮೇಸೆಂಜರ್ ಆಪ್ ಗಳಲ್ಲಿ ಲಭ್ಯವಿದ್ದ ಅನಿಮೇಟೆಡ್ ಜಿಫ್ ಫೈಲ್ ಗಳನ್ನು ಇನ್ನು ಮುಂದೆ ವಾಟ್ಸಪ್ ನಲ್ಲಿಯೂ ಬಳಸಬಹುದಾಗಿದೆ. 6 ಸೆಕೆಂಡ್ ಗಳ ವಿಡಿಯೋವನ್ನು ಜಿಫ್ ಮಾಡಿ ಕಳುಹಿಸ ಬಹುದಾಗಿದೆ. 

ವಾಟ್ಸಪ್ 2.16.293 ವರ್ಷನ್ ನಲ್ಲಿ ಈ ಜಿಫ್ ಫೈಲ್ ಗಳನ್ನು ಕಳುಹಿಸಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ವಾಟ್ಸಪ್'ಗೆ ಪ್ರತಿಸ್ಪರ್ಧಿಗಳು ಹೆಚ್ಚಾದ ಹಿನ್ನಲೆಯಲ್ಲಿ ತನ್ನ ಗ್ರಾಹಕರನ್ನು ಉಳಿಸಕೊಳ್ಳುವ ಸಲುವಾಗಿ ಹೊಸ ಹೊಸ ಆಯ್ಕೆಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ.