₹15,000ಕ್ಕೆ ಸೂಪರ್ ಮೊಬೈಲ್, ಹೊಸ ಫೋನ್ ಹುಡುಕುತ್ತಿರೋರಿಗೆ ಬೆಸ್ಟ್ ಆಫರ್
ಭಾರತದಲ್ಲಿ Itel City 300 5G ಫೋನ್ ಬಿಡುಗಡೆ ಆಗಿದೆ. ಹೊಸ ಫೋನ್ ಖರೀದಿಸಲು ಯೋಚಿಸುತ್ತಿರೋರಿಗೆ ಇದು ಒಳ್ಳೆಯ ಆಯ್ಕೆ ಆಗಿದೆ. ಅದರ ಬೆಲೆ ಮತ್ತು ಫೀಚರ್ ಬಗ್ಗೆ ವಿವರ ಇಲ್ಲಿದೆ.

ಸಿಟಿ 300 5G ಫೋನ್
ಸಿಟಿ 300 5G ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಹೊಂದಿದ್ದು, ಸುಗಮ ಸ್ಕ್ರೋಲಿಂಗ್ ಖಚಿತಪಡಿಸಿದೆ. 5,000mAh ಬ್ಯಾಟರಿ ಮತ್ತು ಆಂಡ್ರಾಯ್ಡ್ 16 ಗೋ ಆವೃತ್ತಿಯನ್ನು ಒಳಗೊಂಡಿದೆ.
Itel City 300 5G ಬೆಲೆ ಎಷ್ಟು?
4GB RAM ಮತ್ತು 64GB ಸ್ಟೋರೇಜ್ ಬೆಲೆ ₹14,999. ಈ ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಡಾರ್ಕ್ ರೂಬಿ, ಮಿಸ್ಟ್ ಬೀಜ್ ಮತ್ತು ಬೋಲ್ಡ್ ಇಂಡಿಗೊ. ಇದನ್ನು ಕಂಪನಿಯ ಆಫ್‌ಲೈನ್ ಚಿಲ್ಲರೆ ಅಂಗಡಿಗಳಿಂದ ಖರೀದಿಸಬಹುದು.
ವಿಶೇಷತೆ ಏನು?
- 6.67-ಇಂಚಿನ HD+ LCD ಸ್ಕ್ರೀನ್
- 120Hz ರಿಫ್ರೆಶ್ ರೇಟ್
- ಡಿಸ್‌ಪ್ಲೇ ಪಂಚ್-ಹೋಲ್ ಡಿಸೈನ್
- 2.5D ಕರ್ವ್ಡ್ ಗ್ಲಾಸ್ ಹೊಂದಿದೆ
- 6nm ತಂತ್ರಜ್ಞಾನದಲ್ಲಿ ನಿರ್ಮಾಣ
- ಯುನಿಸಾಕ್ T8200 ಆಕ್ಟಾ-ಕೋರ್ ಪ್ರೊಸೆಸರ್
- 4GB LPDDR4X RAM ಮತ್ತು 64GB ಸ್ಟೋರೇಜ್'
- ಮೈಕ್ರೊ SD ಕಾರ್ಡ್‌ನೊಂದಿಗೆ 1TB ವರೆಗೆ ವಿಸ್ತರಣೆಗೆ ಅವಕಾಶ
Android 16 Go ಆವೃತ್ತಿ
ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 16 ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ಒಳಗೊಂಡಿದೆ. ಫೋನ್ 3.5mm ಹೆಡ್‌ಫೋನ್ ಜ್ಯಾಕ್, USB ಟೈಪ್-ಸಿ ಪೋರ್ಟ್, ಬ್ಲೂಟೂತ್ 5.0 ಮತ್ತು ವೈ-ಫೈ 5 ಸಪೋರ್ಟ್ ಮಾಡಲಿದೆ.
- ಐಟೆಲ್ ಸಿಟಿ 300 5G ಬ್ಯಾಟರಿ, ಕ್ಯಾಮೆರಾ
- 5,000mAh ಬ್ಯಾಟರಿಯಿಂದ ಚಾಲಿತ
- 10W ಚಾರ್ಜಿಂಗ್ ಸಪೋರ್ಟ್
- ಬಾಕ್ಸ್‌ನಲ್ಲಿ ಚಾರ್ಜರ್ ನೀಡುತ್ತದೆ
- 13MP ಹಿಂಬದಿ, 8MP ಮುಂಬದಿಯ ಕ್ಯಾಮೆರಾ ಹೊಂದಿದೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

