ಯುವಕನ ಖತರ್ನಾಕ್ ಐಡಿಯಾಕ್ಕೆ ಫಿದಾ ಆದ ಆನಂದ್ ಮಹೀಂದ್ರಾ: ವಿಡಿಯೋ ವೈರಲ್
ಹಣ್ಣು ಕೊಯ್ಯಲು ವ್ಯಕ್ತಿಯೊರ್ವ ನಿರ್ಮಿಸಿದ ಸೃಜನಶೀಲ ಆವಿಷ್ಕಾರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಈತನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯರು ಕಸದಿಂದ ರಸ ತಯಾರಿಸುವುದರಲ್ಲಿ ಭಾರಿ ಪರಿಣಿತರು. ಇದಕ್ಕೆ ಅನೇಕ ಉದಾಹರಣೆಗಳಿವೆ. ತಮ್ಮ ದಿನೋಪಯೋಗಕ್ಕಾಗಿ ಅನೇಕ ಸಣ್ಣ ಪುಟ್ಟ ತಂತ್ರಜ್ಞಾನಗಳನ್ನು ಭಾರತೀಯರು ಕಂಡು ಹಿಡಿದಿದ್ದನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಜನ ಸಾಮಾನ್ಯ ಭಾರತೀಯರು ಕಂಡು ಹಿಡಿದ ಅನೇಕ ಜುಗಾಡ್ ಐಡಿಯಾಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇರುವುದನ್ನು ನೀವು ನೋಡಿರಬಹುದು. ಐರನ್ ಬಾಕ್ಸ್‌ನಲ್ಲಿ ಚಪಾತಿ ಮಾಡಿದ್ದನ್ನು ಮೀನು ಹಿಡಿಯಲು ಹೊಸ ಟ್ರಿಕ್ಸ್ ಮಾಡಿದ್ದ ಸೇರಿದಂತೆ ಅನೇಕ ವಿಡಿಯೋಗಳು ವೈರಲ್ ಆಗಿವೆ.
ಈಗ ವ್ಯಕ್ತಿಯೊಬ್ಬ ಮರದಿಂದ ಹಣ್ಣು ಕೊಯ್ಯಲು ಮಾಡಿದ ತಂತ್ರಜ್ಞಾನವೊಂದು ವೈರಲ್ ಆಗಿದ್ದು ಇದನ್ನು ಉದ್ಯಮಿ ಆನಂದ್ ಮಹೀಂದ್ರ ಕೂಡ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಯಿಂದ ಇರುವ ಮಹೀಂದ್ರಾ ಸಂಸ್ಥಾಪಕ ಆನಂದ್ ಮಹೀಂದ್ರಾ ಅವರು ಇಂತಹ ಆವಿಷ್ಕಾರದ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಮಾಡುತ್ತಿದ್ದಾರೆ. ಅದೇ ರೀತಿ ಈಗ ಹಣ್ಣು ಕೊಯ್ಯಲು ವ್ಯಕ್ತಿಯೊಬ್ಬ ಮಾಡಿದ ತಂತ್ರಜ್ಞಾನವನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
35ಕ್ಕೂ ಹೆಚ್ಚು ಹೊಸ ಕೃಷಿ ಯಂತ್ರ ಸಂಶೋಧನೆ; ಕೃಷಿ ಯಂತ್ರಕರ್ತೆ ಶೈಲಜಾ ವಿಠಲ್!
ಈ ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೋರ್ವ ಎತ್ತರದ ಮರದಿಂದ ಹಣ್ಣನ್ನು ಕೊಯ್ಯಲು ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾನೆ. ಒಂದು ಕೋಕಾ ಕೊಲ ಬಾಟಲಿಯನ್ನು ಅದರ ಕೆಳಭಾಗದಲ್ಲಿ ಹೂವಿನ ಎಸಳಿನಂತೆ ನಾಲ್ಕು ಭಾಗ ಮಾಡುತ್ತಾನೆ. ಅದರೊಳಗೆ ಬಟ್ಟೆ ಒಣ ಹಾಕಲು ಬಳಸುವ ಹಗ್ಗದಂತಿರುವ ಹಗ್ಗವನ್ನು ಹೆಣೆಯುವ ಆತ ಆ ಬಾಟಲಿಯ ಮುಚ್ಚಳದ ಭಾಗಕ್ಕೆ ಉದ್ದವಾದ ಪ್ಲಾಸ್ಟಿಕ್ ಪೈಪ್‌ಗಳನ್ನು ಕಟ್ಟುತ್ತಾನೆ. ಪೈಪಿನೊಳಗೆಯೋ ಆತ ಈ ಹಗ್ಗವನ್ನು ಹರಿ ಬಿಟ್ಟು ತುಂಬ ಗಟ್ಟಿಯಾಗಿ ಕಟ್ಟುತ್ತಾನೆ. ಈ ಪೈಪ್‌ನೊಳಗಿರುವ ಹಗ್ಗವನ್ನು ಎಳೆದರೆ ಮೇಲಿರುವ ಬಾಟಲಿ ಹೂವಿನಂತೆ ತೆರೆದುಕೊಳ್ಳುತ್ತದೆ. ಹೀಗಾಗಿ ಹಣ್ಣು ಕೊಯ್ಯಲು ಮರದ ಬಳಿ ಇದನ್ನು ಸಾಗಿಸುವ ಈತ ಮರದಲ್ಲಿರುವ ಹಣ್ಣಿನ ಸಮೀಪ ಬಂದು ಕೆಳಭಾಗದಿಂದ ಹಗ್ಗವನ್ನು ಎಳೆಯುತ್ತಾನೆ. ಇದರಿಂದ ಹಣ್ಣುಗಳು ಯಾವುದೇ ಗಾಯಗಳಾಗದೇ ಬಾಟಲಿಯೊಳಗೆ ಬೀಳುತ್ತದೆ. ಈ ಮೂಲಕ ನೆಲಕ್ಕೆ ಬೀಳದೇ ಯಾವುದೇ ಗಾಯವಾಗದೇ ಹಣ್ಣು ನಮ್ಮ ಕೈಗೆಟುಕುವುದು.
ಸಾಮಾನ್ಯವಾಗಿ ನಮ್ಮ ಹಳಿಯ ಶೈಲಿಯಲ್ಲಿ ಹಣ್ಣು ಕೊಯ್ಯುವುದಾದರೆ ಹಣ್ಣು ಕೊಯ್ಯುವಾಗಲೇ ಸಾಕಷ್ಟು ಹಣ್ಣುಗಳು ನೆಲದ ಮೇಲೆ ಬಿದ್ದು ಗಾಯಗೊಂಡು ಹಾಳಾಗುವುದು ಆದರೆ ಈತ ಪತ್ತೆ ಮಾಡಿದ ಈ ಹೊಸ ತಂತ್ರಜ್ಞಾನ ನೋಡುಗರಿಗೆ ಇಷ್ಟವಾಗಿದ್ದು, ಹಣ್ಣನ್ನು ಹಾನಿಯಾಗದಂತೆ ಕೊಯ್ಯುವುದಕ್ಕೆ ಒಂದು ಹೊಸ ಉಪಾಯವಾಗಿದೆ. ಇದನ್ನು ಆನಂದ್ ಮಹೀಂದ್ರಾ ಮೆಚ್ಚಿಕೊಂಡಿದ್ದು, ಇದೊಂದು ಸೃಜನಶೀಲತೆಯ ಆವಿಷ್ಕಾರವಾಗಿದೆ. ಅಮೆರಿಕಾದಲ್ಲಿ ಇಂತಹ ಸೃಜನಶೀಲತೆ ಹೆಚ್ಚಿರುವುದರಿಂದಲೇ ಆ ದೇಶ ಸೃಜನಶೀಲತೆಯ ಶಕ್ತಿ ಕೇಂದ್ರವಾಯಿತು ಎಂದು ಅವರು ಬರೆದುಕೊಂಡಿದ್ದಾರೆ.
ಫಾರ್ಮುಲಾ ರೇಸರ್‌ಗೆ ಯಾವುದರಲ್ಲೂ ಕಡಿಮೆ ಇಲ್ಲ ಈ ಹಾಲು ಮಾರಾಟಗಾರ: video viral