ಅಪಘಾತಕ್ಕೆ ಗುರಿಯಾಗಿದ್ದ ಬೈಕ್‌ ಸವಾರನ ಪ್ರಾಣ ಉಳಿಸಿದ Apple ಸ್ಮಾರ್ಟ್ ವಾಚ್!

* ಬೈಕ್ ಅಪಘಾತಕ್ಕೆ ಒಳಗಾಗಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಸ್ಮಾರ್ಟ್ ವಾಚ್
* ವ್ಯಾನ್ ಗೆ ಡಿಕ್ಕಿಯಾಗಿ ಗಂಭೀರ ಸ್ಥಿತಿಯಲ್ಲಿದ್ದರು
* ತುರ್ತು ಸೇವೆಗೆ ಸಂದೇಶ ರವಾನಿಸಿದ ಸ್ಮಾರ್ಟ್ ವಾಚ್

An Apple Watch saved a Singapore motorcyclist s life mah

ಸಿಂಗಪುರ(ಅ.01)  ಸ್ಮಾರ್ಟ್ ವಾಚ್ ಈ ವ್ಯಕ್ತಿಯ ಪ್ರಾಣ ಉಳಿಸಿದೆ.  24 ವರ್ಷದ ಮೋಟಾರ್ ಸೈಕಲ್ ಸವಾರನ ಪ್ರಾಣವನ್ನು ಸ್ಮಾರ್ಟ್ ವಾಚ್ ಕಾಪಾಡಿದೆ. ಇದು ಸಿಂಗಪುರದ ಕತೆ.. ಅಪಘಾತವಾದ ನಂತರ ಬೈಕ್ ಸವಾರ ಧರಿಸಿದ್ದ ಸ್ಮಾರ್ಟ್ ವಾಚ್ ಸಂದೇಶ ರವಾನಿಸಿದೆ.  ಸೆಪ್ಟೆಂಬರ್ 25 ರಂದು  ಮುಹಮ್ಮದ್ ಫಿತ್ರಿ  ಅಪಘಾತಕ್ಕೆ ಗುರಿಯಾಗಿದ್ದಾರೆ. ವ್ಯಾನ್‌ಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. 

ಬೈಕ್ ಸವಾರ  ಆಪಲ್ ವಾಚ್ ಸೀರಿಸ್ 4 ನ್ನು ಧರಿಸಿದ್ದ. ತುರ್ತು ಸಂದರ್ಭದಲ್ಲಿ ತನ್ನಿಂದ ತಾನೆ ಸಂದೇಶ ನೀಡುವ ಫೀಚರ್ ಇದರಲ್ಲಿ ಇತ್ತು. ಅಪಘಾತವಾದ ತಕ್ಷಣ ವಾಚ್ ಆ ಕೆಲಸ ಮಾಡಿದೆ.

ನೆಲಕ್ಕೆ ಕುಸಿದ 78 ವರ್ಷದ ವೃದ್ಧನ ಪ್ರಾಣ ಉಳಿಸಿದ Apple ಸ್ಮಾರ್ಟ್ ವಾಚ್‌!

ಹಾರ್ಡ್ ಫಾಲ್ ಅಲರ್ಟ್ ನ್ನು ವ್ಯಕ್ತಿ ಓಪನ್ ಮಾಡಿ ಇಟ್ಟುಕೊಂಡಿದ್ದರು. ಅಪಘಾತವಾದ ತಕ್ಷಣ ವಾಚ್ ಸಹಾಯಕ್ಕಾಗಿ ಸಂದೇಶ ಕಳಿಸಿದೆ. ರಾತ್ರಿ 8:20 ಸುಮಾರಿಗೆ ಅಪಘಾತವಾದ ಜಾಗಕ್ಕೆ ತೆರಳಿದ ಅಧಿಕಾರಿಗಳು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಮಾರ್ಟ್ ವಾಚ್ ನೆರವಿನಿಂದ ವ್ಯಕ್ತಿ ತಮ್ಮ ಪ್ರಾಣ ಕಾಪಾಡಿಕೊಂಡಿದ್ದಾರೆ, 

ಈ ವರ್ಷದ ಜೂನ್ ನಲ್ಲಿಯೂ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ನಾರ್ತ್ ಕ್ಯಾಲಿಪೋರ್ನಿಯಾದಲ್ಲಿ   78  ವ್ಯಕ್ತಿ  ಕುಸಿದು ಬಿದ್ದಿದ್ದರು.. ಅವರನ್ನು ವಾಚ್ ಸಹಾಯದಿಂದ ಪತ್ತೆ ಮಾಡಲಾಗಿತ್ತು. ವಾಚ್ ಸಂದೇಶ ಕೊಟ್ಟ ಕಾರಣಕ್ಕೆ  25 ವರ್ಷದ ವ್ಯಕ್ತಿ ಆಸ್ಪತ್ರೆಗೆ ಧಾವಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸ್ಮಾರ್ಟ್ ವಾಚ್ ಪ್ರಾಣ ಕಾಪಾಡುವ ಕೆಲಸ ಮಾಡುತ್ತಿದೆ.  

ದಿಗ್ಗಜ ಆಪಲ್ ತನ್ನ ಉತ್ಪನ್ನಗಳಲ್ಲಿ ಸದಾ ಗುಣಮಟ್ಟ ಕಾಪಾಡಿಕೊಂಡು ಬಂದಿದೆ. ಸೀರಿಸ್ 4 ವಾಚುಗಳಿಗೆ 71,900 ರೂ. ಇದೆ.  ಹಲವಾರು ಸಂದರ್ಭದಲ್ಲಿ ಇದು ಪ್ರಾಣ ರಕ್ಷಕನಾಗಿ ಕೆಲಸ ಮಾಡುತ್ತಿದೆ. 

 

 

Latest Videos
Follow Us:
Download App:
  • android
  • ios