ನೆಲಕ್ಕೆ ಕುಸಿದ 78 ವರ್ಷದ ವೃದ್ಧನ ಪ್ರಾಣ ಉಳಿಸಿದ Apple ಸ್ಮಾರ್ಟ್ ವಾಚ್!
- ತಂತ್ರಜ್ಞಾನಗಳು ಮಾನವನ ಬದುಕಿಗೆ ಅತ್ಯುತ್ತಮ ಕೊಡುಗೆ ನೀಡುತ್ತಿದೆ
- ಹಲವು ಬಾರಿ ತಂತ್ರಜ್ಞಾನ ಮುನಷ್ಯನನ್ನು ಆಪತ್ತಿನಿಂದ ಪಾರು ಮಾಡಿದೆ
- ಇದೀಗ ನೆಲಕ್ಕೆ ಕುಸಿದ 78ರ ವೃದ್ಧನ ಪ್ರಾಣ ಉಳಿಸುವಲ್ಲಿ Apple ವಾಚ್ ಯಶಸ್ವಿಯಾಗಿದೆ
ಉತ್ತರ ಕ್ಯಾರೋಲಿನಾ(ಜು.01): ತಂತ್ರಜ್ಞಾನದಿಂದ ನಮಗೆ ಹಲವು ಪ್ರಯೋಜನ ಹಾಗೂ ಅಷ್ಟೆ ಅಪಾಯವೂ ಇದೆ. ಸರಿಯಾಗಿ ಬಳಕೆ ಮಾಡಿಕೊಂಡರೆ ತಂತ್ರಜ್ಞಾನಗಳು ಬದುಕಿನ ಯಶಸ್ಸಿನಲ್ಲಿ ಹಲವು ಕೊಡುಗೆಗಳನ್ನು ನೀಡುತ್ತಿದೆ. ಹಲವು ಬಾರಿ ಇದೇ ಟೆಕ್ನಾಲಜಿಗಳು ರಾಷ್ಟ್ರ, ಮಾನವ ಸಂಕುಲವನ್ನು ಆಪತ್ತಿನಿಂದ ಪಾರು ಮಾಡಿದೆ. ಇದೀಗ ಅಮೆರಿಕದ ಉತ್ತರ ಕ್ಯಾರೋಲಿನಾ ನಿವಾಸಿ 78ರ ವೃದ್ಧನ ಪ್ರಾಣ ಉಳಿಸುವಲ್ಲಿ ಆ್ಯಪಲ್ ವಾಚ್ ನೆರವಾಗಿದೆ.
ವಾಚ್‌ನಿಂದ ಬೈಕ್ ಸ್ಟಾರ್ಟ್, ಗಂಗಾವತಿ ಯುವಕನ ಸೂಪರ್ ಐಡ್ಯಾ!
78 ವರ್ಷದ ಮೈಕ್ ಯಾಗರ್ ಮನೆಯಿಂದ ಹೊರ ಬಂದ ತಕ್ಷಣ ಅಸ್ವಸ್ಥರಾಗಿದ್ದಾರೆ. ಪರಿಣಾಮ ದಿಢೀರ್ ಕುಸಿದು ಬಿದ್ದಿದ್ದಾರೆ. ಮೈಕ್ ಯಾಗರ್ ಸನಿಹದಲ್ಲಿ ಕುಟುಂಬ ಸದಸ್ಯರು ಇರಲಿಲ್ಲ. ಆದರೆ ಮೈಕ್ ಯಾಗರ್ ಕೈಯಲ್ಲಿ ಕಟ್ಟಿಕೊಂಡಿದ್ದ ಆ್ಯಪಲ್ ವಾಚ್ ತಕ್ಷಣವೆ ಸಮ್ಮರ್‌ಫೀಲ್ಡ್ ಫೈರ್ ಡಿಪಾರ್ಟ್‌ಮೆಂಟ್‌ಗೆ ಅಲರ್ಟ್ ನೀಡಿದೆ.
ಆ್ಯಪಲ್ ಸ್ಮಾರ್ಟ್‌ವಾಚ್‌ನಲ್ಲಿ ಫಾಲ್ ಡೆಟೆಕ್ಷನ್ ಫೀಚರ್ಸ್ ತಕ್ಷಣ ಎಮರ್ಜೆನ್ಸಿ ಸಂದೇಶ ಕಳುಹಿಸಿದೆ. ಸಂದೇಶ ಪಡೆದ ಸಮ್ಮರ್‌ಫೀಲ್ಡ್ ಫೈರ್ ಡಿಪಾರ್ಟ್‌ಮೆಂಟ್ ಅಧಿಕಾರಿಗಳು ಸ್ಥಳ್ಕಕೆ ಧಾವಿಸಿದ್ದಾರೆ. ಬಳಿಕ ಮೈಕ್ ಯಾಗರ್ ಅವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಸೂಕ್ತ ಸಂದರ್ಭಕ್ಕೆ ಆಸ್ಪತ್ರೆ ದಾಖಲಿಸಿ ಚಿಕಿತ್ಸೆನೀಡಿದ ಕಾರಣ ಮೈಕ್ ಯಾಗರ್ ಪ್ರಾಣ ಉಳಿದಿದೆ.
ಭಾರತದಲ್ಲಿ ಒನ್ ಪ್ಲಸ್ ಸ್ಮಾರ್ಟ್ ವಾಚ್ ಬಿಡುಗಡೆ!
ತಾನು ಮನೆ ಹೊರಭಾಗದಲ್ಲಿ ಕುಸಿದು ಬಿದ್ದಿರುವ ಮಾಹಿತಿ ಹೇಗೆ ಅಧಿಕಾರಿಗಳಿಗೆ ತಿಳಿಯಿತು ಎಂದು ಮೈಕ್ ಯಾಗರ್ ಪ್ರಶ್ನಿಸಿದಾಗ, ಅಧಿಕಾರಿಗಳು ವಾಚ್ ಕಳುಹಿಸಿದ ಮೆಸೇಜ್ ಕುರಿತು ಬಹಿರಂಗ ಪಡಿಸಿದ್ದಾರೆ. ಪ್ರಾಣ ಉಳಿಸಿದ ಅಧಿಕಾರಿಗಳು ಹಾಗೂ ಆ್ಯಪಲ್ ವಾಚ್‌ಗೆ ಯಾಗರ್ ಪತ್ನಿ ಲೊರಿ ಧನ್ಯವಾದ ಹೇಳಿದ್ದಾರೆ.