ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸಕ್ಕೆ ಜಾಗತಿಕ ಕೇಂದ್ರ UKಯ ಕೊವೆಂಟ್ರಿಯಲ್ಲಿ ಜಾಗತಿಕ ಫ್ಯೂಚರ್‌ಫೌಂಡರಿ ಸೆಂಟರ್ ಯುಕೆಯಲ್ಲಿ ಫ್ಯೂಚರ್ ಫೌಂಡರಿ ಕೇಂದ್ರ ಘೋಷಿದ ಓಲಾ

ಬೆಂಗಳೂರು(ಜ.27): ಭಾರತದಲ್ಲಿ ಎಲೆಕ್ಟ್ರಿಕ್ ವಾಹನ(Electric Vehicle) ವಿಭಾಗದಲ್ಲಿ ಓಲಾ ಹೊಸ ಇತಿಹಾಸ ರಚಿಸಿದೆ. ಈಗಾಗಲೇ ಓಲಾ ಎರಡು ವೇರಿಯೆಂಟ್ ಸ್ಕೂಟರ್(Ola Scooter) ಬಿಡುಗಡೆ ಮಾಡಿ ಭಾರಿ ಯಶಸ್ಸು ಗಳಿಸಿದೆ. 180 ಕಿ.ಮೀ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. ಇದರ ಜೊತೆಗೆ ಫ್ಯೂಚರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಕುರಿತ ಸುಳಿವು ನೀಡಿದೆ. ಇದರ ಬೆನ್ನಲ್ಲೇ ಮತ್ತೊಂದು ಕ್ರಾಂತಿಗೆ ಮುಂದಾಗಿದೆ. ಎಲೆಕ್ಟ್ರಿಕ್ ವಾಹನ ವಿನ್ಯಾಸ, ಎಂಜಿನಿಯರಿಂಗ್‌ಗಾಗಿ ಯುನೈಟೆಡ್ ಕಿಂಗ್ಡಮ್‌ನಲ್ಲಿ(United Kingdom) ಓಲಾ ಜಾಗತಿಕ ಫ್ಯೂಚರ್‌ಫೌಂಡರಿ(Futurefoundry) ಸೆಂಟರ್ ಘೋಷಿಸಿದೆ. ಇದಕ್ಕಾಗಿ 100 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡುತ್ತಿದೆ.

ವಿಶ್ವದ ಅತ್ಯುತ್ತಮ ಆಟೋಮೋಟಿವ್ ವಿನ್ಯಾಸ ಮತ್ತು ಎಂಜಿನಿಯರಿಂಂಗ್ ಪ್ರತಿಭೆಗಳಿಗೆ ಜಾಗತಿಕ ಕೇಂದ್ರವಾಗಿ ಯುಕೆ ಫ್ಯೂಚರ್‌ಫೌಂಡರಿ ಕಾರ್ಯನಿರ್ವಹಿಸಲಿದೆ ಎಂದು ಓಲಾ ಹೇಳಿದೆ. 2W ಮತ್ತು 4W ವಾಹನ ವಿನ್ಯಾಸ, ಸುಧಾರಿತ ಆಟೋಮೇಟಿವ್ ಎಂಜಿನಿಯರಿಂಗ್, ಡಿಜಿಟಲ್ ತಂತ್ರಜ್ಞಾನಗಳ(Digital Technology) ಸುಧಾರಣೆಗಾಗಿ ಯುಕೆ ಪ್ಯೂಚರ್‌ಫೌಂಡರಿ ಸೆಂಟರ್ ಕಾರ್ಯನಿರ್ವಹಿಸಲಿದೆ. ಈ ಜಾಗತಿಕ ಕೇಂದ್ರ ಬೆಂಗಳೂರಿನಲ್ಲಿರುವ(Bengaluru) ಓಲಾ ವಿನ್ಯಾಸ ಹಾಗೂ ಎಂಜಿನಿಯರಿಂಗ್ ತಂಡದ ಜೊತೆ ಕಾರ್ಯನಿರ್ವಹಿಸಲಿದೆ ಎಂದು ಓಲಾ ಹೇಳಿದೆ.

S1 Scooter ಹಾರ್ಡ್ವೇರ್ ಅಪ್ಗ್ರೇಡ್ ಮಾಡಲಿರುವ Ola Electric: ಡೆಲಿವರಿ ಇನ್ನಷ್ಟು ವಿಳಂಬ ಸಾಧ್ಯತೆ!

ಓಲಾ ಎಲೆಕ್ಟ್ರಿಕ್ ಭಾರತದ ಮಾರುಕಟ್ಟೆಯನ್ನು(Indian Vehicle Market) ಆಕ್ರಮಿಸಿಕೊಳ್ಳುತ್ತಿದೆ. ಓಲಾ ಕ್ಯಾಬ್ ಸರ್ವೀಸ್ ಅದ್ಯಾವ ಮಟ್ಟಿಗೆ ಭಾರತದ ನಗರಗಳಲ್ಲಿ ಆವರಿಸಿಕೊಂಡು ಬಿಟ್ಟಿತ್ತೋ, ಅದೇ ರೀತಿ ಇದೀಗ ಓಲಾ ಎಲೆಕ್ಟ್ರಿಕ್ ಸ್ಕೂಟರ್ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ಸ್ಕೂಟರ್ ಇದಾಗಿದ್ದು, ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರ ಜೊತೆಗೆ ಇದೀಗ ಎಲೆಕ್ಟ್ರಿಕ್ ಕಾರು ಉತ್ಪಾದನೆಗೂ ಓಲಾ ಮುಂದಾಗಿದೆ. ಹೀಗಾಗಿ ಅತ್ಯುತ್ತಮ ಡಿಸೈನ್, ಎಂಜಿನಿಯರಿಂಗ್, ತಂತ್ರಜ್ಞಾನಕ್ಕಾಗಿ ಲಂಡನ್‌ನಲ್ಲಿ ಫ್ಯೂಚರ್ ಫೌಂಡರಿ ಕೇಂದ್ರ ಸ್ಥಾಪಿಸುತ್ತಿದೆ. ಈ ಮೂಲಕ ಭಾರತ ಮಾತ್ರವಲ್ಲ ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪಾಲುದಾರಿಕೆಯತ್ತ ಓಲಾ ಮುಂದಾಗಿದೆ.

ಯುಕೆಯಲ್ಲಿ ಓಲಾ ಆರಂಭಿಸಲಿರುವ ಫ್ಯೂಚರ್ ಫೌಂಡರಿ ಕೇಂದ್ರಕ್ಕೆ 100 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುತ್ತಿದೆ. ಇದನ್ನು ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಓಲಾ ಹೂಡಿಕೆ ಮಾಡಲಿದೆ. ಯುಕೆಯಲ್ಲಿನ ಸುಸಜ್ಜಿತ ಕೇಂದ್ರದಲ್ಲಿ 200ಕ್ಕೂ ಹೆಚ್ಚು ವಿನ್ಯಾಸಕಾರರು, ಎಂಜಿನಿಯರ್ಸ್ ಸೇರಿದಂತೆ ಹಲವು ತಂತ್ರಜ್ಞರನ್ನು ಹೊಂದಿರಲಿದೆ. ಯುಕೆ ಕೇಂದ್ರ ಯುಕೆಯಲ್ಲಿ ವಿಶ್ವ ದರ್ಜೆಯ ಶಿಕ್ಷಣ ಮತ್ತು ರಿಸರ್ಚ್ ಸಂಸ್ಥೆಗಳೊಂದಿಗೆ ಓಲಾ ಫ್ಯೂಚರ್‌ಫೌಂಡರಿ ಪಾಲುದಾರಿಕೆ ಮಾಡಿಕೊಳ್ಳುತ್ತಿದೆ.

Ola S1 Pro Range Test ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?

ಓಲಾ ಎಲೆಕ್ಟ್ರಿಕ್ ಭವಿಷ್ಯದ ವಾಹನವನ್ನು ಪ್ರತಿನಿಧಿಸುತ್ತಿದೆ. ಭವಿಷ್ಯದ ವಾಹನದಲ್ಲಿ ಓಲಾ ಕೂಡುಗೆಯೂ ಪ್ರಮುಖವಾಗಿದೆ. ಹೀಗಾಗಿ ಅತ್ಯುತ್ತಮ ಡಿಸೈನ್, ಎಂಜಿನಿಯರಿಂಗ್, ತಂತ್ರಜ್ಞಾನದ ಅವಶ್ಯಕತೆ ಇದೆ. ಮುಂದಿನ ಜನರೇಶನ್ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಯುಕೆ ಫ್ಯೂಚರ್‌ಫೌಂಡರಿ ಘಟಕ ನೆರವಾಗಲಿದೆ. ಜಾಗತಿಕ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ವಿಶ್ವ ದರ್ಜೆ ವಾಹನ, ಗುಣಮಟ್ಟ, ವಿನ್ಯಾಸ, ತಂತ್ರಜ್ಞಾನದ ಅವಶ್ಯಕತೆ ಇದೆ. ಇದಕ್ಕಾಗಿ ಯುಕೆ ಫ್ಯೂಚರ್‌ಫೌಂಡರಿ ಕಾರ್ಯನಿರ್ವಹಿಸಲಿದೆ ಎಂದು ಓಲಾ ಸಿಇಒ ಭವಿಷ್ ಅಗರ್ವಾಲ್ ಹೇಳಿದ್ದಾರೆ. ಬೆಂಗಳೂರಿನ ಮುಖ್ಯ ಕಚೇರಿ ಹೊಂದಾಣಿಕೆಯ್ಲಲಿ ಯುಕೆ ಫ್ಯೂಚರ್ ಫೌಂಡರಿ ಕಾರ್ಯನಿರ್ವಹಿಸಲಿದೆ ಎಂದು ಅಗರ್ವಾಲ್ ಹೇಳಿದ್ದಾರೆ. 

ಭಾರತ ಮಾತ್ರವಲ್ಲ ವಿಶ್ವದ ಮೂಲೆ ಮೂಲೆಗೂ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ವಾಹನ ವಿತರಣೆ ಮಾಡಲಿದ್ದೇವೆ. ಇದಕ್ಕಾಗಿ ಓಲಾ ತಯಾರಿ ಆರಂಭಿಸಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್, ಓಲಾ ಎಲೆಕ್ಟ್ರಿಕ್ ರಿಕ್ಷಾ, ಓಲಾ ಎಲೆಕ್ಟ್ರಿಕ್ ಕಾರು ಸೇರಿದಂತೆ ಇತರ ಎಲೆಕ್ಟ್ರಿಕ ವಾಹನ ಉತ್ಪಾದನೆ ಮಾಡಲಿದೆ ಎಂದು ಭವಿಷ್ ಅಗರ್ವಾಲ್ ಹೇಳಿದ್ದಾರೆ. ಈ ಮೂಲಕ ಓಲಾ ಭಾರತದ ಹಾಗೂ ವಿಶ್ವದಲ್ಲಿ ಅತೀ ದೊಡ್ಡ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವಾಗಿ ಹೊರಹೊಮ್ಮುವ ಕುರಿತು ಸೂಚನೆ ನೀಡಿದೆ.