Asianet Suvarna News Asianet Suvarna News

Airtel vs Jio vs Vi: 3GB ದೈನಂದಿನ ಡೇಟಾ, ಅನಿಯಮಿತ ಕರೆಗಳೊಂದಿಗೆ ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ಸ್

ದೈನಂದಿನ ಆಧಾರದ ಮೇಲೆ ಸಾಕಷ್ಟು ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಬಯಸುವವರು ಈ  ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಶೀಲಿಸಬಹುದು.
 

Airtel vs Jio vs Vodafone Idea prepaid recharge plans 3GB daily data unlimited calls mnj
Author
Bengaluru, First Published Apr 22, 2022, 12:45 PM IST

Airtel vs Jio vs Vi: ಪ್ರತಿಯೊಬ್ಬರ ಬಜೆಟ್‌ಗೆ ಅನುಗುಣವಾಗಿ ಪ್ರಿಪೇಯ್ಡ್ ಪ್ಯಾಕನ್ನು ಆಯ್ಕೆ ಮಾಡಲು ಟೆಲಿಕಾಂ ಕಂಪನಿಗಳ ವಿವಿಧ ಬೆಲೆಯ ಯೋಜನೆಗಳನ್ನು ನೀಡುತ್ತವೆ. ಏರ್‌ಟೆಲ್, ಜಿಯೋ ಮತ್ತು ವೋಡಾಫೋನ್‌ ಐಡಿಯಾ (Vi) ಬಳಕೆದಾರರಿಗೆ ಹಲವಾರು ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ. ದೈನಂದಿನ ಆಧಾರದ ಮೇಲೆ ಸಾಕಷ್ಟು ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಬಯಸುವವರು ಈ ಯೋಜನೆಗಳನ್ನು ಪರಿಶೀಲಿಸಬಹುದು. ಈ ಪ್ಲಾನ್‌ಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಅಥವಾ ಅಮೆಜಾನ್ ಪ್ರೈಮ್ ಮೊಬೈಲ್ ಆವೃತ್ತಿಯಂತಹ ಓಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುವ ಯೋಜನೆಗಳು ಸಹ ಇವೆ. ಕನಿಷ್ಠ 3GB ದೈನಂದಿನ ಡೇಟಾ ಮತ್ತು ಇತರ ಪ್ರಯೋಜನಗಳನ್ನು ಸಮಂಜಸವಾದ ಬೆಲೆಯಲ್ಲಿ ನೀಡುವ ಯೋಜನೆಗಳ ಪಟ್ಟಿ ಇಲ್ಲಿದೆ

Jio Rs 419 prepaid plan: ಜಿಯೋ ರೂ 419 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಹೊಂದಿದ್ದು, ಇದು ಅನಿಯಮಿತ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಯೋಜನೆಯೊಂದಿಗೆ, ಗ್ರಾಹಕರು 3GB ದೈನಂದಿನ ಡೇಟಾ ಮತ್ತು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಪಡೆಯುತ್ತಾರೆ. ಹೀಗಾಇ ಈ ಯೋಜನೆಯಲ್ಲಿ ಒಟ್ಟು 84GB ಡೇಟಾವನ್ನು ಪಡೆಯಬಹುದು. 

ಇದನ್ನೂ ಓದಿ: Jio vs Airtel vs VI: ದೈನಂದಿನ ಡೇಟಾ ಪ್ರಯೋಜನಗಳೊಂದಿಗೆ ₹300 ಒಳಗಿನ ಪ್ರಿಪೇಯ್ಡ್ ಪ್ಲಾನ್ಸ್

ಯೋಜನೆಯು ದಿನಕ್ಕೆ 100 ಎಸ್‌ಎಮ್‌ಎಸ್ ಒಳಗೊಂಡಿರುತ್ತದೆ ಮತ್ತು ನೀವು ಅದನ್ನು ಖರೀದಿಸಿದ ನಂತರ 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದು Jio TV, JioCinema ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ಒಳಗೊಂಡಿದೆ.

Airtel Rs 599 recharge plan: ಏರ್‌ಟೆಲ್ ಅದೇ ಪ್ರಯೋಜನಗಳನ್ನು ಹೆಚ್ಚಿನ ಬೆಲೆಗೆ ನೀಡುತ್ತಿದೆ. ಆದಾಗ್ಯೂ, ಇದು ಡಿಸ್ನಿ + ಹಾಟ್‌ಸ್ಟಾರ್ ಮತ್ತು ಅಮೆಝಾನ್ ಪ್ರೈಮ್ ಮೊಬೈಲ್ ಆವೃತ್ತಿಗೆ ಪ್ರವೇಶವನ್ನು ನೀಡುತ್ತಿದೆ, ಇದು 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ ಈ ಯೋಜನೆಯು ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಮ್‌ಎಸ್, ಪ್ರತಿದಿನ 3GB ಡೇಟಾ ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್  ಒಳಗೊಂಡಿದೆ. 

ಇದನ್ನೂ ಓದಿJio vs Vi vs Airtel: ₹1,000 ಕ್ಕಿಂತ ಕಡಿಮೆ ಪ್ರಿಪೇಯ್ಡ್ ಯೋಜನೆಗಳಲ್ಲಿ ಯಾವುದು ಬೆಸ್ಟ್?

ಅಲ್ಲದೇ ನೀವು 3 ತಿಂಗಳವರೆಗೆ ಅಪೊಲೊ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ, ಶಾ ಅಕಾಡೆಮಿಯಲ್ಲಿ ಉಚಿತ ಆನ್‌ಲೈನ್ ಕೋರ್ಸ್ ಮತ್ತು ಹೆಚ್ಚಿನದನ್ನು ಪಡೆಯುತ್ತೀರಿ. ಯೋಜನೆಯು 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ.

Vi Rs 475 prepaid plan: ವೋಡಾಫೋನ್‌ ಐಡಿಯಾ ರೂ.475 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್  ನೀಡುತ್ತದೆ. ಇದು ದಿನಕ್ಕೆ 3GB ಡೇಟಾ, ಅನಿಯಮಿತ ಕರೆಗಳು ಮತ್ತು 100 ದೈನಂದಿನ ಎಸ್‌ಎಮ್‌ಎಸ್ ಒಳಗೊಂಡಿದೆ. ಯೋಜನೆಯು ನೀವು ಖರೀದಿಸಿದ ದಿನದಿಂದ 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದಲ್ಲದೇ, ಈ ಯೋಜನೆಯು 12:00AM ನಿಂದ 6:00AM ವರೆಗೆ ಹೆಚ್ಚುವರಿ ನೈಟ್ ಡೇಟಾವನ್ನು ಸಹ ನೀಡುತ್ತದೆ. ‌

ಪ್ಯಾಕ್ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಸಹ ಬೆಂಬಲಿಸುತ್ತದೆ, ಇದರರ್ಥ ಮೂಲಭೂತವಾಗಿ ವಾರಾಂತ್ಯದಲ್ಲಿ ಎಲ್ಲಾ ಬಳಕೆಯಾಗದ ಡೇಟಾವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಒಮ್ಮೆ ನೀವು ಎಲ್ಲಾ ಡೇಟಾವನ್ನು ಖಾಲಿ ಮಾಡಿದರೆ, ವೇಗವು 64Kbpsಗೆ ಇಳಿಯುತ್ತದೆ ಎಂದು ವೀ ಹೇಳಿದೆ

Follow Us:
Download App:
  • android
  • ios