ರಿಲಯನ್ಸ್ ಜಿಯೋಗೆ  ಸಮರ್ಪಕವಾಗಿ ಅಂತರ್ ಸಂಪರ್ಕ ನೀಡದೇ ಇದ್ದ ಕಾರಣ ಏರ್ ಟೇಲ್, ವಡಾಫೋನ್ ಹಾಗೂ ಐಡಿಯಾ ಕಂಪನಿಗಳಿಗೆ ಟ್ರಾಯ್ ದಂಡ ವಿಧಿಸಿದೆ.

ನವದೆಹಲಿ (ಅ.21): ರಿಲಯನ್ಸ್ ಜಿಯೋಗೆ ಸಮರ್ಪಕವಾಗಿ ಅಂತರ್ ಸಂಪರ್ಕ ನೀಡದೇ ಇದ್ದ ಕಾರಣ ಏರ್ ಟೇಲ್, ವಡಾಫೋನ್ ಹಾಗೂ ಐಡಿಯಾ ಕಂಪನಿಗಳಿಗೆ ಟ್ರಾಯ್ ದಂಡ ವಿಧಿಸಿದೆ.

ಜಿಯೋ ನೀಡುತ್ತಿರುವ ಸ್ಪರ್ಧೆಯನ್ನು ಹತ್ತಿಕ್ಕಲು ಈ ಮೂರು ಕಂಪನಿಗಳು ಹುನ್ನಾರ ನಡೆಸಿದೆ. ಉದ್ದೇಶಪೂರ್ವಕವಾಗಿ ಅಂತರ್ ಸಂಪರ್ಕ ನೀಡಿಲ್ಲ ಎಂದು ಟ್ರಾಯ್ ಸ್ಪಷ್ಟಿಸಿದೆ. ಪ್ರತಿ ಲೈಸೆನ್ಸ್ ಸರ್ವಿಸ್ ಏರಿಯಾಗೆ ರೂ.50 ಕೋಟಿ ದಂಡ ವಿಧಿಸಿದೆ.