ಐಫೋನ್ 7 ಮತ್ತು 7ಪ್ಲಸ್ ಕೊಳ್ಳುವವರಿಗೆ 30 ಸಾವಿರ ರೂಪಾಯಿಯಷ್ಟು ಏರ್'ಟೆಲ್ ಡೇಟಾ ಗಿಫ್ಟ್ ಆಗಿ ಸಿಗುತ್ತದೆ.
ನವದೆಹಲಿ(ಅ. 08): ಇದೀಗ ಬಿಡುಗಡೆಯಾಗುತ್ತಿರುವ ಐಫೋನ್ 7 ಮತ್ತು ಐಫೋನ್ 7ಪ್ಲಸ್ ಮೊಬೈಲ್ ಕೊಳ್ಳಬಯಸುವ ಏರ್'ಟೆಲ್ ಗ್ರಾಹಕರಿಗೆ ಬಂಪರ್ ಸುದ್ದಿ ಇದು. ಇವೆರಡರಲ್ಲಿ ಯಾವ ಮೊಬೈಲ್ ಕೊಂಡರೂ ಒಂದು ವರ್ಷದವರೆಗೆ ಡೇಟಾ ಸುಗ್ಗಿ ಸಿಗಲಿದೆ. ಪ್ರತೀ ತಿಂಗಳೂ 10ಜಿಬಿಯಷ್ಟು 4ಜಿ ಅಥವಾ 3ಜಿ ಡೇಟಾ ಉಚಿತವಾಗಿ ಸಿಗಲಿದೆ. ಆದರೆ, ಇದು ಏರ್'ಟೆಲ್'ನ ಪೋಸ್ಟ್'ಪೇಡ್ ಗ್ರಾಹಕರಿಗೆ ಮಾತ್ರವಾಗಿರುತ್ತದೆ. ಏರ್'ಟೆಲ್ ಒದಗಿಸುತ್ತಿರುವ ಈ ಉಚಿತ ಡೇಟಾದ ಒಟ್ಟು ಮೌಲ್ಯ 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಂದರೆ, ಐಫೋನ್ 7 ಮತ್ತು 7ಪ್ಲಸ್ ಕೊಳ್ಳುವವರಿಗೆ 30 ಸಾವಿರ ರೂಪಾಯಿಯಷ್ಟು ಏರ್'ಟೆಲ್ ಡೇಟಾ ಗಿಫ್ಟ್ ಆಗಿ ಸಿಗುತ್ತದೆ.
