ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಂ ಕಂಪನಿಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಏರ್‌ಟೆಲ್ ಹೊಸ ಪ್ಲಾನ್ ಘೋಷಣೆ ಮಾಡಿಕೊಂಡಿದೆ. ಇದು ಹೆಚ್ಚು ದಿನದ ವ್ಯಾಲಿಡಿಟಿಯ ಪ್ಲಾನ್ ಇದಾಗಿದೆ.

ನವದೆಹಲಿ: ರಿಲಯನ್ಸ್ ಜಿಯೋ ತನ್ನ ಬಳಕೆದಾರರನ್ನು ಉಳಿಸಿಕೊಳ್ಳುವದರ ಜೊತೆಯಲ್ಲಿ ಹೊಸ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಬೆಲೆ ಏರಿಕೆ ಬಳಿಕ ರಿಲಯನ್ಸ್ ಜಿಯೋ ಹೊಸ ಆಫರ್‌ಗಳನ್ನು ಪರಿಚಯಿಸುತ್ತಿದೆ. ಇದರ ಬೆನ್ನಲ್ಲೇ ಏರ್‌ಟೆಲ್ ಹೊಸ ಆಫರ್‌ ಘೋಷಣೆ ಮಾಡಿಕೊಳ್ಳುತ್ತಿದೆ. ನೀವೂ ಏರ್‌ಟೆಲ್ ಗ್ರಾಹಕರೇ ಇದು ನಿಮಗೆ ಅತಿದೊಡ್ಡ ಸುದ್ದಿಯಾಗಿದೆ. ಇದೀಗ ಕಂಪನಿ ತನ್ನ ರೀಚಾರ್ಜ್‌ ಪ್ಲಾನ್‌ನಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ಈ ಹೊಸ ಪ್ಲಾನ್‌ನಲ್ಲಿ ಹಲವು ಆಫರ್‌ಗಳನ್ನು ನೀಡಲಾಗಿದೆ. ಈ ರೀಚಾರ್ಜ್‌ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್ ಸಹಿತ ಡೇಟಾ ಸಹ ಲಭ್ಯವಾಗುತ್ತದೆ. ಈ ರೀಚಾರ್ಜ್ ಪ್ಲಾನ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

155 ರೂಪಾಯಿ ರೀಚಾರ್ಜ್ ಪ್ಲಾನ್

ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ರೀಚಾರ್ಜ್ ಪ್ಲಾನ್ ಅನೌನ್ಸ್ ಮಾಡಿದೆ. ನೀವು 155 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಪ್ರತಿದಿನ ಜಿಬಿ ಡೇಟಾ ಜೊತೆ 300 ಉಚಿತ ಎಸ್‌ಎಂಎಸ್ ಕಳುಹಿಸುವ ಸೌಲಭ್ಯ ಸಿಗಲಿದೆ. ಕಡಿಮೆ ಬೆಲೆಗೆ ದೀರ್ಘಾವಧಿಯ ಪ್ಲಾನ್ ಹುಡುಕುತ್ತಿರುವ ಬಳಕೆದಾರರಿಗೆ ಈ ಯೋಜನೆ ವರದಾನವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಕಡಿಮೆ ಇಂಟರ್‌ನೆಟ್‌ ಬಳಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. 

ಮುಕೇಶ್ ಅಂಬಾನಿ ರಚಿಸಿದ ರಣವ್ಯೂಹದಲ್ಲಿ ಏರ್‌ಟೈಲ್? ತನ್ನ ಎದುರಾಳಿಗೆ ಟಕ್ಕರ್ ಕೊಟ್ಟ ಜಿಯೋ!

999 ರೂಪಾಯಿ ರೀಚಾರ್ಜ್ ಪ್ಲಾನ್ 

155 ರೂಪಾಯಿ ಜೊತೆಯಲ್ಲಿ 999 ರೂ.ಯ ಹೊಸ ಪ್ಲಾನ್‌ ಪರಿಚಯಿಸಲಾಗಿದೆ. ನೀವು 999 ರೂಪಾಯಿ ರೀಚಾರ್ಜ್ ಮಾಡಿಕೊಳ್ಳುವ ಪ್ಲಾನ್‌ 84 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಅನ್‌ಲಿಮಿಟೆಡ್ ಕಾಲ್, ಮೂರು ತಿಂಗಳ ಅಮೇಜಾನ್ ಪ್ರೈಮ್ ವಿಡಿಯೋ ಸಬ್‌ಸ್ಟ್ರಿಪ್ಷನ್ ಸಿಗಲಿದೆ. ಇದರ ಜೊತೆಯಲ್ಲಿ ಏರ್‌ಟೆಲ್ ಎಕ್ಸ್‌ಟ್ರೀಮ್ ಮೊಬೈಲ್ ಪ್ಯಾಕ್ ಸಹ ಲಭ್ಯವಾಗಲಿದೆ. 

3359 ರೂಪಾಯಿಯ ರೀಚಾರ್ಜ್ ಪ್ಲಾನ್ 

ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ದೀರ್ಘಾವಧಿಯ 3,359 ರೂಪಾಯಿಯ ರೀಚಾರ್ಜ್ ಪ್ಲಾನ್ ಘೋಷಣೆ ಮಾಡಲಾಗಿದೆ. ಈ ಪ್ಲಾನ್ ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನ ನಿಮಗೆ 2.5 ಜಿಬಿ ಡೇಟಾ ಜೊತೆ 100 ಉಚಿತವಾಗಿ ಎಸ್‌ಎಂಎಸ್ ಕಳುಹಿಸಬಹುದು. ಇದೆಲ್ಲಾದರ ಜೊತೆಯಲ್ಲಿ ಹೆಚ್ಚುವರಿಯಾಗಿ ಹಲವು ಲಾಭಗಳು ಗ್ರಾಹಕರಿಗೆ ಸಿಗಲಿವೆ. 5ಜಿ ಡೇಟಾ ಜೊತೆಯಲ್ಲಿ ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಯಾಕ್ ಆಕ್ಟಿವೇಟ್ ಆಗುತ್ತದೆ. ವಿಂಕ್ ಮ್ಯೂಸಿಕ್‌ ನಲ್ಲಿ ಉಚಿತವಾಗಿ ಹಾಡುಗಳನ್ನು ಕೇಳಬಹುದಾಗಿದೆ. 

ಏರ್‌ಟೈಲ್, ವೊಡಾಫೋನ್ ಐಡಿಯಾಗೆ ಚೆಕ್‌ಮೇಟ್ ಕೊಟ್ಟ ರಿಲಯನ್ಸ್ ಜಿಯೋದ ಡೇಟಾ ಬೂಸ್ಟರ್ ಪ್ಲಾನ್