Asianet Suvarna News Asianet Suvarna News

ಏರ್‌ಟೈಲ್, ವೊಡಾಫೋನ್ ಐಡಿಯಾಗೆ ಚೆಕ್‌ಮೇಟ್ ಕೊಟ್ಟ ರಿಲಯನ್ಸ್ ಜಿಯೋದ ಡೇಟಾ ಬೂಸ್ಟರ್ ಪ್ಲಾನ್

ಅತ್ಯಧಿಕ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ ಹೊಸ ಮಾರುಕಟ್ಟೆ ತಂತ್ರಕ್ಕೆ ಮುಂದಾದಂತೆ ಕಾಣಿಸುತ್ತಿದೆ. ಬೆಲೆ ಏರಿಕೆ ಮಾಡಿಕೊಂಡರೂ ಎದುರಾಳಿಗಳಿಗೆ ಶಾಕ್ ಕೊಡುತ್ತಿದೆ. ಜಿಯೋ ಮಾಡಿರುವ ಹೊಸ ತಂತ್ರ ಏನು?

Reliance Jio data booster plan  gave shock to airtel and vodaphone idea mrq
Author
First Published Aug 22, 2024, 1:24 PM IST | Last Updated Aug 22, 2024, 1:24 PM IST

ಮುಂಬೈ: ಮುಕೇಶ್ ಅಂಬಾನಿಯವರ  ರಿಲಯನ್ಸ್ ಜಿಯೋ ದೇಶದಲ್ಲಿಯೇ ಅತ್ಯುನ್ನತ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳನ್ನು ಘೋಷಣೆ ಮಾಡುವ ಮೂಲಕ ಎದುರಾಳಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಜಿಯೋ ಟೆಲಿಕಾಂ ಕಂಪನಿ ತನ್ನ ಕಡಿಮೆ ಬೆಲೆಯ ಆಫರ್‌ಗಳನ್ನು ನೀಡುವ ಮೂಲಕ ಕೆಳ ಮತ್ತು ಮಧ್ಯಮ ವರ್ಗದ ಜನತೆಗೆ ಹತ್ತಿರವಾಗಲು ಪ್ರಯತ್ನಿಸುತ್ತಿದೆ. ಮೊದಲು ಬೆಲೆ ಏರಿಕೆ ಮಾಡಿ ನಂತರ ಹೊಸ ಹೊಸ ಆಫರ್‌ಗಳನ್ನು ಘೋಷಿಸುವ ಮೂಲಕ ಬಳಕೆದಾರರನ್ನು ತನ್ನತ್ತ ಆಕರ್ಷಿಸುವ ಕೆಲಸವನ್ನು ಜಿಯೋ ಹಂತ ಹಂತವಾಗಿ ಮಾಡುತ್ತಿದೆ. 

ಈ ಹಣಕಾಸಿನ ವರ್ಷದ ಆರಂಭದಲ್ಲಿಯೇ ಹಲವು ಸವಾಲುಗಳನ್ನು ಎದುರಿಸಿತು. ಜುಲೈ-2024ರಲ್ಲಿ ಟ್ಯಾರಿಫ್ ಬೆಲೆ ಏರಿಕೆ ಮಾಡಿದ್ದರಿಂದ ಇನ್ನುಳಿದ ಟೆಲಿಕಾಂ ಕಂಪನಿಗಳಾದ ವೊಡಾಫೋನ್, ಏರ್‌ಟೈಲ್ ಸಹ ತನ್ನ ಬೆಲೆಗಳನ್ನು ಹೆಚ್ಚಳ ಮಾಡಿಕೊಂಡವು. ಇದೆಲ್ಲಾದರ ಪರಿಣಾಮ ಬಿಎಸ್‌ಎನ್ಎಲ್ ಕಡಿಮೆಯ ಪ್ಲಾನ್ ಘೋಷಿಸಿ ಶಾಕ್ ನೀಡಿತು. ಆನಂತರ ಸೋಶಿಯಲ್ ಮೀಡಿಯಾದಲ್ಲಿ ಬಿಎಸ್‌ಎನ್‌ಎಲ್‌ ಗೆ ಹಿಂದಿರುಗಿ ಎಂಬ ರೀಲ್ಸ್, ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಯ್ತು. 

ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತ ಜಿಯೋ 5ಜಿ ಡೇಟಾ ಜೊತೆ ಕಡಿಮೆ ಬೆಲೆಯುಳ್ಳ ಹೆಚ್ಚು ವ್ಯಾಲಿಡಿಟಿಯ ಮತ್ತು ಅಧಿಕ ಆಫರ್‌  ರೀಚಾರ್ಜ್ ಪ್ಲಾನ್‌ಗಳನ್ನು ಘೋಷಣೆ ಮಾಡಲಾರಂಭಿಸಿದೆ. ಈ ಮೂಲಕ ಹೊಸ ಬಳಕೆದಾರರನ್ನು ಸೆಳೆಯುವ ತಂತ್ರಕ್ಕೆ ಜಿಯೋ ಮುಂದಾಗಿದೆ ಎಂಬ ಮಾತುಗಳು ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿವೆ.

ಇಂದು ಎಷ್ಟೇ ಡೇಟಾ ಪ್ಲಾನ್ ಇದ್ರೂ ಸಂಜೆ ವೇಳೆ ಖಾಲಿಯಾಗುತ್ತದೆ. ಹೆಚ್ಚುವರಿ ಡೇಟಾ ಪ್ಲಾನ್‌ಗಳು ಇಂದು 50 ರೂ.ವರಗೆ ತಲುಪಿವೆ. ಏರ್‌ಟೈಲ್ ಹೆಚ್ಚುವರಿ ಡೇಟಾ ಪ್ಲಾನ್ 22 ರೂ.ಗಳಿಂದ ಆರಂಭವಾಗುತ್ತದೆ. ಒಂದು ದಿನದ ವ್ಯಾಲಿಡಿಯ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 1 ಜಿಬಿ ಡೇಟಾ ಸಿಗುತ್ತದೆ. ಇದೀಗ ಈ ಯೋಜನೆಗೂ ಟಕ್ಕರ್ ನೀಡಿರುವ ಜಿಯೋ ಇದಕ್ಕಿಂತಲೂ ಕಡಿಮೆ ಬೆಲೆಯ ಪ್ಲಾನ್ ಬಿಡುಗಡೆಗೊಳಿಸಿದೆ. 

ರತನ್ ಟಾಟಾಗೆ ಮುಕೇಶ್ ಅಂಬಾನಿ ಸವಾಲು; Zudioಗೆ ಟಕ್ಕರ್ ಕೊಡುತ್ತಾ ರಿಲಯನ್ಸ್ ?

19 ರೂಪಾಯಿ ರೀಚಾರ್ಜ್ ಪ್ಲಾನ್ 
ರಿಯಲಯನ್ಸ್ ಜಿಯೋ ಡೇಟಾ ಬೂಸ್ಟರ್ ಪ್ಲಾನ್ ನಿಮಗೆ  19 ರೂಪಾಯಿಯಲ್ಲಿ ಸಿಗುತ್ತದೆ. 19 ರೂ. ರೀಚಾರ್ಜ್ ಮಾಡಿಸಿಕೊಂಡ್ರೆ ಒಂದು ದಿನದ ವ್ಯಾಲಿಡಿಟಿಗೆ 1 ಜಿಬಿ ಡೇಟಾ ಆಕ್ಟಿವೇಟ್ ಆಗುತ್ತದೆ. ಬೆಲೆ ಏರಿಕೆಗೂ ಮುನ್ನ ಇದೇ ಯೋಜನೆ 11 ಮತ್ತು 15 ರೂಪಾಯಿಗೆ ಸಿಗುತ್ತಿತ್ತು. ಸೂಕ್ಷ್ಮವಾಗಿ ಗಮನಿಸಿದರೆ ಈ ಪುಟ್ಟ ಪ್ಲಾನ್ ಮೇಲೆ ರಿಲಯನ್ಸ್ ಜಿಯೋ 4 ರೂಪಾಯಿ ಏರಿಕೆ ಮಾಡಿರೋದು  ಗೊತ್ತಾಗುತ್ತದೆ. 

29 ರೂಪಾಯಿ ರೀಚಾರ್ಜ್ ಪ್ಲಾನ್
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಬೂಸ್ಟರ್ ಪ್ಲಾನ್ ನೀಡುತ್ತದೆ. ಈ ಪ್ಲಾನ್‌ನಡಿಯಲ್ಲಿ 29 ರೂ. ರೀಚಾರ್ಜ್ ಮಾಡಿಕೊಂಡರೆ ನಿಮಗೆ 2 ಜಿಬಿ ಡೇಟಾ ಸಿಗುತ್ತದೆ. ಈ ಪ್ಲಾನ್ ಮೊದಲು 25 ರೂಪಾಯಿಗೆ ಸಿಗುತ್ತಿತ್ತು. ಇದೀಗ 4 ರೂ. ಏರಿಕೆಯಾಗಿದೆ. 
 
ಇತರೆ ಬೂಸ್ಟರ್ ಪ್ಲಾನ್ 
49 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಒಂದು  ದಿನಕ್ಕೆ ಅನ್‌ಲಿಮಿಟೆಡ್ ಡೇಟಾ ಸಿಗಲಿದೆ. 69 ರೂಪಾಯಿಗೆ 6 ಜಿಬಿ, 139 ರೂ.ಗೆ 12 ಜಿಬಿ ಡೇಟಾ ಬೇಸ್ ಪ್ಲಾನ್ ಜೊತೆ ಆಕ್ಟಿವೇಟ್ ಆಗುತ್ತದೆ.

ಎದುರಾಳಿ ಟೆಲಿಕಾಂ ಕಂಪನಿಗಳು ಶೇಕ್ ಆಗುವಂತಹ ಪ್ಲಾನ್ ಘೋಷಿಸಿದ ರಿಲಯನ್ಸ್ ಜಿಯೋ

Latest Videos
Follow Us:
Download App:
  • android
  • ios