Asianet Suvarna News Asianet Suvarna News

5G Launch In India: ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಸೇವೆ, ಲಿಸ್ಟ್‌ನಲ್ಲಿದ್ಯಾ ಬೆಂಗಳೂರು?

ದೇಶದಲ್ಲಿ 5ಜಿ ಸೇವೆಯ ಮೂಲಕ ಡಿಜಿಟಲ್‌ ಕ್ರಾಂತಿಯನ್ನು ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಂತಾಗಿದೆ. ಶನಿವಾರ ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ ಉದ್ಘಾಟನೆಯನ್ನು 5ಜಿ ಸೇವೆಯನ್ನು ದೇಶಕ್ಕೆ ಲೋಕಾರ್ಪಣೆ ಮಾಡುವ ಮೂಲಕ ಮಾಡಿದರು. ಮೊದಲ ಹಂತದಲ್ಲಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ.

5G Launch In India telecom companies roll out in 13 cities Bengaluru also in the list san
Author
First Published Oct 1, 2022, 11:40 AM IST

ನವದೆಹಲಿ (ಅ. 1): ದೇಶದಲ್ಲಿ5 ಜಿ ಯುಗ ಆರಂಭವಾಗಿದೆ. ಇದರ ಬೆನ್ನಲ್ಲಿಯೇ ಹಲವಾರು ಪ್ರಶ್ನೆಗಳೂ ಆರಂಭವಾಗಿದೆ. 4ಜಿ ಮೊಬೈಲ್‌ನಲ್ಲಿ 5ಜಿ ಬರುತ್ತಾ?, ಮೊಬೈಲ್‌ ಕಂಪನಿಗಳು 5ಜಿ ಸೇವೆಗೆ ವಿಧಿಸುವ ಚಾರ್ಜ್‌ ಎಷ್ಟು? ಯಾವೆಲ್ಲಾ ನಗರಗಳಲ್ಲಿ ಮೊದಲ ಹಂತದಲ್ಲಿ 5ಜಿ ಸೇವೆ ಆರಂಭವಾಗಲಿದೆ ಎನ್ನುವ ಕುತೂಹಲ ಆರಂಭವಾಗಿದೆ. ಪ್ರಗತಿ ಮೈದಾನದಲ್ಲಿ 5ಜಿ ಸೇವೆಯನ್ನು ಅನಾವರಣ ಮಾಡಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿವಿಧ ವಿಭಾಗಗಳಲ್ಲಿ 5ಜಿ ಸೇವೆ ಯಾವ ರೀತಿ ಕಾರ್ಯ ನಿರ್ವಹಿಸಲಿದೆ ಎನ್ನುವ ಡೆಮೋಅನ್ನೂ ಪಡೆದುಕೊಂಡರು.  ವಿಡಿಯೋಗೇಮಿಂಗ್‌, ವರ್ಚುವಲ್‌ ರಿಯಾಲಿಟಿ, ಕೃತಕಬುದ್ಧಿಮತ್ತೆ, ಕನೆಕ್ಟಿವಿಟಿ ವಿಭಾಗದಲ್ಲಿ 5ಜಿ ಸೇವೆ ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂದು ದೇಶದ ಟೆಲಿಕಾಂ ಕಂಪನಿಗಳು ಪ್ರಧಾನಿ ಮೋದಿಗೆ ತೋರಿಸಿದವು. 4ಜಿಗಿಂತ 10 ಪಟ್ಟು ವೇಗದಲ್ಲಿ 5ಜಿ ಸೇವೆ ಇರಲಿದ್ದು, ಇದರಿಂದ ದೇಶದ ಟೆಲಿಕಾಂ ಸೇರಿದಂತೆ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗುವುದು ನಿಶ್ಚಯವಾಗಿದೆ. ಹಾಗಂತ, 5ಜಿ ಒಂದೇ ಬಾರಿಗೆ ದೇಶದ ಎಲ್ಲೆಡೆ ಆರಂಭವಾಗುವುದಿಲ್ಲ. ಮೊದಲ ಹಂತದಲ್ಲಿದೇಶದ 13 ಪ್ರಮುಖ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭ ಮಾಡುವುದಾಗಿ ಟೆಲಿಕಾಂ ಕಂಪನಿಗಳು ಘೋಷಣೆ ಮಾಡಿವೆ.

ಮೊದಲ ಹಂತದಲ್ಲಿ 13 ನಗರದಲ್ಲಿ ಆರಂಭ: ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ. ಬೆಂಗಳೂರು ಸೇರಿದಂತೆ, ದೆಹಲಿ, ಮುಂಬೈ, ಚೆನ್ನೈ,ಕೋಲ್ಕತ್ತಾ, ಚಂಡೀಗಢ,  ಗುರುಗ್ರಾಮ, ಹೈದರಾಬಾದ್‌, ಲಕ್ನೋ, ಪುಣೆ, ಗಾಂಧಿನಗರ, ಅಹಮದಾಬಾದ್‌ ಹಾಗೂ ಜಾಮ್‌ನಗರದಲ್ಲಿ ಸೇವೆ ಆರಂಭಿಸುವುದಾಗಿ ಕಂಪನಿಗಳು ತಿಳಿಸಿವೆ.

ಹೆಚ್ಚಲಿದೆಯೇ ಮೊಬೈಲ್‌ ರಿಚಾರ್ಜ್‌ ವೆಚ್ಚ: 5ಜಿ ಸೇವೆ ಆರಂಭವಾಗುವುದರೊಂದಿಗೆ, ಇದರ ರಿಚಾರ್ಜ್‌ ವಿಚಾರದಲ್ಲೂ ಪ್ರಶ್ನೆಗಳು ಆರಂಭವಾಗಲಿದೆ. ಈಗಿರುವ 4ಜಿ ಸೇವೆಗಳಿಗೆ ಇರುವ ಚಾರ್ಜ್‌ಗಿಂತ ಹೆಚ್ಚಿನ ಚಾರ್ಜ್‌ 5ಜಿ ಸೇವೆ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ವೊಡಾಫೋನ್ ಐಡಿಯಾ (ವಿಐಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದರ್ ಟಕ್ಕರ್, ಕಂಪನಿಯು ಸ್ಪೆಕ್ಟ್ರಮ್ ಸ್ವಾಧೀನಪಡಿಸಿಕೊಳ್ಳಲು ಗಮನಾರ್ಹ ಮೊತ್ತವನ್ನು ಖರ್ಚು ಮಾಡಿರುವುದರಿಂದ, 5G ಸೇವೆಗಳಿಗೆ ಪ್ರೀಮಿಯಂ ವಿಧಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದರು. ವೊಡಾಫೋನ್‌ ಐಡಿಯಾ ಲಿಮಿಟೆಡ್‌ 18,800 ಕೋಟಿ ಮೌಲ್ಯದ ಸ್ಪೆಕ್ಟ್ರಮ್‌ ಅನ್ನು ಸ್ವಾಧೀನ ಮಾಡಿಕೊಂಡಿದೆ.  ಇದು 5G ಸೇವೆಗಳಿಗಾಗಿ 17 ಆದ್ಯತಾ ವಲಯಗಳಲ್ಲಿ ಮಧ್ಯ-ಬ್ಯಾಂಡ್ (3300 MHz ಬ್ಯಾಂಡ್) ಮತ್ತು 16 ವಲಯಗಳಲ್ಲಿ 26 GHz ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್‌ನಲ್ಲಿ ರೇಡಿಯೊವೇವ್‌ಗಳನ್ನು ಒಳಗೊಂಡಿದೆ.

ಏತನ್ಮಧ್ಯೆ, ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ತಮ್ಮ ಎಜಿಎಂ ಸಮಯದಲ್ಲಿ, 5G ಕೇವಲ ಗಣ್ಯರಿಗೆ ಸೀಮಿತವಾಗಿರಬಾರದು ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ. ಇದರರ್ಥ ಜಿಯೋದ 5G ದರಗಳು ಜನಸಾಮಾನ್ಯರಿಗೂ ಎಟುಕುವಂತಿರುತ್ತದೆ ಎಂದು ಹೇಳಲಾಗಿದೆ.

ಮೊಬೈಲ್‌ ಚೇಂಜ್‌ ಮಾಡ್ಬೇಕಾ: ಬಹುತೇಕ ಎಲ್ಲರ ಪ್ರಶ್ನೆ ಇದೇ ಇದೆ. 5ಜಿ ಸೇವೆ ಆರಂಭವಾಗಿದೆ. ಇದನ್ನು ಅನುಭವಿಸಲು 5ಜಿ ತಂತ್ರಜ್ಞಾನ ಇರುವ ಮೊಬೈಲ್‌ ಹಾಗೂ ಸಿಮ್‌ ಇರಬೇಕಾಗುತ್ತದೆ. ಇತ್ತೀಚಿನ ವರ್ಷಗಳ ಅಂದರೆ, 1 ರಿಂದ ಒಂದೂವರೆ ವರ್ಷಗಳಲ್ಲಿ ಖರೀದಿಸಿದ್ದ ಮೊಬೈಲ್‌ ಆಗಿದ್ದರೆ, ಅದರಲ್ಲಿ 5ಜಿ ತಂತ್ರಜ್ಞಾನ ಎನೇಬಲ್‌ ಆಗಿರಲಿದೆ. ಹಳೆಯ ಮೊಬೈಲ್‌ಗಳಲ್ಲಿ ಈ ತಂತ್ರಜ್ಞಾನ ಇದ್ದಿರುವುದಿಲ್ಲ. ಅದಕ್ಕಾಗಿ 5ಜಿ ತಂತ್ರಜ್ಞಾನ ಇರುವ ಮೊಬೈಲ್‌ಅನ್ನು ಖರೀದಿ ಮಾಡಬೇಕಾಗುತ್ತದೆ.

5G Launch In India: ಹಳೆಯದಾಯ್ತು 4ಜಿ, ಇನ್ನು 5ಜಿ ಯುಗ..!

5 ವರ್ಷಗಳಲ್ಲಿ 500 ದಶಲಕ್ಷ 5ಜಿ ಬಳಕೆದಾರರು: 5G ಇಂಟರ್ನೆಟ್ ಸೇವೆಯ ಪರಿಚಯದಿಂದಾಗಿ ಭಾರತದಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ. ಇದರಿಂದ ಜನರ ಕೆಲಸ ಸುಲಭವಾಗುವುದಲ್ಲದೆ ಮನರಂಜನೆ ಮತ್ತು ಸಂವಹನ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗಲಿದೆ. 5G ಗಾಗಿ ಕೆಲಸ ಮಾಡುವ ಕಂಪನಿಯಾದ ಎರಿಕ್ಸನ್, ಭಾರತದಲ್ಲಿ 5 ವರ್ಷಗಳಲ್ಲಿ 500 ದಶಲಕ್ಷಕ್ಕೂ ಹೆಚ್ಚು 5G ಇಂಟರ್ನೆಟ್ ಬಳಕೆದಾರರು ಇರುತ್ತಾರೆ ಎಂದು ಹೇಳಿದೆ.

ಅಕ್ಟೋಬರ್‌ 1 ರಂದು ಭಾರತದಲ್ಲಿ 5ಜಿ ಸೇವೆ ಆರಂಭ, ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಮೋದಿ ಅನಾವರಣ!

5 ಜಿ ಎಂದರೆ, ಫಿಫ್ತ್‌ ಜನರೇಷನ್‌ ಇಂಟರ್ನೆಟ್‌: ಫಿಫ್ತ್‌ ಜನರೇಷನ್‌ ಇಂಟರ್ನೆಟ್‌ ಅಥವಾ ಐದನೇ ಯುಗದ ಇಂಟರ್ನೆಟ್‌ ಸೇವೆಗೆಗಳಿಗೆ 5ಜಿ ಎನ್ನುತ್ತಾರೆ. ಇದು ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯಾಗಿದ್ದು, ಅಲೆಗಳ ಮೂಲಕ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ. ಇದರಲ್ಲಿ ಮುಖ್ಯವಾಗಿ ಮೂರು ರೀತಿಯ ಫ್ರೀಕ್ವೆನ್ಸಿ ಬ್ಯಾಂಡ್ ಗಳಿವೆ.

- ಲೋ ಫ್ರೀಕ್ವೆನ್ಸಿ ಬ್ಯಾಂಡ್: ಏರಿಯಾ ಕವರೇಜ್‌ನಲ್ಲಿ ಉತ್ತಮ. ಇಂಟರ್ನೆಟ್ ವೇಗ 100 Mbps, ಇಂಟರ್ನೆಟ್ ವೇಗ ಕಡಿಮೆ

- ಮಿಡ್ ಫ್ರೀಕ್ವೆನ್ಸಿ ಬ್ಯಾಂಡ್: ಕಡಿಮೆ ಬ್ಯಾಂಡ್ ಮೇಲೆ 1.5 Gbps ಇಂಟರ್ನೆಟ್ ವೇಗ, ಕಡಿಮೆ ಆವರ್ತನ ಬ್ಯಾಂಡ್‌ಗಿಂತ ಕಡಿಮೆ ಪ್ರದೇಶದ ಕವರೇಜ್, ಸಿಗ್ನಲ್ ವಿಷಯದಲ್ಲಿ ಉತ್ತಮ

- ಹೈ ಫ್ರೀಕ್ವೆನ್ಸ್‌ ಬ್ಯಾಂಡ್ - ಇಂಟರ್ನೆಟ್ ವೇಗ ಗರಿಷ್ಠ 20 Gbps, ಕಡಿಮೆ ಪ್ರದೇಶ ಕವರ್, ಸಿಗ್ನಲ್ ವಿಷಯದಲ್ಲಿಯೂ ಉತ್ತಮವಾಗಿದೆ

Follow Us:
Download App:
  • android
  • ios