Asianet Suvarna News Asianet Suvarna News

ರಿಲಯನ್ಸ್ ಜಿಯೋ ದೀಪಾವಳಿ 100% ಕ್ಯಾಷ್ ಬ್ಯಾಕ್ ಆಫರ್: 10 ವಿಷಯ ತಿಳಿದಿರಲಿ

ಹಬ್ಬದ ಸೀಸನ್ ಬಂತೆಂದರೆ ಎಲ್ಲೂ ನೋಡಿದರೂ ಆಫರ್‌ಗಳು. ದಿನಬಳಕೆಯ ವಸ್ತುಗಳಿಂದ ಹಿಡಿದು ಕಾರ್‌ಗಳವರೆಗೆ ಡಿಸ್ಕೌಂಟ್ ಸೇಲ್ ಸರ್ವೇಸಾಮಾನ್ಯ. ಗ್ರಾಹಕರಿಗೆ ಆಫರ್ ನೀಡುವಲ್ಲಿ ಟೆಲಿಕಾಂ ಕಂಪನಿಗಳೂ ಹಿಂದೆ ಬಿದ್ದಿಲ್ಲ. 
 

10 things to know About Reliance Jio Diwali 100 percent cashback offer
Author
Bengaluru, First Published Oct 19, 2018, 7:16 PM IST
  • Facebook
  • Twitter
  • Whatsapp

ಇದೀಗ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಏನಿದು ಆಫರ್? ಗ್ರಾಹಕರು ತಿಳಿದುಕೊಳ್ಳಬೇಕಾದ 10 ವಿಷಯಗಳು ಇಲ್ಲಿವೆ.

1. ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ದೀಪಾವಾಳಿ 100% ಕ್ಯಾಷ್ ಬ್ಯಾಕ್ ಆಫರ್ ಪ್ರಕಟಿಸಿದೆ. ₹149ರಿಂದ ಆರಂಭಿಸಿ ₹9999ರ ವರೆಗಿನ ಪ್ಲಾನ್ ಗಳಿಗೆ ಈ ಆಫರ್ ಅನ್ವಯವಾಗುತ್ತದೆ!

2. ₹149 ಕ್ಕಿಂತ ಮೇಲ್ಪಟ್ಟ ಎಲ್ಲಾ ರಿಚಾರ್ಜ್ ಗಳಿಗೂ ಈ ಕ್ಯಾಷ್ ಬ್ಯಾಕ್ ಆಫರ್  ಅನ್ವಯವಾಗುತ್ತದೆ. ₹149, ₹198, ₹299, ₹349, ₹398, ₹399, ₹448, ₹449, ₹498, ₹509, ₹799, ₹999, ₹1999, ₹4999 ಹಾಗೂ ₹9,999 ರೀಚಾರ್ಜ್ ಗಳಿಗೆ ಹೊಸ ಆಫರ್ ಅನ್ವಯವಾಗುತ್ತದೆ.

3. ಈ ಮೇಲಿನ ಮೊತ್ತ ರೀಚಾರ್ಜ್ ಮಾಡುವ ಗ್ರಾಹಕರಿಗೆ ಕೂಪನ್ ರೂಪದಲ್ಲಿ 100% ಕ್ಯಾಷ್ ಬ್ಯಾಕ್ ಆಫರ್ ಸಿಗಲಿದೆ.  ಮೈಜಿಯೋ ಆ್ಯಪ್‌ನ ಮೈಕೂಪನ್ ವಿಭಾಗದಲ್ಲಿ ಇದು ಜಮೆಯಾಗುತ್ತದೆ.

BSNLನಿಂದ ಭರ್ಜರಿ ದಸರಾ ಆಫರ್; ಜಿಯೋ-ಏರ್‌ಟೆಲ್‌ಗೆ ಸೆಡ್ಡು!

4. ಗ್ರಾಹಕರು ಎಷ್ಟು ರೀಚಾರ್ಜ್ ಮಾಡುತ್ತಾರೋ ಅಷ್ಟೇ ಮೊತ್ತದ ಕೂಪನ್ ಅವರಿಗೆ ಸಿಗಲಿದೆ. ಉದಾಹರಣೆಗೆ ₹149ರ ರೀಚಾರ್ಜ್ ಮಾಡಿಸಿದರೆ ಅಷ್ಟೇ ಮೌಲ್ಯದ ಕೂಪನ್ ಅವರಿಗೆ ಸಿಗುತ್ತದೆ.

5. ಈ ಆಫರ್ ಒಂದು ರೀಚಾರ್ಜ್‌ಗೆ ಸೀಮಿತವಲ್ಲ. ಒಂದಕ್ಕಿಂತ ಹೆಚ್ಚು ಬಾರಿ ರೀಚಾರ್ಜ್ ಮಾಡಿದರೂ ಕೂಡಾ ಈ ಆಫರ್ ಸಿಗಲಿದೆ. ಎಷ್ಟು ಬಾರಿ ರೀಚಾರ್ಜ್ ಮಾಡುತ್ತೀರೋ, ಅದಕ್ಕೆ ಸರಿಯಾದ ಮೌಲ್ಯದ ಅಷ್ಟು ಕೂಪನ್  ಪಡೆಯಬಹುದು.

6. ಅಂದಹಾಗೆ, ಈ ಆಫರ್ ಕೇವಲ ಹಳೆಯ ಗ್ರಾಹಕರಿಗೆ ಮಾತ್ರವಲ್ಲ, ಹೊಸ ಗ್ರಾಹಕರಿಗೂ ಸಿಗುತ್ತೆ.

7. ಆದರೆ, ಈ ಆಫರ್ ಕೇವಲ ಪ್ರೀಪೇಯ್ಡ್ ಗ್ರಾಹಕರಿಗೆ ಮಾತ್ರ! ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಇದು ಅನ್ವಯವಾಗಲ್ಲ.

ಆಧಾರ್ ಮೂಲಕ ಪಡೆದ ಸಿಮ್ ಕಾರ್ಡ್ ಡಿಸ್‌ಕನೆಕ್ಟ್ ಆಗುತ್ತಾ?

8. ಪಡೆದ ಕೂಪನ್‌ಗಳನ್ನು ಗ್ರಾಹಕರು ರಿಲಯನ್ಸ್ ಡಿಜಿಟಲ್ ಅಥವಾ ಮೈ ಜಿಯೋ ಖರೀದಿಯಲ್ಲಿ ರೀಡೀಮ್ ಮಾಡಬೇಕು. ಈ ಕೂಪನ್ ಖರೀದಿ ಮೌಲ್ಯ ₹5000ಕ್ಕಿಂತ ಹೆಚ್ಚಿದ್ದರೆ, ಈ ಕೂಪನ್ ಅನ್ವಯವಾಗುತ್ತದೆ.

9. ನವಂಬರ್ 30ರ ವರೆಗೆ ಈ ಆಫರ್ ಜಾರಿಯಲ್ಲಿರುತ್ತದೆ.

10. ಈ ಅವಧಿಯಲ್ಲಿ ಪಡೆದ ಕೂಪನ್ ಗಳನ್ನು 31 ಡಿಸೆಂಬರ್ 2018ರೊಳಗೆ ರೀಡೀಮ್ ಮಾಡಿಕೊಳ್ಳಬೇಕು.

Follow Us:
Download App:
  • android
  • ios