ಹಬ್ಬದ ಸೀಸನ್. ಎಲ್ಲಿ ನೋಡಿದರೂ ಆಫರ್‌ಗಳು. ಟೆಲಿಕಾಂ ಸಂಸ್ಥೆಗಳೂ ಗ್ರಾಹಕರಿಗೆ ಆಫರ್ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಬಿಎಸ್‌ಎನ್‌ಎಲ್‌ನಿಂದ ಕೂಡಾ ಗ್ರಾಹಕರಿಗೆ ಆಕರ್ಷಕ ಆಫರ್. ಇಲ್ಲಿದೆ ವಿವರ...
ದಸರಾ ಹಬ್ಬದ ಪ್ರಯುಕ್ತ ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್ ತನ್ನ ಮೊಬೈಲ್ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಪ್ರಕಟಿಸಿದೆ. ಹಬ್ಬದ ಪ್ರಯುಕ್ತ ಪ್ರೀಪೆಯ್ಡ್ ಗ್ರಾಹಕರಿಗೆ ವಿಶೇಷ ಟ್ಯಾರಿಫ್ ವೋಚರ್‌ಗಳನ್ನು ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿದೆ.
ಕೇವಲ ರೂ.78 ಕ್ಕೆ ಲಭ್ಯವಿರುವ ಈ ಪ್ಯಾಕ್ ಅ. 15ರಿಂದ ನಿಯಮಿತ ಅವಧಿಗೆ ದೇಶಾದ್ಯಂತ ಲಭ್ಯವಿದೆ. ಲಿಮಿಟೆಡ್ ಅವಧಿಯ ಆಫರ್ ಆಗಿರುವುದರಿಂದ ಇದು ವಿಶೇಷ ಪ್ರಯೋಜನಗಳನ್ನು ಹೊಂದಿದೆ.
ಈ ಪ್ಯಾಕ್ ರಿಚಾರ್ಜ್ ಮಾಡಿಕೊಂಡಲ್ಲಿ, ಯಾವುದೇ ನೆಟ್ವರ್ಕ್‌ಗೆ ಅನಿಯಮಿತ ವಾಯ್ಸ್ ಕಾಲ್ ಮಾಡಬಹುದಾಗಿದೆ. ಅಲ್ಲದೇ, ಪ್ರತಿದಿನ 2 ಜಿಬಿ ಹೈಸ್ಪೀಡ್ ಡೇಟಾ ಕೂಡಾ ಸಿಗಲಿದೆ. ಗ್ರಾಹಕರು ಅನ್‌ಲಿಮಿಟೆಡ್ ವಿಡಿಯೋ ಕಾಲ್ ಕೂಡಾ ಮಾಡಬಹುದಾಗಿದೆ. ಡೇಟಾದ ಗರಿಷ್ಠ ಮಿತಿ ಬಳಕೆಯಾದ ನಂತರ, ಇಂಟರ್ನೆಟ್ ಸ್ಪೀಡ್ 80 ಕೆಬಿಪಿಎಸ್ ಆಗಿರಲಿದೆ. ಈ ಪ್ಯಾಕ್‌ನ ಅವಧಿ 10 ದಿನಗಳು ಆಗಿರುವುದರಿಂದ, ಗ್ರಾಹಕರು 20 ಜಿಬಿ ಡೇಟಾವನ್ನು ಪಡೆಯಬಹುದು.
ಜಿಯೋ, ಏರ್‌ಟೆಲ್, ವೊಡಾಫೋನ್‌ಗೆ ಸೆಡ್ಡು ಹೊಡೆಯಲೆಂದೇ ಪರಿಚಯಿಸಿದಂತಿರುವ ಈ ಪ್ಯಾಕ್‌ನ ಪ್ರಯೋಜನ ಪಡೆಯಬಯಸುವವರು, ರೂ. 78 ರೀಚಾರ್ಜ್ ಮಾಡಬಹುದು ಅಥವಾ STV COMBO78 ಟೈಪ್ ಮಾಡಿ 123ಗೂ ಕಳುಹಿಸಬಹುದು.
